ಮದ್ವೆ ನಂತ್ರ ಶೋಭಿತಾ ಫಸ್ಟ್​ ಬೋಲ್ಡ್​ ಫೋಟೋಶೂಟ್!​ Sobhita Dhulipala

ವಿಜಯವಾಣಿ ಸುದ್ದಿ ಜಾಲ

ಮ್ಯಾಗಜಿನ್​ ಫೋಟೋಶೂಟ್​

ಪ್ರತಿಷ್ಠಿತ 'ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ' ಮ್ಯಾಗಜೀನ್‌ಗಾಗಿ ಶೋಭಿತಾ ಅವರು ನಡೆಸಿರುವ ಈ ಸ್ಟೈಲಿಶ್ ಹಾಗೂ ಬೋಲ್ಡ್ ಫೋಟೋಶೂಟ್ ಸದ್ಯ ಫ್ಯಾಶನ್ ಪ್ರಿಯರ ಗಮನ ಸೆಳೆದಿದೆ.

ಕವರ್ ಲುಕ್

ಕವರ್​ ಲುಕ್​ನಲ್ಲಿ ಶೋಭಿತಾ ಅವರು ಬೂದು ಬಣ್ಣದ ಕ್ರಾಪ್ಡ್ ಫಾಕ್ಸ್ ಫರ್ ಜಾಕೆಟ್ ಜತೆಗೆ ಕಪ್ಪು ಬಣ್ಣದ ಬ್ರೀಫ್ಸ್ ಹಾಗೂ ಶೀರ್ ಟೈಟ್ಸ್ ಧರಿಸಿದ್ದು, ಅದಕ್ಕೆ ಸ್ಕಲ್ಪ್ಚರ್ಡ್ ಗೋಲ್ಡ್ ಬೆಲ್ಟ್ ಮತ್ತು ಟಿಯರ್‌ಡ್ರಾಪ್ ಕ್ರಿಸ್ಟಲ್ ಲಾಕೆಟ್ ಮ್ಯಾಚ್ ಮಾಡಿದ್ದಾರೆ.

ಹಾಲ್ಟರ್ ಟಾಪ್ ಲುಕ್

ಕಪ್ಪು ಬಣ್ಣದ ಹಾಲ್ಟರ್ ನೆಕ್ ಟಾಪ್ ಜತೆಗೆ ಶ್ರೆಡೆಡ್ ಲ್ಯಾಡರ್ ಶೈಲಿಯ ಮಿಡಿ ಸ್ಕರ್ಟ್ ಮತ್ತು ಫೆದರ್ ಬೋವಾ ಧರಿಸಿ ಸ್ಟೈಲಿಶ್ ಆಗಿ ಕಂಗೊಳಿಸಿದ್ದಾರೆ.

ಬ್ಲೇಜರ್ ಸ್ಟೈಲ್

ಓವರ್‌ಸೈಜ್ಡ್ ಗ್ರೇ ಚೆಕ್ಡ್ ಬ್ಲೇಜರ್ ಅಡಿಯಲ್ಲಿ ಶೀರ್ ಪ್ಲಮ್ ಬಾಡಿಸೂಟ್ ಧರಿಸಿ, ರೆಡ್ ಸನ್​ಗ್ಲಾಸ್​ ಹಾಗೂ ಬರ್ಗಂಡಿ ಟೈಟ್ಸ್‌ನಲ್ಲಿ ಮಿಂಚಿದ್ದಾರೆ.

ಶೋಸ್ಟಾಪರ್ ಲುಕ್

ಮೆಜೆಂಟಾ ಬಣ್ಣದ ಒನ್-ಶೋಲ್ಡರ್ ಡ್ರೇಪ್ ಜೊತೆಗೆ ಕ್ರಿಸ್ಟಲ್-ಫ್ರಿಂಜ್ಡ್ ಥೈ-ಹೈ ಬೂಟ್ಸ್ ಧರಿಸಿ ಗಮನ ಸೆಳೆದಿದ್ದಾರೆ.

ಮದುವೆ ನಂತರದ ಮೊದಲ ಫೋಟೋಶೂಟ್

ಮದುವೆಯ ಬಳಿಕ 'ದಿ ಹಾಲಿವುಡ್ ರಿಪೋರ್ಟರ್ ಇಂಡಿಯಾ'ಗಾಗಿ ಅವರು ನಡೆಸಿರುವ ಈ ದಿಟ್ಟ ಹಾಗೂ ಮಾಡರ್ನ್ ಫೋಟೋಶೂಟ್ ಸದ್ಯ ಎಲ್ಲೆಡೆ ವೈರಲ್ ಆಗಿದೆ.

ಜಾಗತಿಕ ಖ್ಯಾತಿಯ ವೆಬ್ ಸೀರಿಸ್

ಜನಪ್ರಿಯ ಒಟಿಟಿ ಸೀರಿಸ್ 'ಮೇಡ್ ಇನ್ ಹೆವನ್' ಮೂಲಕ ಶೋಭಿತಾ ಜಾಗತಿಕ ಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು.

ಬಹುಭಾಷಾ ನಟಿ

ಹಿಂದಿ, ತೆಲುಗು ಮತ್ತು ತಮಿಳು ಸೇರಿದಂತೆ ವಿವಿಧ ಪ್ರಮುಖ ಭಾಷೆಯ ಚಿತ್ರರಂಗಗಳಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಗುರುತಿಸಿಕೊಂಡಿದ್ದಾರೆ.

ಪ್ರಮುಖ ಸಿನಿಮಾಗಳು

ಶೋಭಿತಾ ಅವರ 'ಮೇಜರ್', 'ಪೊನ್ನಿಯಿನ್ ಸೆಲ್ವನ್' ಹಾಗೂ ಹಾಲಿವುಡ್‌ನ ಜನಪ್ರಿಯ 'ಮಂಕಿ ಮ್ಯಾನ್' ಚಿತ್ರಗಳಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ.

ಫ್ಯಾಶನ್ ಐಕಾನ್

ತಮ್ಮ ವಿಶಿಷ್ಟ ಸ್ಟೈಲಿಂಗ್, ವಿಭಿನ್ನ ಮೇಕಪ್ ಮತ್ತು ಮಾಡರ್ನ್ ಉಡುಪುಗಳ ಮೂಲಕ ಸದಾ ಫ್ಯಾಶನ್ ಲೋಕದಲ್ಲಿ ಮುಂಚೂಣಿಯಲ್ಲಿರುತ್ತಾರೆ.

ಪಾ. ರಂಜಿತ್ ಜೊತೆ ಹೊಸ ಸಿನಿಮಾ

ಸದ್ಯ ಅವರು ತಮಿಳಿನ ಖ್ಯಾತ ನಿರ್ದೇಶಕ ಪಾ. ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುಮಮ್' ಸಿನಿಮಾಗೆ ನಾಯಕಿಯಾಗಿ ಸಜ್ಜಾಗುತ್ತಿದ್ದಾರೆ.

ಪಾತ್ರದ ಬಗ್ಗೆ ಸಮರ್ಪಣೆ

'ವೆಟ್ಟುಮಮ್' ಚಿತ್ರದ ಪಾತ್ರಕ್ಕಾಗಿ ತಾನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದಾಗಿ ಮತ್ತು ಇಂತಹ ಮಹತ್ವದ ಪಾತ್ರಕ್ಕಾಗಿ ತಾನು ಬಹಳ ದಿನಗಳಿಂದ ಕಾಯುತ್ತಿರುವುದಾಗಿ ಶೋಭಿತಾ ಹಂಚಿಕೊಂಡಿದ್ದಾರೆ.

ಮಿನಿ ಸ್ಕರ್ಟ್​ನಲ್ಲಿ ಮಿಂಚಿದ ಚಂದನವನದ ಮಿಲ್ಕಿ ಬ್ಯೂಟಿ!