ಕಾಂಗ್ರೆಸ್ ಸಭೆಯಲ್ಲಿ ಜಟಾಪಟಿ: ಹಿರಿಯ ನಾಯಕರ ವಿರುದ್ಧ ಯುವ ಸಂಸದರ ಆಕ್ರೋಶ

ನವದೆಹಲಿ: ಕಾಂಗ್ರೆಸ್ ಸಂಸದರ ಜೊತೆ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ನಡೆಸಿದ್ದ ವರ್ಚುವಲ್ ಸಭೆ ಆಂತರಿಕ ಕಚ್ಚಾಟವನ್ನು ಮತ್ತೊಮ್ಮೆ ಬಯಲಿಗೆ ಬರುವಂತೆ ಮಾಡಿದೆ. ಯುವ ತಲೆಮಾರಿನ ನಾಯಕರು ಪಕ್ಷದ ನಾಯಕತ್ವದ ನಿಷ್ಕ್ರಿಯತೆಯನ್ನು ತರಾಟೆಗೆ ತೆಗೆದುಕೊಂಡರು. ಪಕ್ಷ ಇಂದು ಅಧೋಗತಿಗಿಳಿಯಲು ಮನಮೋಹನ್ ಸಿಂಗ್ ನೇತೃತ್ವದ ಎರಡನೆ ಅವಧಿಯ ಯುಪಿಎ ಸರ್ಕಾರದಲ್ಲಿದ್ದ ಪ್ರಮುಖರೇ ಕಾರಣ ಎಂದು ಕೆಲ ಯುವ ಸಂಸದರು ದೂರಿದರು. ಸಿಂಗ್ ಸರ್ಕಾರದಲ್ಲಿ ಸಚಿವರಾಗಿದ್ದವರು ಹಾಗೂ ರಾಹುಲ್ ಗಾಂಧಿ ತಂಡದಲ್ಲಿ ಗುರುತಿಸಿಕೊಂಡಿರುವ ನಾಯಕರ ಮಧ್ಯೆ ವಾಕ್ಸಮರವೇ ನಡೆಯಿತು … Continue reading ಕಾಂಗ್ರೆಸ್ ಸಭೆಯಲ್ಲಿ ಜಟಾಪಟಿ: ಹಿರಿಯ ನಾಯಕರ ವಿರುದ್ಧ ಯುವ ಸಂಸದರ ಆಕ್ರೋಶ