ಬಾಲಿವುಡ್​ಗೆ ಕೃತಿ ಶೆಟ್ಟಿ

ವಿಜಯವಾಣಿ ಸುದ್ದಿ ಜಾಲ

ದಕ್ಷಿಣ ಭಾರತದ ನಟಿ ಕೃತಿ ಶೆಟ್ಟಿ ಅವರು ಹಮ್ ತೆರೆ ಪ್ಯಾರ್ ಮೇನ್ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್​ಗೆ ಹಾರಿದ್ದಾರೆ. ರೋಹಿತ್​ ಶೆಟ್ಟಿ ನಿರ್ದೇಶನದ ಈ ಸಿನಿಮಾವು ರೊಮ್ಯಾಂಟಿಕ್ ಕಾಮಿಡಿಯದ್ದಾಗಿದೆ

ಕೀರ್ತಿ ಶೆಟ್ಟಿ ಅವರು ಮಾಡ್ರನ್​​ಲುಕ್​ನಲ್ಲಿ ಸೀರೆಯುಟ್ಟು ಮಿಂಚಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ದೀಪಾವಳಿ ಹಬ್ಬದ ಶುಭಾಷಯ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.

ಉಪ್ಪೇನಾ ಸಿನಿಮಾ ಮೂಲಕ ಟಾಲಿವುಡ್​ಗೆ ಎಂಟ್ರಿ ಕೊಟ್ಟ ಕೃತಿ ಸಾಕಷ್ಟು ಸ್ಟಾರ್ ನಟರ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ, ಹಿಟ್ ಕಂಡ ಸಿನಿಮಾಗಳು ಮಾತ್ರ ಕಡಿಮೆ.

ಎಆರ್​ಎಂ, ವಾ ವಾಥಿಯರ್, ಶ್ಯಾಮ್ ಸಿಂಗ್ ರಾಯ್, ಎಲ್​ಐಕೆ, ಕಸ್ಟಡಿ, ಆ ಅಮ್ಮಾಯಿ ಗುರುಂಚಿ ಮೀಕು ಚಪ್ಪಾಲಿ. ಮನಮೆ ಸಿನಿಮಾದಲ್ಲಿ ನಟಿಸಿದ್ದಾರೆ.

ಜನವರಿ 12 ವಿಡುದಲ, ಜೆನಿ ಹಮ್ ತೆರೆ ಪ್ಯಾರ್ ಮೇನ್ ಅವರ ಮುಂದಿನ ಸಿನಿಮಾಗಳಾಗಿವೆ.