ಡಂಗೂರ ಸಾರಿ ಕರೊನಾ ಲಸಿಕೆ ಬಗ್ಗೆ ಜಾಗೃತಿ

ಬೆಂಗಳೂರು: ಆಧುನಿಕ ಸಂಪರ್ಕ ಮಾಧ್ಯಮಗಳು ಹೆಚ್ಚಿದಂತೆ ಸಾಂಪ್ರದಾಯಿಕ ರೀತಿಗಳು ಮರೆತೇ ಹೋಗುವಂತಾಗಿವೆ. ನಗರ ಪ್ರದೇಶಗಳ ಜನರಂತೂ ವಾಟ್ಸಾಪ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲೇ ವಿಚಾರ ವಿನಿಮಯ ಮಾಡಿಕೊಳ್ಳುವುದು ಹೆಚ್ಚಿದೆ. ಈ ಸಂದರ್ಭದಲ್ಲೂ ಹಳ್ಳಿಗಳಲ್ಲಿ ರಾಜರ ಕಾಲದಿಂದಲೂ ನಡೆದುಬಂದಿರುವ ಡಂಗೂರ ಸಾರುವ ಪದ್ಧತಿ ಇನ್ನೂ ಬದುಕಿದೆ ಎನ್ನುವುದಕ್ಕೆ ನಿದರ್ಶನ ಇಲ್ಲಿದೆ. ಗದಗ ಜಿಲ್ಲೆಯ ಜಕ್ಕಲಿ ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಕರೊನಾ ಲಸಿಕೆ ಬಗ್ಗೆ ಜಾಗೃತಿ ಮೂಡಿಸುತ್ತಿರುವ ವಿಡಿಯೊ ತುಣುಕೊಂದನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ. … Continue reading ಡಂಗೂರ ಸಾರಿ ಕರೊನಾ ಲಸಿಕೆ ಬಗ್ಗೆ ಜಾಗೃತಿ