ವಿಜಯವಾಣಿ ಸುದ್ದಿ ಜಾಲ
ಪ್ರೋಟಿನ್ಗಳು ದೇಹದ ಜೀವಕೋಶಗಳ ಬೆಳವಣಿಗೆ, ದುರಸ್ತಿ ಮತ್ತು ನಿರ್ವಹಣೆಗೆ ಅತ್ಯಗತ್ಯವಾಗಿವೆ. ಸ್ನಾಯುಗಳು, ಅಂಗಾಂಶಗಳು ಮತ್ತು ಕಿಣ್ವಗಳನ್ನು ನಿರ್ಮಿಸಲು ಮತ್ತು ಹಾರ್ಮೋನುಗಳನ್ನು ಉತ್ಪಾದಿಸಲು ಪ್ರಮುಖ ಪಾತ್ರವಹಿಸುತ್ತವೆ.
ವಯಸ್ಸು, ತೂಕ ಮತ್ತು ಚಟುವಟಿಕೆಯನ್ನು ಅವಲಂಬಿಸಿ ಪ್ರತಿ 1 ಕೆಜಿ ದೇಹ ತೂಕಕ್ಕೆ 0.8 ಗ್ರಾಂ ಪ್ರೋಟೀನ್ ಅಗತ್ಯವಾಗುತ್ತದೆ. ಇದನ್ನು ಮಾಂಸ, ಹಾಲಿನ ಉತ್ಪನ್ನಗಳು, ಕಾಳುಗಳು ಮತ್ತು ಬೀಜಗಳ ಮೂಲಕ ಪೂರೈಸಬಹುದು.
ಕಡಿಮೆ ಕೊಬ್ಬಿನಾಂಶ ಹೊಂದಿರುವ ಮೊಟ್ಟೆಯ ಬಿಳಿಭಾಗವು ಪ್ರೋಟೀನ್‌ನಿಂದ ಸಮೃದ್ಧವಾಗಿದೆ. ಹಳದಿ ಭಾಗದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ತುಂಬಿರುತ್ತದೆ.
ಡೈರಿ ಉತ್ಪನ್ನಗಳಾದ ಹಾಲು, ಮೊಸರು, ಪನ್ನೀರ್ ಮತ್ತು ಚೀಸ್ ಪ್ರೋಟೀನ್‌ನ ಅತ್ಯುತ್ತಮ ಮೂಲಗಳಾಗಿವೆ. ನಿಯಮಿತವಾಗಿ ಸೇವನೆ ಮಾಡಿರುವುದರಿಂದ ದೇಹಕ್ಕೆ ಅಗತ್ಯವಾದ ಪ್ರೋಟೀನ್ ದೊರೆಯುತ್ತದೆ.
ಕೋಳಿ ಮಾಂಸ, ಮೀನು, ಮೊಟ್ಟೆ ಮತ್ತು ಕುರಿ ಮಾಂಸದಲ್ಲಿ ಪ್ರೋಟೀನ್ ಅಧಿಕವಾಗಿರುತ್ತದೆ. ಆಗಾಗ ತಿನ್ನುವುದರಿಂದ ಪ್ರೋಟೀನ್ ಮೂಲ ಪಡೆಯಬಹುದು.
ಒಣ ಹಣ್ಣುಗಳು, ಬಾದಾಮಿ, ಕಡಲೆಕಾಯಿ, ಚಿಯಾ, ಅಗಸೆ ಸೇರಿದಂತೆ ಮುಂತಾದ ಬೀಜಗಳನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾಗಿ ಬೇಕಾದ ಪ್ರೋಟೀನ್ ಪಡೆಯಬಹುದು.
ಬೇಳೆ, ಹಲಸಂದೆ, ಹಸಿರು ಬಟಾಣಿ, ಕಿಡ್ನಿ ಬೀನ್ಸ್, ರಾಜ್ಮಾ ಮತ್ತ ಹಸಿಕಡಲೆ ಸೇರಿದಂತೆ ಮುಂತಾದ ಕಾಳುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಅಗತ್ಯವಾದ ಪ್ರೋಟೀನ್ ಪಡೆದುಕೊಳ್ಳಬಹುದು.
ಸೋಯಾ ಪನ್ನೀರ್ ಹಾಗೂ ಸೊಯಾ ಬೀನ್ ಕೂಡ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ನಿಯಮಿತ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಪಡೆಯಬಹುದು.
ಕಂದು ಅಕ್ಕಿ, ಓಟ್ಸ್, ಸಂಪೂರ್ಣ ಗೋಧಿ ಬ್ರೆಡ್ ಹಾಗೂ ಕ್ವಿನೋವಾ ಕೂಡ ಪ್ರೋಟೀನ್ ಉತ್ತಮ ಮೂಲವಾಗಿದೆ. ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ನಿಮ್ಮದಾಗಿಸಿಕೊಳ್ಳಬಹುದು.
ಅಗತ್ಯಕ್ಕಿಂತ ಹೆಚ್ಚು ಪ್ರೋಟೀನ್ ಸೇವಿಸಿದರೆ ಕಿಡ್ನಿ ಮತ್ತು ಯಕೃತ್ತಿನ ಮೇಲೆ ಒತ್ತಡ ಬಿದ್ದು ಕಾರ್ಯಕ್ಷಮತೆ ಕುಂಟಿತಗೊಳ್ಳುವ ಅಪಾಯವಿರುತ್ತದೆ. ಅಲ್ಲದೆ, ನಿರ್ಜಲೀಕರಣ, ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆ ಹಾಗೂ ತೂಕ ಹೆಚ್ಚಾಗಲು ಕಾರಣವಾಗಬಹುದು.