ರಣಬಾಲಿಯಂತೆ ಪೋಸ್ ​ಕೊಟ್ಟ ಕ್ಯೂಟ್​ 'ಜಯಮ್ಮ'

ವಿಜಯವಾಣಿ ಸುದ್ದಿ ಜಾಲ

ರಣಬಾಲಿ ಸಿನಿಮಾ ಪ್ರಚಾರ ಕಾರ್ಯವನ್ನು ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಮ್​​ನಲ್ಲಿ ವಿಭಿನ್ನವಾಗಿ ಮಾಡಿದ್ದಾರೆ. ರಣಬಾಲಿಯಂತೆ ಪೋಸ್ಟ್​ಕೊಟ್ಟ ಕ್ಯೂಟ್​ ಜಯಮ್ಮ ಎನಿಸಿಕೊಂಡಿದ್ದಾರೆ

ಕಸೂತಿಯ ಬಾರ್ಡರ್​ ಹೊಂದಿದ ಬಿಳಿ ಸೀರೆ..ಅದಕ್ಕೆ ವರ್ಕಡ್​​​ ಗುಲಾಬಿ ಬಣ್ಣದ ರವಿಕೆ..ತಲೆಗೆ ಗುಲಾಬಿ ಹೂವು..ತುರುಬು ಕಟ್ಟಿದ ಜಡೆಯು ಅಪ್ಸರೆಯಾಗಿ ಕಾಣುವಂತೆ ಮಾಡಿದೆ.  1,31,600 ರೂ. ಬೆಲೆಯ ಸೀರೆ ಎನ್ನಲಾಗಿದೆ.

ಬಹು ನಿರೀಕ್ಷಿತ ಸಿನಿಮಾ ರಣಬಾಲಿ ರಿಲೀಸ್ ಆಗಿ ಸಿನಿಪ್ರೇಮಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸದ್ಯ ಅವರ ಮೈಸಾ ಸಿನಿಮಾವು ರಿಲೀಸ್ ಆಗುವ ಲಿಸ್ಟ್​ನಲ್ಲಿದೆ.

ಕನ್ನಡದ ಪ್ರೇಮದ ಊರಲಿ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಬೆಂಬಲ ವ್ಯಕ್ತಪಡಿಸಿದ್ದರು. ಕೂರ್ಗ್​ ಮೂಲದ ನಟಿ ತಪಸ್ವಿನಿ ಪೊಣ್ಣಚ್ಚ ನಟನೆ ಕುರಿತು ಸಂತಸ ವ್ಯಕ್ತಪಡಿಸಿದ್ದರು.

ಡಿಯರ್​ ಕಾಮ್ರೆಡ್​​, ಗೀತ ಗೋವಿಂದಂ ಸಿನಿಮಾ ನಂತರ ಒಟ್ಟಾಗಿ ರಶ್ಮಿಕಾ ಮತ್ತು ವಿಜಯ್​ ದಂಪತಿ ನಟಿಸುತ್ತಿದ್ದಾರೆ. ಅದರಲ್ಲೂ ಮದುವೆಯಾದ ನಂತರದ ಮೊದಲ ಸಿನಿಮಾ ಇದಾಗಿದೆ.

ರಣಬಾಲಿ ಸಿನಿಮಾದ ಕತೆ ನಿರೂಪಣೆಯಲ್ಲಿ ನಿರ್ದೇಶಕರು ಸೋತಿದ್ದಾರೆ. ಸಿನಿಮಾ ತುಂಬಾನೆ ತಾಳ್ಮೆ ಬೇಡುತ್ತದೆ ಎನ್ನುತ್ತಿದ್ದಾರೆ ಪ್ರೇಕ್ಷಕರು.