ವಿಜಯವಾಣಿ ಸುದ್ದಿ ಜಾಲ
ನಾವು ಆರೋಗ್ಯವಾಗಿ ಇರಬೇಕಾದ್ರೆ ನಮ್ಮ ದೇಹದಲ್ಲಿ ಹರಿದಾಡುವ ರಕ್ತ ಸರಾಗವಾಗಿ ಹರಿಯಬೇಕು. ಯಾವುದೇ ಅಡೆತಡೆ ಎದುರಾದ್ರೂ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ ಈ ಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ರಕ್ತ ಪರಿಚಲನೆ ಸುಧಾರಿಸುತ್ತದೆ.
ನೋಡಲು ಆಕರ್ಷಕವಾಗಿರುವ ದಾಳಿಂಬೆ ಹಣ್ಣು ಆ್ಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿದೆ. ಈ ಹಣ್ಣಿನಲ್ಲಿರುವ ನೈಟ್ರೇಟ್‌ಗಳು ರಕ್ತನಾಳಗಳನ್ನು ಹಿಗ್ಗಿಸಲು ಮತ್ತು ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಸ್ಟ್ರಾಬೆರಿ, ಬ್ಲೂಬೆರಿ ಹಾಗೂ ರಾಸ್ಪ್ಬೆರಿ ಇತ್ಯಾದಿ ಹಣ್ಣುಗಳು ಅತ್ಯಧಿಕ ಫ್ಲೇವನಾಯ್ಡ್‌ಗಳನ್ನು ಹೊಂದಿರುತ್ತವೆ. ಈ ಫ್ಲೇವನಾಯ್ಡ್‌ಗಳು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆ ಹಾಗೂ ದ್ರಾಕ್ಷಿಹಣ್ಣುಗಳಲ್ಲಿ ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್‌ಗಳು ಸಮೃದ್ಧವಾಗಿವೆ. ಇದು ರಕ್ತನಾಳಗಳಲ್ಲಿ ಉರಿಯೂತ ಕಡಿಮೆ ಮಾಡಲು ಮತ್ತು ರಕ್ತ ಹೆಪ್ಪುಗಟ್ಟುವಿಕೆ ತಡೆಯಲು ಸಹಾಯ ಮಾಡುತ್ತದೆ.
ಕಲ್ಲಂಗಡಿಯಲ್ಲಿ ಎಲ್-ಸಿಟ್ರುಲಿನ್ ಎಂಬ ಅಮೈನೋ ಆಮ್ಲವಿದೆ. ಈ ಅಂಶವು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತನೆಗೊಂಡು ರಕ್ತನಾಳಗಳನ್ನು ವಿಶ್ರಾಂತಗೊಳಿಸಿ ರಕ್ತದ ಹರಿವನ್ನು ಸುಧಾರಿಸುತ್ತದೆ.
ಬಡವರ ಕೈಗೆ ಸುಲಭವಾಗಿ ಎಟಕುವ ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಂ ಅಧಿಕವಾಗಿದೆ. ಈ ಪೊಟ್ಯಾಸಿಯಂ ರಕ್ತದೊತ್ತಡ ಸಮತೋಲನಗೊಳಿಸಲು ಮತ್ತು ರಕ್ತನಾಳಗಳಲ್ಲಿನ ಒತ್ತಡ ಕಡಿಮೆ ಮಾಡಿ, ಆರೋಗ್ಯಕರ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ.
ಆವಕಾಡೋ ಯಾವುದೇ ರುಚಿಯನ್ನು ಹೊಂದಿಲ್ಲದಿದ್ದರೂ ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ. ಇದು ಒಮೆಗಾ-3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದ್ದು, ಹೃದಯ ಮತ್ತು ರಕ್ತನಾಳಗಳ ಆರೋಗ್ಯಕ್ಕೆ ಉತ್ತಮವಾಗಿದೆ.
ಈ ಹಣ್ಣುಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದರ ಜೊತೆಗೆ, ಸಾಕಷ್ಟು ನೀರು ಕುಡಿಯುವುದು ಮತ್ತು ನಿಯಮಿತ ವ್ಯಾಯಾಮ ಮಾಡುವುದೂ ಕೂಡ ಉತ್ತಮ ರಕ್ತ ಪರಿಚಲನೆಗೆ ಬಹಳ ಮುಖ್ಯ.