ವಿಜಯವಾಣಿ ಸುದ್ದಿ ಜಾಲ
ಬಟರ್ ಪ್ರೂಟ್ ಬೆಣ್ಣೆ ಹಣ್ಣು ಎಂದು ಕರೆಸಿಕೊಳ್ಳುವ ಅವಾಕಾಡೊ ಸದ್ಯ ಬೇಡಿಕೆಯ ಬೆಳೆ. ಇದರಲ್ಲಿ ಸಲಾಡ್, ಟೋಸ್ಟ್, ಗ್ವಾಕಮೊಲೆ, ಜ್ಯೂಸ್ ರೂಪದಲ್ಲಿ ಸೇವನೆ ಮಾಡಲಾಗುತ್ತದೆ. ಇದೊಂದು ಟ್ರೆಂಡಿ ಆಹಾರವಾಗಿ ಮಾರ್ಪಟ್ಟಿದೆ.
ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಸೌರಭ್ ಸೇಥಿ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ ಅವಾಕಾಡೊ ನಿತ್ಯ ಸೇವಿಸುವುದು ಹೊಟ್ಟೆಯ ಆಹಾರಕ್ಕೆ ಹೆಚ್ಚು ಉತ್ತಮ ಎಂದಿದ್ದಾರೆ.
ಉತ್ತಮ ಜೀರ್ಣಕ್ರಿಯೆ, ಮಲವಿಸರ್ಜನೆ, ಆರೋಗ್ಯಕರ ರಕ್ತದೊತ್ತಡ ಸೇರಿದಂತೆ ಸಾಕಷ್ಟು ವಿಚಾರಕ್ಕೆ ಅವಕಾಡೊ ಉತ್ತಮ ಆಯ್ಕೆ ಎನ್ನಲಾಗುತ್ತದೆ. ಅವಕಾಡೊ ತಿನ್ನುವುದರಿಂದ ದೇಹಕ್ಕಾಗುವ ಲಾಭದ ಬಗ್ಗೆ ಮಾಹಿತಿ ಇಲ್ಲಿದೆ.
ಅವಕಾಡೊದಲ್ಲಿ 'ಮೊನೊಸಾಚುರೇಟೆಡ್ ಕೊಬ್ಬು' ಕೆಟ್ಟ ಕೊಲೆಸ್ಟ್ರಾಲ್ ಆದ ಎಲ್‌ಡಿಎಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ನಾರಿನಾಂಶ ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಬ್ಯಾಕ್ಟೀರಿಯಾ ಮತ್ತು ಆರೋಗ್ಯಕರ ಕರುಳಿನ ವ್ಯವಸ್ಥೆಯನ್ನು ಬೆಂಬಲಿಸುತ್ತದೆ.
ಅನಿಯಮಿತ ಮಲವಿಸರ್ಜನೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಈ ಹಣ್ಣು ಸಹಕಾರಿಯಾಗಿದೆ. ಅವಾಕಾಡೊದಲ್ಲಿರುವ 10 ಗ್ರಾಂ ಫೈಬರ್ ಮಲವಿಸರ್ಜನೆಯನ್ನು ನಿಯಮಿತವಾಗಿರಿಸಲು ಸಹಾಯ ಮಾಡುತ್ತದೆ.
ಅವಕಾಡೊ ನಿಮ್ಮ ಆಹಾರದೊಂದಿಗೆ ಸೇವಿಸುವುದು ಯಾಕೆ ಮುಖ್ಯ ಎಂದರೆ, ಇದು ನಿಮಗೆ ಹೊಟ್ಟೆ ತುಂಬಿದ ಭಾವೆನಯನ್ನು ನೀಡುತ್ತದೆ. ಇದರಿಂದ ಕುರಕಲು, ಅನಗತ್ಯ ಸ್ನ್ಯಾಕ್ಸ್ ತಿನ್ನುವುದು ತಪ್ಪಿಸುವಂತೆ ಮಾಡುತ್ತದೆ.
ಅವಕಾಡೊದಲ್ಲಿರುವ ಪೊಟ್ಯಾಸಿಯಮ್ ಇದ್ದು, ಇದು ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳುವಲ್ಲಿ ಪಾತ್ರವಹಿಸುತ್ತದೆ