ಸಿಆರ್‌ಪಿಎಫ್​ ಯೋಧನ ವಿರುದ್ಧ ಕೇಸು ದಾಖಲು ಪ್ರಕರಣ: ಸದಲಗಾ ಸಬ್ ಇನ್ಸ್​ಪೆಕ್ಟರ್​ ತಲೆದಂಡ

ಬೆಳಗಾವಿ: ಸಿಆರ್‌ಪಿಎಫ್​ ಯೋಧ ಸಚಿನ್ ಸಾವಂತ್​ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಕರ್ತವ್ಯ ಲೋಪ ಆರೋಪದಡಿ ಸದಲಗಾ ಸಬ್ ಇನ್ಸ್​ಪೆಕ್ಟರ್​ರನ್ನು ಅಮಾನತು ಮಾಡಲಾಗಿದೆ. ಯೋಧನ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನಲೆಯಲ್ಲಿ ಪಿಎಸ್ಐ ಅನಿಲ್​ ಕುಮಾರ್ ಸಸ್ಪೆಂಡ್ ಆಗಿರುವುದಾಗಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ತಿಳಿಸಿದರು. ಪ್ರಕರಣ ಕುರಿತು ತನಿಖೆ ಮುಂದುವರೆದಿದೆ ಎಂದರು. ಯೋಧ ಸಚಿನ್ ಬಿಡುಗಡೆಯಾದ ಬಳಿಕ ಆತನಿಂದ ಹೇಳಿಕೆ ಪಡೆದಿದ್ದು, ಪ್ರಾಥಮಿಕ ತನಿಖೆಯಲ್ಲಿ ಪಿಎಸ್ಐ ಅನಿಲ್​ಕುಮಾರ್ ಕರ್ತವ್ಯ ಲೋಪ ಕಂಡುಬಂದಿರುವುದರಿಂದ ಅಮಾನತು ಮಾಡಲಾಗಿದೆ ಎಂದು … Continue reading ಸಿಆರ್‌ಪಿಎಫ್​ ಯೋಧನ ವಿರುದ್ಧ ಕೇಸು ದಾಖಲು ಪ್ರಕರಣ: ಸದಲಗಾ ಸಬ್ ಇನ್ಸ್​ಪೆಕ್ಟರ್​ ತಲೆದಂಡ