ಮತ್ತೊಬ್ಬ ಎಐಎಡಿಎಂಕೆ ನಾಯಕನ ವಿರುದ್ಧ ಅಸಮಾನ ಆಸ್ತಿ ಪ್ರಕರಣ

ಚೆನ್ನೈ: ತಮಿಳುನಾಡಿನ ಮಾಜಿ ಆರೋಗ್ಯ ಮಂತ್ರಿ ಹಾಗೂ ಎಐಎಡಿಎಂಕೆ ಶಾಸಕ ಸಿ.ವಿಜಯಭಾಸ್ಕರ್​ ಮತ್ತು ಅವರ ಪತ್ನಿಯ ವಿರುದ್ಧ ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ(ಡಿವಿಎಸಿ)ವು ಅಸಮಾನ ಆಸ್ತಿ ಪ್ರಕರಣ ದಾಖಲಿಸಿದೆ. 2016 ರಿಂದ 2021 ರವರೆಗಿನ ವೀರಲಿಮಲೈನ ಶಾಸಕರಾಗಿದ್ದ ಅವಧಿಯಲ್ಲಿ 27 ಕೋಟಿ ರೂಪಾಯಿಗೂ ಮೀರಿದ ಆಸ್ತಿಗಳನ್ನು ವಿಜಯಭಾಸ್ಕರ್​ ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಚೆನ್ನೈ, ಚೆಂಗಲ್ಪಟ್ಟು, ಕೊಯಮತ್ತೂರು, ತಿರುಚ್ಚಿ, ಪುದುಕೊಟ್ಟೈ ಮತ್ತು ಕಾಂಚೀಪುರಂನಲ್ಲಿರುವ ವಿಜಯಭಾಸ್ಕರ್​ ಮತ್ತು ಅವರ ಕುಟುಂಬಕ್ಕೆ ಸೇರಿದ 43 ಸ್ಥಳಗಳಲ್ಲಿ ಇಂದು ಡಿವಿಎಸಿ ಅಧಿಕಾರಿಗಳು ದಾಳಿ ನಡೆಸಿದರು. … Continue reading ಮತ್ತೊಬ್ಬ ಎಐಎಡಿಎಂಕೆ ನಾಯಕನ ವಿರುದ್ಧ ಅಸಮಾನ ಆಸ್ತಿ ಪ್ರಕರಣ