ವಿಜಯವಾಣಿ ಸುದ್ದಿ ಜಾಲ
ಕಮಲ ಹೂಗಳು ನೋಡೋದೆ ಒಂದು ಚಂದ..ಹೀಗೆ ಪ್ರಯಾಣಿಸುತ್ತಿರುವಾಗ ಎಲ್ಲಿಯಾದರೂ ಕಂಡುಬಿಟ್ಟರೆ, ಒಂದರ್ಧ ಗಂಟೆ ಅದರ ಅಂದ ಸವಿಯುತ್ತಾ. ಜೊತೆಗೆ ಬಂದವರನ್ನು ಆ ಹೂ ಬೇಕೆಂದು ಗೋಗೆರೆಯುತ್ತಾ ಸಮಯ ಕಳೆದು ಬಿಡುತ್ತೇವೆ.
ಮನೆಯಲ್ಲಿ ತಾವರೆ ಬೆಳೆಯಬೇಕು. ಆದರೆ, ಅದು ಕಷ್ಟ ಎನ್ನುವುದು ಹಲವರ ಅಭಿಪ್ರಾಯ. ಸರಿಯಾದ ಜಾಗ. ಮಣ್ಣು ಗಾಳಿಯಿದ್ದರೆ ಸಾಕು, ನಿಮ್ಮ ಮನೆಯ ಗಾರ್ಡನ್ ಏರಿಯಾ ಮತ್ತು ತಾರಸಿಯನ್ನು ಕಮಲದ ಹೂಗಳಿಂದ ಸುಂದರಗೊಳಿಸಬಹುದು.
ರಂಧ್ರಗಳಿಲ್ಲ ಒಂದು ಟಬ್. ವಸ್ತುಗಳನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇರಬೇಕು. ಇದಕ್ಕೆ ಜೇಡಿ ಮಣ್ಣು, ನೀರಿನಲ್ಲಿ ಬೆಳೆಯುವ ಸಸ್ಯಗಳಿಗೆ ಬೇಕಾಗುವ ಗೊಬ್ಬರ, ಸೋರ್ಯನ ಬೆಳಕು ಬೀಳುವ ಪ್ರದೇಶದ ಅಗತ್ಯ, ಶುದ್ಧನೀರು ಬೇಕಾಗುತ್ತದೆ.
ಕಮಲದ ಹೂ ಬೆಳೆಯಲು ಬೇಕಾಗುವ ದೊಡ್ಡ ಟಬ್ ಅನ್ನು ತೆಗೆದುಕೊಳ್ಳಿ...ಇದಕ್ಕೆ ನೀರು ತುಂಬಿ. ಮಾರುಕಟ್ಟೆಯಲ್ಲಿ ಕಮಲದ ಬೀಜಗಳು ದಕ್ಕುತ್ತದೆ. ಆದರೆ, ಇದನ್ನು ನೆಟ್ಟು, ಮೊಳಕೆಯೊಡೆದು ಎಲೆ ಚಿಗುರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ, ಎಲ್ಲಿಯಾದರು ಸಸಿ ಸಿಕ್ಕರೆ ಅದನ್ನೇ ನೆಡುವುದು ಸೂಕ್ತ.
ತೊಟ್ಟಿ ಸಿದ್ಧವಾಗದ ಬಳಿಕೆ ಇದಕ್ಕೆ ಜೇಡಿ ಮಣ್ಣು ಹಾಕಿ ಹದ ಮಾಡಿಟ್ಟುಕೊಳ್ಳಿ...ಈಗ ನೀವು ತಂದಿರುವ ಗಿಡದ ಕಡ್ಡಿಯನ್ನು ಮಣ್ಣಿನೊಳಗೆಇಡಿ. ಅದರ ಕಡ್ಡಿ ಭಾಗವು ನಿಮಗೆ ಕಾಣಿಸುವಂತೆ ಇರಲಿ. ಮಣಿನಿಂದ ಮೇಲಿನ ಭಾಗಕ್ಕೆ 5-6 ಸೆಂಟಿ ಮೀಟರ್ ನೀರು ಇರುವಂತೆ ನೋಡಿಕೊಳ್ಳಬೇಕಾಗುತ್ತದೆ
ಕೊಳದಲ್ಲಿ ನೀರು ಕಡಿಮೆಯಾಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿರುತ್ತದೆ. ಅಲ್ಲದೇ ಈ ಗಿಡಕ್ಕೆ 6-7 ಗಂಟೆ ಸೂರ್ಯನ ಬೆಳಕಿನ ಅವಶ್ಯಕತೆ ಇರಲಿದೆ.
ಕಮಲದ ಕಡ್ಡಿ ಇಟ್ಟ ತಕ್ಷಣ ಇದಕ್ಕೆ ಗೊಬ್ಬರ ಹಾಕಬೇಡಿ.. ಹೊಸ ಎಲೆಯ ಚಿಗುರುಗಳು ಬಿಡುತ್ತಲೇ ಇಂಚಿಂಚಾಗಿ ಗೊಬ್ಬರ ಸೇರಿಸುತ್ತಾ ಸಾಗಬೇಕು. ಎಲೆಗಳು ದಟ್ಟವಾಗಿ ಕಾಣಿಸಿಕೊಂಡ ನಂತರ ಗೊಬ್ಬರ ಪ್ರಮಾಣವನ್ನು ಹೆಚ್ಚಿಸಬೇಕು. ಹೀಗೆ ಗಿಡವನ್ನು ಆರೈಕೆ ಮಾಡಿದರೆ. ನಿಮ್ಮ ತಾರಸಿಯಲ್ಲಿ ಕಮಲದ ಹೂ ಕಾಣಬಹುದು.