ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್​ಗೆ ಬಿಗ್ ಶಾಕ್; ಬಿಜೆಪಿ ಸೇರಿದ ಹಾಲಿ ಶಾಸಕ

ಜೈಪುರ: ಮುಂದಿನ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಆಡಳಿತರೂಢ ಕಾಂಗ್ರೆಸ್​ ಪಕ್ಷದ ಹಾಲಿ ಶಾಸಕ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಚುನಾವಣೆಯ ಹೊಸ್ತಿಲಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಒಂದನ್ನು ನೀಡಿದ್ದಾರೆ. ಧೋಲ್‌ಪುರದ ಬಾರಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಗಿರ್‌ರಾಜ್ ಮಾಲಿಂಗ ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದು, ಕಾಂಗ್ರೆಸ್​ನಲ್ಲಿ ಕೊಡಲಾಗುತ್ತಿದ್ದ ಕಿರುಕುಳ ತಾಳಲಾರದೆ ಬಿಜೆಪಿ ಸೇರ್ಪಡೆಯಾಗಿರುವುದಾಗಿ ತಿಳಿಸಿದ್ದಾರೆ. ಗಿರಿರಾಜ್​ ಜತೆಗೆ ಆಮ್​ ಆದ್ಮಿ ಪಕ್ಷದ ಯುವ ಘಟಕದ ಅಧ್ಯಕ್ಷ ಅನುರಾಗ್ ಸಿಂಗ್​ ಬ್ರಾರ್​ ಬಿಜೆಪಿ ಸೇರಿದ್ದಾರೆ. … Continue reading ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್​ಗೆ ಬಿಗ್ ಶಾಕ್; ಬಿಜೆಪಿ ಸೇರಿದ ಹಾಲಿ ಶಾಸಕ