ಧೋನಿ ಫಾರ್ಮ್ ಹೌಸ್‌ನಲ್ಲಿ ಬೆಳೆದ ತರಕಾರಿಗಳಿಗೆ ಅರಬ್ ನೆಲದಲ್ಲಿ ಭಾರಿ ಡಿಮ್ಯಾಂಡ್..!

ರಾಂಚಿ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಬಿಡುವಿನ ವೇಳೆ ಬಹುತೇಕ ಸಮಯವನ್ನು ಜಾರ್ಖಂಡ್ ರಾಜಧಾನಿ ರಾಂಚಿ ಹೊರವಲಯದಲ್ಲಿರುವ ತಮ್ಮ ಫಾರ್ಮ್ ಹೌಸ್‌ನಲ್ಲೇ ಕಾಲಕಳೆಯುತ್ತಾರೆ. ಸಾವಯವ ಕೃಷಿಗೆ ಒತ್ತು ನೀಡುತ್ತಿರುವ ಧೋನಿ, ವಿವಿಧ ತರಕಾರಿ, ಹಣ್ಣುಗಳನ್ನು ತಮ್ಮ ಫಾರ್ಮ್ ಹೌಸ್‌ನಲ್ಲಿ ಬೆಳೆದಿದ್ದಾರೆ. ಫಾರ್ಮ್ ಹೌಸ್‌ನಲ್ಲಿ ಬೆಳೆದಿರುವ ತರಕಾರಿಗಳನ್ನು ಧೋನಿ ದೂರದ ದುಬೈಗೆ ರಫ್ತು ಮಾಡುತ್ತಿದ್ದಾರೆ. ಸ್ವತಃ ಜಾರ್ಖಂಡ್ ಕೃಷಿ ಇಲಾಖೆಯೇ ದುಬೈಗೆ ಕಳುಹಿಸಿಕೊಡುವ ಜವಾಬ್ದಾರಿ ಹೊತ್ತುಕೊಂಡಿದೆ. ಇದನ್ನೂ ಓದಿ: 14ನೇ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಕಣಕ್ಕಿಳಿಯಲ್ಲ … Continue reading ಧೋನಿ ಫಾರ್ಮ್ ಹೌಸ್‌ನಲ್ಲಿ ಬೆಳೆದ ತರಕಾರಿಗಳಿಗೆ ಅರಬ್ ನೆಲದಲ್ಲಿ ಭಾರಿ ಡಿಮ್ಯಾಂಡ್..!