ವಿಜಯವಾಣಿ ಸುದ್ದಿ ಜಾಲ
ಕನ್ನಡದ ಕಿಸ್ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ನಟಿ ಶ್ರೀ ಲೀಲಾ, ಇಂದು ಟಾಲಿವುಡ್, ಕಾಲಿವುಡ್, ಬಾಲಿವುಡ್ನಲ್ಲಿ ಬಹು ಬೇಡಿಕೆಯ ನಟಿಯಾಗಿ ಉಳಿದುಕೊಂಡಿದ್ದಾರೆ. ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ
ಕೇವಲ 25 ವರ್ಷಕ್ಕೆ ಸಿನಿಮಾ ರಂಗದಲ್ಲಿ ಮಾತ್ರವಲ್ಲ. ತಮ್ಮ ವಿದ್ಯಾಭ್ಯಾಸ, ವೃತ್ತಿ ಜೀವನದಲ್ಲಿಯೂ ಸಾಧನೆಗೈದಿದ್ದಾರೆ. ಶ್ರೀ ಲೀಲಾ ಈಗ ನಟಿ ಮಾತ್ರವಲ್ಲ. ಡಾಕ್ಟರ್ ಸಹ ಹೌದು.
ಕಾರ್ತಿಕ್ ಆರ್ಯನ್ ಮುಖ್ಯ ಭೂಮಿಕೆಯ, ಅನುರಾಗ್ ಬಸ ನಿರ್ದೇಶನದ ರೊಮ್ಯಾಂಟಿಕ್, ಮ್ಯೂಸಿಕ್ ಬ್ಯಾಂಗ್ರೌಂಡ್ ಸಿನಿಮಾ 'ತು ಮೇರಿ ಜಿಂದಗಿ ಹೈ ನಟಿಸಲಿದ್ದಾರೆ. 2027 ಏ.30ರಂದು ರಿಲೀಸ್ ಆಗಲಿದೆ.
ಶ್ರೀ ಲೀಲಾ ಅವರು ರಜನಿಕಾಂತ್ ನಟನೆಯ ಧರ್ಮನ್, ಅಜಿತ್ ಕುಮಾರ್ ನಟನೆಯ AK64, ಧನುಷ್ ನಟನೆಯ ಓಂ ಸಿನಿಮಾದಲ್ಲಿ ಮಿಂಚಲಿದ್ದಾರೆ.
ಪರಾಸಕ್ತಿ, ಉಸ್ತಾದ್ ಭಗತ್ ಸಿಂಗ್, ರಾಬಿನ್ ಹುಡ್ ಇತ್ತೀಚೆಗೆ ರಿಲೀಸ್ ಆಗಿದ್ದ ಸಿನಿಮಾಗಳಾಗಿವೆ,. ಆದರೆ ಯಾವ ಸಿನಿಮಾಗಳು ಅಷ್ಟಾಗಿ ಹಿಟ್ ಕಂಡಿಲ್ಲ.
ನಟನೆ ಜೊತೆಗೆ ವ್ಯಾಸಂಗ ಮುಂದುವರೆಸಿ ಶ್ರೀ ಲೀಲಾ ಅವರು ಅಧಿಕೃತವಾಗಿ ವೈದ್ಯ ಪದವಿ ಪಡೆದುಕೊಂಡಿದ್ದಾರೆ.