ವಿಜಯವಾಣಿ ಸುದ್ದಿ ಜಾಲ
ಅಡುಗೆ ಮನೆಯಲ್ಲಿ ಹೆಚ್ಚಾಗಿ ಬಳಕೆ ಮಾಡುವ ಲವಂಗದಲ್ಲಿ ಆರೋಗ್ಯಕಾರಿ ಅಂಶಗಳಿವೆ. ಇದರಲ್ಲಿರುವ ಉತ್ಕರ್ಷಣ ಅಂಶ, ನೈಸರ್ಗಿಕ ಎಣ್ಣೆ ಅಂಶ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ.
ಲವಂಗವು ಬಾಯಿಯ ದುರ್ವಾಸನೆ ಮತ್ತು ಹಲ್ಲು ನೋವಿನ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ. ಬಾಯಲ್ಲಿನ ಕೆಟ್ಟ ಬ್ಯಾಕ್ಟೀರಿಯಾ ವೃದ್ಧಿಯಾಗುವುದನ್ನು ತಡೆಯುತ್ತದೆ.
ಲವಂಗವನ್ನು ಬಿಸಿ ನೀರಿನಲ್ಲಿ ಅಥವಾ ಹಾಗೆಯೇ ಸೇವನೆ ಮಾಡುವುದರಿಂದ ಇದು ಹೊಟ್ಟೆಯುಬ್ಬರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಅಲ್ಲದೆ ಜೀರ್ಣಕ್ರಿಯೆಗೆ ಸಹಕಾರಿ.
ಲವಂಗವನ್ನು ಬಾಯಿಗೆ ಹಾಕಿದ ತಕ್ಷಣ ಜಗಿಯದಿರಿ. ನಿಧಾನವಾಗಿ ಅದರಲ್ಲಿರುವ ನೈಸರ್ಗಿಕ ಎಣ್ಣೆಯನ್ನು ಹೀರಿಕೊಳ್ಳುವಂತೆ ತಿನ್ನಬೇಕು.
ನಿತ್ಯ ಲವಂಗ ತಿನ್ನುವ ಅಭ್ಯಾಸವು ಕೆಟ್ಟ ಚಟಗಳನ್ನು ಬಿಡಿಸಲು ಸಹಾಯ ಮಾಡುತ್ತದೆ. ಸ್ಮೋಕಿಂಗ್, ಸಿಹಿ ಆಹಾರದ ಮೇಲೆ ಇರುವ ವ್ಯಾಮೋಹ, ಆರೋಗ್ಯಕರ ಜೀವನ ಶೈಲಿ ಅಳವಡಿಕೆ ಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
ಲವಂಗ ತಿನ್ನುವುದರಿಂದ ಶೀತ, ಸಂಶಿವಾತದಂತಹ ಸಮಸ್ಯೆಗಳಿಂದ ಕಾಪಾಡಲು ಸಹಾಯ ಮಾಡುತ್ತದೆ. ಆದರೆ ನೆನಪಿಡಿ ಲವಂಗವನ್ನು ಮಿತವಾಗಿ ತಿನ್ನಬೇಕು. ಲವಂಗ ಎಣ್ಣೆ ಹೆಚ್ಚು ಸೇವಿಸುವುದು ಅಪಾಯಕಾರಿ.