ಆರೋಗ್ಯಕರ ನಿದ್ರೆಗೆ ಈ ಅಭ್ಯಾಸ ರೂಢಿಸಿಕೊಳ್ಳಿ

ವಿಜಯವಾಣಿ ಸುದ್ದಿ ಜಾಲ

ಫೋನ್ ಬಳಕೆ

ಮಲಗುವ ಮುನ್ನ ಮೊಬೈಲ್ ಫೋನ್ ಅಥವಾ ಸ್ಕ್ರೀನ್‌ಗಳನ್ನು ನೋಡುವುದು ಮೆದುಳನ್ನು ಸಕ್ರಿಯಗೊಳಿಸಿ ನಿದ್ರೆಗೆ ಭಂಗ ತರುತ್ತದೆ. ಮಲಗುವ ಮುನ್ನ ಮೊಬೈಲ್ ದೂರವಿಡಿ.

ಕಾಫಿ-ಟೀಗೆ ಬ್ರೇಕ್

ಕಾಫಿ, ಚಹಾ ಮತ್ತು ಎನರ್ಜಿ ಡ್ರಿಂಕ್ಸ್‌ಗಳನ್ನು ತಡವಾಗಿ ಕುಡಿಯುವುದರಿಂದ ನಿದ್ರೆ ಸರಿಯಾಗಿ ಬರುವುದಿಲ್ಲ. ಮಲಗುವ ಸಮಯಕ್ಕಿಂತ ಕೆಲವು ಗಂಟೆಗಳ ಮುಂಚೆಯೇ ಕಾಫಿ-ಟೀಗೆ ಬ್ರೇಕ್ ಹಾಕಿ.

ಹೊಟ್ಟೆಗೆ ಭಾರ ಎನಿಸುವ ಊಟಕ್ಕೆ ಬ್ರೇಕ್

ರಾತ್ರಿ ಮಲಗುವ ಮುನ್ನ ಹೆಚ್ಚು ತಿನ್ನುವುದು ಅಥವಾ ಖಾರದ ಪದಾರ್ಥಗಳನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಅಸ್ವಸ್ಥತೆ ಉಂಟಾಗುತ್ತದೆ. ಮಲಗುವುದಕ್ಕೂ ಮುನ್ನ ಆಹಾರ ಜೀರ್ಣವಾಗಲು ಸಮಯ ಕೊಡಿ.

ರಾತ್ರಿ ವ್ಯಾಯಾಮ ಮಾಡುವುದು

ತಡರಾತ್ರಿಯಲ್ಲಿ ಕಠಿಣ ವ್ಯಾಯಾಮ ಮಾಡುವುದರಿಂದ ದೇಹವು ವಿಶ್ರಾಂತಿ ಸ್ಥಿತಿಗೆ ಬರುವುದು ಕಷ್ಟವಾಗುತ್ತದೆ. ಜಿಮ್​ ಮಾಡುವುದು ಸಹ ನಿದ್ರೆಗೆ ಸಮಸ್ಯೆ ಮಾಡಬಹುದು.

ಹಗಲಿನಲ್ಲಿ ನಿದ್ರಿಸುವುದು

ಹಗಲಿನಲ್ಲಿ ಹೆಚ್ಚು ಹೊತ್ತು ನಿದ್ರೆ ಮಾಡುವುದರಿಂದ ರಾತ್ರಿಯ ನಿದ್ರೆಗೆ ತೊಂದರೆಯಾಗುತ್ತದೆ. ಹಗಲಿನಲ್ಲಿ ನಿದ್ರಿಸುವುದಾದರೆ ಅದನ್ನು ಕಡಿಮೆ ಸಮಯಕ್ಕೆ ಸೀಮಿತಗೊಳಿಸಿ

ಮದ್ಯಪಾನ

ಮದ್ಯಪಾನವು ಆರಂಭದಲ್ಲಿ ನಿದ್ರೆ ಬರುವಂತೆ ಅನಿಸಿದರೂ, ರಾತ್ರಿಯಲ್ಲಿ ನಿದ್ರೆಯ ಗುಣಮಟ್ಟವನ್ನು ಹಾಳುಮಾಡುತ್ತದೆ. ನಿದ್ರೆ ಬೇಕೆಂದರೆ ಮದ್ಯಪಾನವನ್ನು ಬಿಟ್ಟುಬಿಡಿ.

ನಿತ್ಯ 2 ಲವಂಗ ತಿಂದ್ರೆ ಏನಾಗುತ್ತೆ?