ವಿಜಯವಾಣಿ ಸುದ್ದಿ ಜಾಲ
ಕನ್ನಡ ಚಿತ್ರರಂಗದ 'ಚುಟು ಚುಟು' ಹುಡುಗಿ ಹಾಗೂ ಸ್ಯಾಂಡಲ್ವುಡ್ ಮಿಲ್ಕಿ ಬ್ಯೂಟಿ ಎಂದೇ ಹೆಸರಾಗಿರುವ ಆಶಿಕಾ ರಂಗನಾಥ್ ಅವರ ಹೊಸ ಹಾಟ್ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಆಶಿಕಾ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ಫೋಟೋಗಳು ಸಖತ್ ವೈರಲ್ ಆಗಿವೆ. ಕಪ್ಪು ಬಣ್ಣದ ಶಾರ್ಟ್ ಸ್ಕರ್ಟ್ ಮತ್ತು ಡೆನಿಮ್ ಜಾಕೆಟ್ ಧರಿಸಿ ಅತ್ಯಂತ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಆಶಿಕಾ ಅವರ ಹಾಟ್ ಅವತಾರವನ್ನು ನೋಡಿ ಫಿದಾ ಆಗಿರುವ ಅಭಿಮಾನಿಗಳು ಕಾಮೆಂಟ್ಗಳ ಮಹಾಪೂರವನ್ನು ಹರಿಸಿದ್ದು, ನಟಿಯ ಮೈಮಾಟವನ್ನು ಕೊಂಡಾಡುತ್ತಿದ್ದಾರೆ.
ಆಶಿಕಾ ರಂಗನಾಥ್ ಅವರು 1996ರ ಆಗಸ್ಟ್ 5ರಂದು ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಜನಿಸಿದರು. ತಂದೆ ಎನ್. ರಂಗನಾಥ್ ಸಿವಿಲ್ ಕಾಂಟ್ರಾಕ್ಟರ್ ಮತ್ತು ತಾಯಿ ಬಿ. ಸುಧಾ ರಂಗನಾಥ್ ಗೃಹಿಣಿ. ಅಕ್ಕ ಅನುಷಾ ರಂಗನಾಥ್ ಕೂಡ ನಟಿ.
ಆಶಿಕಾ ಅವರು ಕಾಮರ್ಸ್ ಪದವೀಧರೆ. ಅವರು Clean and Clear Fresh Face Bangalore ಸ್ಪರ್ಧೆಯಲ್ಲಿ ರನರ್-ಅಪ್ ಆಗಿ ಗಮನ ಸೆಳೆದರು. ನಂತರ ನಿರ್ದೇಶಕ ಮಹೇಶ್ ಬಾಬು ಅವರಿಂದ 'ಕ್ರೇಜಿ ಬಾಯ್' (2016) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.
ಕ್ರೇಜಿ ಬಾಯ್ ಬಳಿಕ ರ್ಯಾಂಬೋ, ಮದಗಜ, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ತಾಯಿಗೆ ತಕ್ಕ ಮಗ, ಅವತಾರ ಪುರುಷ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಆಶಿಕಾ ನಟಿಸಿದ್ದಾರೆ ಮತ್ತು ಇಂದಿಗೂ ಸಕ್ರಿಯರಾಗಿದ್ದಾರೆ.
ರ್ಯಾಂಬೋ 2 ಚಿತ್ರದ 'ಚುಟು ಚುಟು' ಹಾಡು ಆಶಿಕಾ ಅವರಿಗೆ ರಾಜ್ಯವ್ಯಾಪಿ ಪ್ರಸಿದ್ಧಿಯನ್ನು ತಂದುಕೊಟ್ಟಿತು. ಇಂದಿಗೂ ಈ ಸಾಂಗ್ ಎಲ್ಲರ ಫೇವರಿಟ್ ಆಗಿದೆ. ಈ ಹಾಡಿನಲ್ಲಿ ನಟ ಶರಣ್ ಜತೆ ಆಶಿಕಾ ಸೊಂಟ ಬಳುಕಿಸಿದ್ದಾರೆ.
ಆಶಿಕಾ ಅವರು ಕೇವಲ ಕನ್ನಡ ಭಾಷೆಗೆ ಸೀಮಿತವಾಗಿಲ್ಲ. ಇದೀಗ ಪ್ಯಾನ್ ಇಂಡಿಯಾ ನಟಿಯಾಗಿದ್ದಾರೆ. ತಮಿಳಿನಲ್ಲಿ ಪಟ್ಟತು ಅರಸನ್, ತೆಲಗಿನಲ್ಲಿ ಅಮಿಗೋಸ್, ನಾ ಸಾಮಿ ರಂಗ, ಭರ್ತ ಮಹಾಸಾಯುಲಕು ವಿಜ್ಞಪ್ತಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಆಶಿಕಾ ಉತ್ತಮ ನೃತ್ಯಗಾರ್ತಿಯಾಗಿದ್ದು, ಅವರ ನೃತ್ಯ ಕೌಶಲವನ್ನು ಸಿನಿಮಾಗಳಲ್ಲಿ ಕಾಣಬಹುದು. ಕೋಟಿಗೊಬ್ಬ 3 ಸಿನಿಮಾದಲ್ಲಿ ನಟ ಸುದೀಪ್ ಜತೆ ವಿಶೇಷ ಹಾಡೊಂದರಲ್ಲಿ ಆಶಿಕಾ ಭರ್ಜರಿ ಸ್ಟೆಪ್ ಹಾಕಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ಆಶಿಕಾ, ತಮ್ಮ ಹೊಸ ಸಿನಿಮಾಗಳ ಅಪ್ಡೇಟ್ ಸೇರಿದಂತೆ ಆಗಾಗ ಮಾದಕ ಫೋಟೋಶೂಟ್ ಮೂಲಕ ಸದ್ದು ಮಾಡುತ್ತಿರುತ್ತಾರೆ.