ವಿಜಯವಾಣಿ ಸುದ್ದಿ ಜಾಲ
ಮಮ್ಮುಟ್ಟಿ ನಟನೆಯ ಸೂಪರ್ ಹಿಟ್ ಮಲಯಾಳಂ ಸಿನಿಮಾ ಮತಿಲುಕಲ್. ಮಲಯಾಳಂ ಲೇಖಕ ವೈ ಕೋಮ್ ಮಹಮ್ಮದ್ ಬಶೀರ್ ಅವರ ಆತ್ಮಚರಿತ್ರೆ ಆಧಾರಿತ ಸಿನಿಮಾ ಇದಾಗಿದೆ. ಅಡೂರ್ ಗೋಪಾಲಕೃಷ್ಣನ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ವೆನಿಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದ ಸಿನಿಮಾ ಇದಾಗಿದೆ. 4 ರಾಷ್ಟ್ರಪ್ರಶಸ್ತಿ ದಕ್ಕಿಸಿಕೊಂಡಿದೆ.
2008ರಲ್ಲಿ ರಿಲೀಸ್ ಆದ ಕಾಂಚಿವರಂ ಸಿನಿಮಾವು ನೀವು ಇಂದಿಗೂ ನೋಡಲೇ ಬೇಕಾದ ಸಿನಿಮಾ. ಪ್ರಿಯದರ್ಶನ್ ಸಿನಿಮಾವನ್ನು ನಿರ್ದೇಶಿಸಿದ್ದು, ಪ್ರಕಾಶ್ ರಾಜ್, ಶ್ರಿಯಾ ರೆಡ್ಡಿ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಕಾಶ್ ರಾಜ್ ನಟನೆಗೆ ರಾಷ್ಟ್ರೀಯ ಪ್ರಶಸ್ತಿ ದಕ್ಕಿದೆ. ತಮಿಳುನಾಡಿನ ಕಾಂಚೀಪುರಂನಲ್ಲಿನ ರೇಷ್ಮೆ ನೇಕಾರರ ಕಷ್ಟ, ಹೋರಾಟದ ಬದುಕಿನ ಸುತ್ತ ಕತೆ ಹೆಣೆಯಲಾಗಿದೆ.
ಪಿ ಪದ್ಮರಾಜನ್ ಬರೆದು ನಿರ್ದೇಶಿಸಿದ 'ತೂವನತುಂಬಿಕಲ್' ಸಿನಿಮಾ 1978ರಲ್ಲಿ ರಿಲೀಸ್ ಆದ ಹಿಟ್ ಸಿನಿಮಾ. ಇದನ್ನು ಉದಕಪ್ಪೋಳ ಎನ್ನುವ ಕಾದಂಬರಿಯಿಂದ ಅರ್ಧ ಕತೆಯೊಂದಿಗೆ ಸಿನಿಮಾ ನಿರ್ದೇಶಿಸಲಾಗಿದೆ. ಮೋಹನ್ ಲಾಲ್, ಸುಮಲತಾ, ಪಾರ್ವತಿ ನಟಿಸಿದ್ದಾರೆ. ಇಂದಿಗೂ ರೀಲ್ಸ್ಗಾಗಿ ಈ ಸಿನಿಮಾದ ಹಾಡುಗಳನ್ನು ಬಳಕೆ ಮಾಡಲಾಗುತ್ತದೆ.
ಯು ಆರ್ ಅನಂತ ಮೂರ್ತಿ ಅವರ ಸಂಸ್ಕಾರ ಕಾದಂಬರಿಯಾಧಾರಿತ ಸಿನಿಮಾ ಸಂಸ್ಕಾರ. ಟಿ ಪಟ್ಟಾಭಿರಾಮ ರೆಡ್ಡಿ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಗಿರೀಶ್ ಕಾರ್ನಾಡ್, ಸ್ನೇಹಲತಾ ರೆಡ್ಡಿ, ಪಿ ಲಂಕೇಶ್ ನಿಸಿದ್ದಾರೆ. ಕೇಂದ್ರ ಸರ್ಕಾರದ ಅತ್ಯುತ್ತಮ ಚಲನಚಿತ್ರಕ್ಕಾಗಿ ನೀಡುವ ಸ್ವರ್ಣ ಕಮಲ ರಾಷ್ಟ್ರೀಯ ಪ್ರಶಸ್ತಿ ದಕ್ಕಿಸಿಕೊಂಡ ಸಿನಿಮಾ ಇದಾಗಿದೆ.
ಮಣಿರತ್ನಂ ನಿರ್ದೇಶನದ ನಾಯಗನ್ ಸಿನಿಮಾವು 1987ರಲ್ಲಿ ರಿಲೀಸ್ ಆಗಿದೆ. ಸಿನಿಮಾದಲ್ಲಿ ಕಮಲ್ ಹಾಸನ್, ಸರಣ್ಯ ಪೊನ್ನವನ್ನನ್, ಕಾರ್ತಿಕ, ನಜಾರ್ ಸೇರಿದಂತೆ ಹಲವರು ನಟಿಸಿದ್ದಾರೆ. ಬಾಂಬೆಯ ಭೂಗತ ಜಗತ್ತಿನ ಡಾನ್ ಆಗಿದ್ದ ವರದರಾಜ್ ಮೂದಲಿಯಾರ್ ಜೀವನದಿಂದ ಸ್ಪೂರ್ತಿ ಪಡೆದ ಸಿನಿಮಾ ಇದಾಗಿದೆ. ಈ ಕಮಲ್ ಹಾಸನ್ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಮೋಹನ್ ಲಾಲ್, ಶೋಭನಾ ನಟನೆಯ ಮಣಿಚಿತ್ರತಾಳು ಸಿನಿಮಾಕ್ಕೆ ಫಾಜಿಲ್ ಆಕ್ಷನ್ ಕಟ್ ಹೇಳಿದ್ದಾರೆ. ಇದು ನಟಿ ಶೋಭನಾ ಅವರು ರಾಷ್ಟ್ರೀಯ ಪ್ರಶಸ್ತಿ ದಕ್ಕಿಸಿಕೊಂಡರು. ಇದನ್ನು ಕನ್ನಡ, ತಮಿಳು, ಬೆಂಗಾಲಿ ಹಾಗೂ ಹಿಂದಿಗೂ ರಿಮೇಕ್ ಮಾಡಲಾಗಿದೆ.
ಕಮಲ್ ಹಾಸನ್ ಅವರಿಗೆ ಅತ್ಯುತ್ತಮ ನಟ ಎಂದು ರಾಷ್ಟ್ರೀಯ ಪ್ರಶಸ್ತಿ ದಕ್ಕಿಸಿಕೊಟ್ಟ ಮೂಂದ್ರ ಪಿರೈ ಸಿನಿಮಾವು ನೋಡಲೇಬೇಕಾದದ್ದು. ಇದು ಹಿಂದಿಗೆ ಸದ್ಮಾ ಎಂದು ರಿಮೇಕ್ ಮಾಡಲಾಗಿದೆ. ಬಾಲು ಮಹೇಂದ್ರ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.