ಅನುಪಮಾ ನಯಾ ಅವತಾರ!

ರಮೇಶ್​ ಕುಮಾರ್​​ ಬಿ ಎಡಮೋಳೆ

ಅನು ಮ್ಯಾಜಿಕ್​ ಲುಕ್​

ಬ್ರೇಕ್ಅಪ್ ವದಂತಿಗಳ ನಡುವೆಯೂ ನಟಿ ಅನುಪಮಾ ಪರಮೇಶ್ವರನ್ ತಮ್ಮ ಹೊಸ ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಗಮನ ಸೆಳೆಯುತ್ತಿದ್ದಾರೆ.

ಮರ್ಮೇಯ್ಡ್-ಕಟ್ ಗೌನ್​

ಅನುಪಮಾ ಅವರು ಸಾಫ್ಟ್ ರೋಸ್-ಗೋಲ್ಡ್ ಬಣ್ಣದ, ಸೀಕ್ವಿನ್ಸ್, ಹರಳುಗಳು ಹಾಗೂ ಸೂಕ್ಷ್ಮವಾದ ಹೂವಿನ ವಿನ್ಯಾಸವಿರುವ ಹೆವಿಯಾಗಿ ಅಲಂಕರಿಸಿದ ಮರ್ಮೇಯ್ಡ್-ಕಟ್ ಗೌನ್ ಧರಿಸಿ ಮಿಂಚಿದ್ದಾರೆ.

ಗಮನ ಸೆಳೆದ ಬಣ್ಣದ ಕಲ್ಲುಗಳು

ಸ್ಕೂಪ್ ನೆಕ್‌ಲೈನ್ ಮತ್ತು ಫಿಟೆಡ್ ಬಾಡಿಸ್ ಹೊಂದಿರುವ ಈ ಉಡುಪಿನಲ್ಲಿ ಹಸಿರು ಹಾಗೂ ಗುಲಾಬಿ ಬಣ್ಣದ ಕಲ್ಲುಗಳ ಅಂದವಿದ್ದು, ಇದು ಡ್ರಾಮಾಟಿಕ್ ಫಿಶ್‌ಟೇಲ್ ಹೆಮ್‌ನೊಂದಿಗೆ ಕೊನೆಗೊಳ್ಳುತ್ತದೆ.

ಗುಂಗುರು ಕೂದಲು

ಈ ಸ್ಟೈಲಿಶ್ ಲುಕ್‌ಗೆ ಮ್ಯಾಚ್ ಆಗುವಂತೆ ಅವರು ಸ್ಟೇಟ್‌ಮೆಂಟ್ ರೂಬಿ-ಮತ್ತು-ಕ್ರಿಸ್ಟಲ್ ನೆಕ್‌ಲೈನ್ ಹಾಗೂ ಮ್ಯಾಚಿಂಗ್ ಇಯರಿಂಗ್ಸ್ ಧರಿಸಿದ್ದು, ಮುಕ್ತವಾಗಿ ಬಿಟ್ಟಿರುವ ಸುರುಳಿಯಾಕಾರದ (Curls) ಕೂದಲು ಅವರ ಅಂದವನ್ನು ಹೆಚ್ಚಿಸಿದೆ.

ಬ್ರೇಕಪ್​ ಬಳಿಕ ಹೊಸ ಲುಕ್​

ಇನ್ನು ತಮಿಳು ನಟ ಧ್ರುವ ವಿಕ್ರಮ್ ಅವರೊಂದಿಗೆ ತಳಕುಹಾಕಿಕೊಂಡಿರುವ ಬ್ರೇಕ್ಅಪ್ ವದಂತಿಗಳ ಹಿನ್ನೆಲೆಯಲ್ಲಿ ಅನುಪಮಾ ಅವರ ಈ ಗ್ಲಾಮರಸ್ ಲುಕ್ ಈಗ ಎಲ್ಲೆಡೆ ಚರ್ಚೆಯಲ್ಲಿದೆ.

ಕಾಮೆಂಟ್​ಗಳ ಸುರಿಮಳೆ

ಅನುಪಮಾ ಅವರ ಹೊಸ ಲುಕ್​ ನೋಡಿ ಫಿದಾ ಆಗಿರುವ ಅಭಿಮಾನಿಗಳು ಕಾಮೆಂಟ್​ಗಳ ಮೂಲಕ ನೆಚ್ಚಿನ ನಟಿಯ ಸೌಂದರ್ಯವನ್ನು ಗುಣಗಾನ ಮಾಡಿದ್ದಾರೆ.

ಹೊಸ ಸಿನಿಮಾ

ಸಿನಿಮಾ ವಿಚಾರಕ್ಕೆ ಬಂದರೆ, ಮುಂಬರುವ 'ಕ್ರೇಜಿ ಕಲ್ಯಾಣಂ' ಚಿತ್ರದ ಬಿಡುಗಡೆಗೂ ಮುನ್ನ ಚಿತ್ರತಂಡವು ಹೈದರಾಬಾದ್‌ನ ಖೈರತಾಬಾದ್ ಗಣೇಶ್ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದೆ.

ಯಶಸ್ಸಿಗಾಗಿ ಪ್ರಾರ್ಥನೆ

ಕ್ರೇಜಿ ಕಲ್ಯಾಣಂ ಚಿತ್ರದ ನಿರ್ದೇಶಕ ಭದ್ರಪ್ಪ ಗಜುಲಾ ಹಾಗೂ ನಾಯಕ ನಟ ಅಖಿಲ್ ರಾಜ್ ಉಡ್ಡೆಮಾರಿ ಜತೆ ಅನುಪಮಾ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಸಿನಿಮಾದ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಶ್ವೇತವರ್ಣದ ಉಡುಗೆಯಲ್ಲಿ ಗ್ಲಾಮರ್​ ರಾಶಿ!