ವಿಜಯವಾಣಿ ಸುದ್ದಿ ಜಾಲ
ಆಚಾರ್ ಆಂಡ್ ಕೋ ಸಿನಿಮಾದಲ್ಲಿ ನಟಿಸಿ, ನಿರ್ದೇಶಿಸಿ ಭರ್ಜರಿ ಸಕ್ಸಸ್ ಕಂಡ ನಂತರ ಸಿಂಧು ಶ್ರೀನಿವಾಸ್ ಮೂರ್ತಿ ಟೀಚರ್ಸ್ ಪೆಟ್ ಎನ್ನುವ ಹೊಸ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.
ಡಿಸೆಂಬರ್ 2026ರ ಕೊನೆಯ ವಾರದಲ್ಲಿ ಟೀಚರ್ಸ್ ಪೆಟ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಮಾತಿದೆ. ಸದ್ಯ ಅವರು ನಾಕುತಂತಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಕ್ಯಾಥೋಲಿಕ್ ಬೋರ್ಡಿಂಗ್ ಶಾಲೆಯಲ್ಲಿ ಓದಿರುವ ಯುವತಿಯ ಕತೆ, ಸ್ನೇಹ, ಪೈಪೋಟಿಯ ಸುತ್ತ ಕಟ್ಟಲಾಗಿರುವ ಕತೆ ಎನ್ನಲಾಗಿದೆ.
ನಿರ್ದೇಶಕಿ ಸಿಂಧು ಅವರು ಈ ಸಿನಿಮಾ ನಿರ್ದೇಶಿಸುತ್ತಿರುವ ಬಗ್ಗೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (IFFI) 2025 WAVES ಫಿಲ್ಮ್ ಬಜಾರ್‌ನಲ್ಲಿ ಅಧಿಕೃತವಾಗಿ ಪ್ರಸ್ತುತಪಡಿಸಿದ್ದರು.
ಶುಚಿ ದ್ವಿವೇದಿ ಅವರ ಚಿತ್ರಕಥೆಯನ್ನು ಆಧರಿಸಿದ ಈ ಚಿತ್ರವನ್ನು ಐಶ್ವರ್ಯಾ ಸೋನಾರ್ ಅವರ ಲ್ಯಾಂಬೆ ಲಾಗ್ ಪ್ರೊಡಕ್ಷನ್ಸ್ ಮತ್ತು ದ್ವಿವೇದಿ ಅವರ ಸ್ಮಾಲ್ ಟೌನ್ ಗುರ್ಲ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿವೆ.
ಶಾಲೆಯ ಹೆಡ್ ಗರ್ಲ್ ಆಗಬೇಕು ಎಂದು ಬಯಸುವ ರಿಂಕಿ ಎನ್ನುವ ಹುಡುಗಿ..ತನ್ನ ಸ್ನೇಹಿತೆಯೊಂದಿಗೆ ನಡೆಸುವ ಪೈಪೋಟಿ ಸುತ್ತ ಹಾಸ್ಯಮಯವಾಗಿ ಕತೆ ಹೆಣೆಯಲಾಗಿದೆ ಎನ್ನುವ ಮಾಹಿತಿ ಇದೆ.
ಸಿಂಧು ಶ್ರೀನಿವಾಸ್ ಮೂರ್ತಿ ನಟನೆಯ ನಾಕುತಂತಿ ಸಿನಿಮಾದ ಬಣ್ಣ ಎನ್ನುವ ಲಿರಿಕಲ್ ಹಾಡು ರಿಲೀಸ್ ಆಗಿದೆ. ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಡಿಸೆಂಬರ್ 18ರಂದು ಸಿನಿಮಾ ರಿಲೀಸ್ ಆಗಲಿದೆ.