ಸೀರೆಯಲ್ಲಿ ಮಿಂಚಿದ ಸಾಯಿ ಪಲ್ಲವಿ..ಫ್ಯಾನ್ಸ್ 'ಫಿದಾ'

ವಿಜಯವಾಣಿ ಸುದ್ದಿ ಜಾಲ

ಧನುಷ್​, ಮಮ್ಮುಟಿ, ಸಾಯಿ ಪಲ್ಲವಿ ನಟನೆಯ Om ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮ ಹೈದರಾಬಾದ್​ನಲ್ಲಿ ನಡೆದಿತ್ತು. ಈ ವೇಳೆ ಈವೆಂಟ್​ಗೆ ಸಾಯಿ ಪಲ್ಲವಿ ಧರಿಸಿದ್ದ ಸೀರೆ ಹಾಗೂ ಇಯರ್ ಕಪ್ಸ್, ಕಸೂತಿ ಮಿಶ್ರಿತ ಮರೂನ್ ಬ್ಲೌಸ್​ ಗಮನ ಸೆಳೆದಿದೆ.

ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಧನುಷ್, ಮಮ್ಮುಟ್ಟಿ, ಸಾಯಿ ಪಲ್ಲವಿ ಮತ್ತು ಶ್ರೀಲೀಲಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಾಯಿ ಪಲ್ಲವಿ ಮತ್ತು ಶ್ರೀಲೀಲಾ ಅಲಕಾ ಲೂವ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಸಿನಿಮಾ ಬಿಡ್ಬೇಡಿ

ವಿಜಯ್​ ಸರ್ ರಾಜಕೀಯಕ್ಕಾಗಿ ಸಿನಿಮಾ ಬಿಟ್ಟರು. ಧನುಷ್ ಸರ್ ಸಹ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎನ್ನಲಾಗ್ತಿದೆ. ಇದು ಚಿತ್ರರಂಗಕ್ಕೆ ತುಂಬಲಾರದ ನಷ್ಟ ದಯವಿಟ್ಟು ಸಿನಿಮಾರಂಗ ತೊರೆಯಬೇಡಿ ಎಂದು ಸಾಯಿ ಪಲ್ಲವಿ ಮಾತನಾಡಿದ್ದಾರೆ.

ಇದೇ ವರ್ಷ ಸಾಯಿ ಪಲ್ಲವಿ ಅವರ ಎರಡು ಸಿನಿಮಾ ಬೆಳ್ಳಿ ತೆರೆ ಮೇಲೆ ಮಿಂಚುತ್ತಿದೆ. ದೀಪಾವಳಿಯಂದು ರಾಮಾಯಣ ಸಿನಿಮಾ ರಿಲೀಸ್ ಆಗಿತ್ತು. ನವೆಂಬರ್ 20ರಂದು ಓಂ ರಿಲೀಸ್ ಆಗುತ್ತಿದ್ದು ಭಾರಿ ನಿರೀಕ್ಷೆ ವ್ಯಕ್ತವಾಗುತ್ತಿದೆ.

ಓಂ ಸಿನಿಮಾದಲ್ಲಿ ಸಾಯಿ ಪಲ್ಲವಿ ಇನ್​ಸ್ಪೆಕ್ಟರ್ ಸಾಯಿ ಪಲ್ಲವಿ ಆಗಿ ಮಿಂಚಿದ್ದಾರೆ. ಇದರಲ್ಲಿ ಆಪರೇಷನ್​​ ಓಂ ಎನ್ನುವ ಯೋಜನೆ ಕೈಗೆತ್ತಿಕೊಳ್ಳುತ್ತಾರೆ. ಮಮ್ಮುಟಿ ಪಾತ್ರವೇನು, ಧನುಷ್ ಪಾತ್ರ ಹೇಗಿರಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಇರುಮುಡಿ ನಟಿ ಪ್ರಿಯಾ ಭವಾನಿ ಶಂಕರ್ ಮದುವೆ