'ಮಾಕಾಳಿ' ಅನಿಶ್ಮಾ

ವಿಜಯವಾಣಿ ಸುದ್ದಿ ಜಾಲ

ಸಿರಾಯ್​ ಮೂಲಕ ಹೆಚ್ಚು ಪರಿಚಿತರಾದ 27ರ ಪೋರಿ ಅನಿಶ್ಮಾ ಅನಿಲ್​ ಕುಮಾರ್​​..ತಮಿಳು ಮತ್ತು ಮಲಯಾಳಂ ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ.

ಮೊಧ ರಾತ್ರಿ

ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ರಾಜಾ ಕರುಪ್ಪಸ್ವಾಮಿ ನಿರ್ದೇಶನ ಮೊಧ ರಾತ್ರಿ ಸಿನಿಮಾಕ್ಕೆ ಒಟಿಟಿಯಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಮೊಧ ರಾತ್ರಿ ಸಿನಿಮಾ ಅನಿಶ್ಮಾ ಹಾಗೂ ರಿಷಿಕಾಂತ್​ ನಟನಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಸರಳ ಕತೆ..ಜಾತಿ ತಾರತಮ್ಯ, ಪ್ರೀತಿಯ ಏಳುಬೀಳು, ಜೀವನಕ್ಕೆ ಹಣದ ಅವಶ್ಯಕತೆಯ ಕುರಿತು ಸಿನಿಮಾ

ಅನಿಶ್ಮಾ ಅನಿಲ್​ ಕುಮಾರ್​ ಅವರು ಮಾರಿ ಸೆಲ್ವರಾಜ್ ನಿರ್ಮಾಣದ ಮಾಕಾಳಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಸ್​ಬಿ ಅರವಿಂದ್​ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಮಾಕಾಳಿ ಸಿನಿಮಾವು ತಂದೆ-ಮಗಳ ಬಾಂಧವ್ಯವನ್ನು ಪ್ರಸ್ತಾಪಿಸುತ್ತದೆ ಎನ್ನಲಾಗಿದೆ. ಕಾರ್ಮಿಲ ಹೋರಾಟದ ಸುತ್ತ ಹೆಣೆಯಲಾದ ಕತೆ.

ಮಾಕಾಳಿ ಸಿನಿಮಾದಲ್ಲಿ ಅನಿಶ್ಮಾ ಅವರು 20 ವರ್ಷದ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಮಿರ್ ನಿರ್ದೇಶಕ-ನಟ ಅಮೀರ್ ಮತ್ತು ನಟಿ ಸ್ವಾಸಿಕಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಅಪ್ಡೇಟ್ ಇದೆ.

ಅನಿಶ್ಮಾ ಸಿರಾಯ್​, ಯೂತ್​​, ಐ ಆಮ್​ ಕಾತಲನ್​, ಮರನ ಮಾಸ್ ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ.

ಬಿಟೆಕ್​​​​​​ ಓದಿರುವ ಅನಿಶ್ಮಾ ಅನಿಲ್​ ಕುಮಾರ್ ಮೂಲತಃ ಕೇರಳದವರು. ಪೂವನ್ ಸಿನಿಮಾ ಮೂಲಕ ಸಿನಿ ರಂಗಕ್ಕೆ ಕಾಲಿಟ್ಟ ಅವರು, ಹೆಚ್ಚು ಖ್ಯಾತಿ ಗಳಿಸಿ, ಸಿರಾಯ್​ನಲ್ಲಿ ಮೂಲಕ ತಮಿಳಿಗೆ ಎಂಟ್ರಿ ಕೊಟ್ಟರು.

ಸೀರೆಯಲ್ಲಿ ಮಿಂಚಿದ ಸಾಯಿ ಪಲ್ಲವಿ