ಫುಟ್‌ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ನಿಶ್ಚಿತಾರ್ಥ?

ಲಂಡನ್: ಪೋರ್ಚುಗಲ್ ಮತ್ತು ಜುವೆಂಟಸ್ ಫುಟ್‌ಬಾಲ್ ತಂಡದ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ದೀರ್ಘಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವ ಬಗ್ಗೆ ಬಿಸಿಬಿಸಿ ಸುದ್ದಿಗಳು ಹರಿದಾಡುತ್ತಿವೆ. ಇನ್‌ಸ್ಟಾಗ್ರಾಂನಲ್ಲಿ ಇವರಿಬ್ಬರು ಹಾಕಿರುವ ಒಂದೇ ರೀತಿಯ ಪೋಸ್ಟ್ ಇಂಥ ಊಹಾಪೋಹಗಳು ಹರಿದಾಡಲು ಕಾರಣವಾಗಿವೆ. ಇಬ್ಬರೂ ಜತೆಯಾಗಿ ಪೋಸ್ ನೀಡಿರುವ ಚಿತ್ರದಲ್ಲಿ ಇಬ್ಬರೂ ಪ್ರಶ್ನೆ ಮತ್ತು ಉತ್ತರ ನೀಡಿದ್ದಾರೆ. ಶನಿವಾರ ಹಂಚಿಕೊಂಡಿರುವ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ರೊನಾಲ್ಡೊ, ‘ಮೀ ಅಮೋರ್’ ಅಂದರೆ ‘ನನ್ನ ಲವ್’ ಎಂದು ಬರೆದು ಹೃದಯದ ಇಮೋಜಿ ಪ್ರಕಟಿಸಿದ್ದಾರೆ. … Continue reading ಫುಟ್‌ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ನಿಶ್ಚಿತಾರ್ಥ?