'ತುಲಾಭಾರಂ'ನಲ್ಲಿ ಪ್ರಿಯಾಂಕಾ ಮೋಹನ್

ವಿಜಯವಾಣಿ ಸುದ್ದಿ ಜಾಲ

ತಾತ್ಕಾಲಿಕವಾಗಿ 'RT78' ಎಂದು ಕರೆಯಲಾಗುತ್ತಿದ್ದ ರವಿ ತೇಜ ಮುಖ್ಯ ಭೂಮಿಕೆಯ ಸಿನಿಮಾಕ್ಕೆ ತುಲಾಭಾರಂ ಎಂದು ಇಡಲಾಗಿದ್ದು, ನಟಿ ಪ್ರಿಯಾಂಕಾ ಮೋಹನ್​ ಈ ಸಿನಿಮಾದಲ್ಲಿ ನಟಿಸಲಿದ್ದಾರೆ.

ಈಗಾಗಲೇ 'ಮೇಡ್ ಇನ್ ಕೊರಿಯಾ'ದಲ್ಲಿ ಮಿಂಚಿದ್ದ ಅವರು. ಸಾಕಷ್ಟು ಟೀಕೆಗೂ ಒಳಗಾಗಿದ್ದರು. ಅವರಿಗೆ ನಟನೆ ಬರೋದಿಲ್ಲ ಎಂದು ಹೀಯಾಳಿಸಲಾಗಿತ್ತು.

ವಿವೇಕ್ ಅಥ್ರೇಯಾ ನಿರ್ದೇಶನದಲ್ಲಿ, ರವಿ ತೇಜ ಜೋಡಿಯಾಗಿ ನಟಿಸುತ್ತಿರುವ 'ತುಲಾಭಾರಂ' ಎಂಬ ತೆಲುಗು ಕ್ರೈಂ ಕಾಮಿಡಿ ಡ್ರಾಮಾ ಚಿತ್ರದಲ್ಲಿ ಪ್ರಿಯಾಂಕಾ ನಟಿಸುತ್ತಿದ್ದಾರೆ.

ದೀಪಾವಳಿ ಹಬ್ಬಕ್ಕಾಗಿ ಪ್ರಿಯಾಂಕಾ ಮೋಹನ್, ಕನ್ನಡಿಯ ಕಸೂತಿ ಇರುವ ಬಾರ್ಡರ್ ಮತ್ತು ಪಲ್ಲುವಿನಲ್ಲಿ ಹೂವಿನ ವಿನ್ಯಾಸಗಳನ್ನು ಹೊಂದಿದ್ದ ಪೇಸ್ಟಲ್ ನೀಲಿ ಬಣ್ಣದಆರ್ಗನ್ಜಾ ಸೀರೆಯಲ್ಲಿ ಮಿಂಚಿದ್ದಾರೆ.

ಸ್ಲೀವ್‌ಲೆಸ್ ಬ್ಲೌಸ್, ಚಾಂದ್‌ಬಲಿ ಶೈಲಿಯ ಕಿವಿಯೋಲೆ, ಬಳೆ, ಸಾಫ್ಟ್ ಬನ್, ಚಿಕ್ಕ ಬಿಂದಿ ಅವರ ಲುಕನ್ನು ಅತ್ಯಂತ ಸರಳ ಹಾಗೂ ತಾಜಾವಾಗಿರಿಸಿತ್ತು.

'ತುಲಾಭಾರಂ' ಚಿತ್ರದ ಜೊತೆಗೆ, ಪ್ರಿಯಾಂಕಾ ಮೋಹನ್ ತಮಿಡಿನಲ್ಲಿ 'ಕವಿನ್ 9', ಕನ್ನಡದಲ್ಲಿ '666 ಆಪರೇಷನ್ ಡ್ರೀಮ್ ಥಿಯೇಟರ್' ಸಿನಿಮಾದಲ್ಲಿ ನಟಿಸಲಿದ್ದಾರೆ

'ಮಂಜನತ್ತಿ' ಹಾಗೂ 'AGS29' ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ಸದ್ಯ ಈ ಎಲ್ಲಾ ಪ್ರಾಜೆಕ್ಟ್‌ಗಳ ಚಿತ್ರೀಕರಣ ಭರಾಟೆಯಿಂದ ಸಾಗುತ್ತಿದೆ.

ಬಾಲಿವುಡ್​ಗೆ ಕೃತಿ ಶೆಟ್ಟಿ