ವಿಜಯವಾಣಿ ಸುದ್ದಿ ಜಾಲ
ಇರುಮುಡಿ ನಟಿ ಪ್ರಿಯಾ ಭವಾನಿ ಶಂಕರ್ ನ.11ರಂದು ತಮ್ಮ ಬಹುಕಾಲದ ಗೆಳೆಯನೊಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ಸ್ಟಾಗ್ರಾಮ್ನಲ್ಲಿ ಮದುವೆ ಸಂಭ್ರಮದ ಫೋಟೋಗಳು ಪೋಸ್ಟ್ ಮಾಡಿದ್ದು, ಸಾಕಷ್ಟು ವೈರಲ್ ಆಗಿದೆ.
ಪ್ರಿಯಾ ಭವಾನಿ ಶಂಕರ್, ಗೆಳೆಯ ರಾಜವೇಲ್ ರಾಜ್ ಅವರೊಂದಿಗೆ ಸೆಲೆಬ್ರಿಟಿಗಳ ಮದುವೆಗಳಂತೆ ಅದ್ದೂರಿ ಆಡಂಬರವಿಲ್ಲದೆ ಸರಳವಾಗಿ ಮದುವೆ ಮಾಡಿಕೊಂಡರು. ಅವರ ಉಡುಗೆಯೂ ತುಂಬಾನೆ ಸರಳವಾಗಿತ್ತು.
ಪ್ರಿಯಾ ಭವಾನಿ ಶಂಕರ್ ಮತ್ತು ರಾಜವೇಲ್ ರಾಜ್ ಕಾಲೇಜು ದಿನಗಳಿಂದಲೂ ಪರಸ್ಪರ ಪರಿಚಿತರಾಗಿದ್ದು, ಸುಮಾರು 14 ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದರು.
'ಮೀಯಾದ ಮಾನ್' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಪ್ರಿಯಾ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದಾರೆ
ರಾಜ್ವೇಲ್ ರಾಜ್ ಒಬ್ಬ ಸಾಫ್ಟ್ವೇರ್ ಇಂಜಿನಿಯರ್. 2007 ರಿಂದ 2011 ರವರೆಗೆ ಬಿಎಸ್ಎ ಕ್ರೆಸೆಂಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ನಲ್ಲಿ ಪದವಿ ಮುಗಿಸಿದ್ದಾರೆ.
2013 ರಿಂದ 2014 ರವರೆಗೆ ದಕ್ಷಿಣ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದಲ್ಲಿ ಬ್ಯುಸಿನೆಸ್ ಇಂಟಲಿಜೆನ್ಸ್ ಅಂಡ್ ಎಂಟರ್ಪ್ರೈಸ್ ಸಿಸ್ಟಮ್ಸ್' ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.
ಪ್ರಿಯಾ ಮತ್ತು ರಾಜ್ವೇಲ್ ಮೊದಲ ಬಾರಿಗೆ ಕಾಲೇಜು ದಿನಗಳಲ್ಲಿ ಭೇಟಿಯಾದರು ಮತ್ತು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಒಟ್ಟಿಗೆ ಇದ್ದಾರೆ. 2022 ರಲ್ಲಿ, ಈ ಜೋಡಿ ಒಟ್ಟಾಗಿ ಮನೆ ಖರೀದಿಸಿದ್ದಾರೆ ಎನ್ನುವ ಮಾಹಿತಿಯೂ ಇದೆ.
ಪ್ರಿಯಾ ಅವರು ಸದ್ಯ Demonte Colony 3, 'ಮರಗಧ ನಾಣಯಂ 2' ಹಾಗೂ ಕಮಲ್ ಹಾಸನ್ ಅವರ 'ಇಂಡಿಯನ್ 3' ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.