ಐಶ್ವರ್ಯಾ ರಾಜೇಶ್​ ಬೋಲ್ಡ್​ ಫೋಟೋಶೂಟ್!​

ವಿಜಯವಾಣಿ ಸುದ್ದಿ ಜಾಲ

ಇತ್ತೀಚಿನ ಹಾಟ್​ ಫೋಟೋಶೂಟ್

ದಕ್ಷಿಣ ಭಾರತದ ಪ್ರತಿಭಾವಂತ ನಟಿ ಐಶ್ವರ್ಯಾ ರಾಜೇಶ್ ತಮ್ಮ ಸಾಂಪ್ರದಾಯಿಕ ಪಾತ್ರಗಳಷ್ಟೇ ಅಲ್ಲದೆ, ಜಾಲತಾಣದಲ್ಲಿ ಹಂಚಿಕೊಳ್ಳುವ ಗ್ಲಾಮರಸ್​ ಫೋಟೋಶೂಟ್‌ ಮೂಲಕವೂ ಸದಾ ಸುದ್ದಿಯಲ್ಲಿರುತ್ತಾರೆ. ಅವರ ಇತ್ತೀಚಿನ ಹಾಟ್​ ಫೋಟೋಶೂಟ್ ವೈರಲ್​ ಆಗಿದೆ.

ಶರ್ಟ್​ ಬಟನ್​ ಬಿಚ್ಚಿ ಪೋಸ್​

ನಟಿ ಐಶ್ವರ್ಯಾ ರಾಜೇಶ್ ಅವರು ತಮ್ಮ ಹೊಸ ಫೋಟೋಶೂಟ್​ನಲ್ಲಿ ನೀಲಿ ಬಣ್ಣದ ಶರ್ಟ್ ಧರಿಸಿ, ಅದರ ಬಟನ್​ ಬಿಚ್ಚಿ ವಿಭಿನ್ನವಾಗಿ ಹಾಗೂ ಬೋಲ್ಡ್ ಆಗಿ ಫೋಸ್‌ ನೀಡಿದ್ದಾರೆ.

ವೈರಲ್ ಆದ ಫೋಟೋಗಳು

ಸಾಮಾಜಿಕ ಜಾಲತಾಣದಲ್ಲಿ ಐಶ್ವರ್ಯಾ ಹಂಚಿಕೊಂಡಿರುವ ಈ ಲೇಟೆಸ್ಟ್ ಫೋಟೋಶೂಟ್ ಚಿತ್ರಗಳು ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಲೈಕ್ಸ್ ಹಾಗೂ ಕಾಮೆಂಟ್‌ಗಳನ್ನು ಪಡೆದುಕೊಂಡಿವೆ.

ಮಾರ್ಡನ್ ಶೈಲಿ

ಯಾವಾಗಲೂ ಸಾಂಪ್ರದಾಯಿಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಐಶ್ವರ್ಯಾ, ಈ ಫೋಟೋಗಳಲ್ಲಿ ಸಂಪೂರ್ಣ ಮಾಡರ್ನ್ ಮತ್ತು ಸ್ಟೈಲಿಶ್ ಅವತಾರದಲ್ಲಿ ಮಿಂಚಿದ್ದಾರೆ.

ಸರಳ ಹಾಗೂ ಆಕರ್ಷಕ ಮೇಕಪ್

ಅತಿ ಹೆಚ್ಚು ಮೇಕಪ್ ಇಲ್ಲದೆ, ಸ್ವಾಭಾವಿಕ ಸೌಂದರ್ಯದೊಂದಿಗೆ ಮುಕ್ತವಾಗಿ ಕಾಣಿಸಿಕೊಂಡಿರುವುದು ಈ ಫೋಟೋಶೂಟ್‌ನ ಮತ್ತೊಂದು ವಿಶೇಷತೆಯಾಗಿದೆ.

ಅಭಿಮಾನಿಗಳ ಮೆಚ್ಚುಗೆ

ಐಶ್ವರ್ಯಾರ ಹೊಸ ಗ್ಲಾಮರಸ್ ಅಂಡ್‌ ಬೋಲ್ಡ್ ಲುಕ್ ಅನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್ ಮಾಡುತ್ತಿದ್ದಾರೆ. ಅಲ್ಲದೆ, ಕಾಮೆಂಟ್​ ಮೂಲಕ ಕೊಂಡಾಡುತ್ತಿದ್ದಾರೆ.

ಸಂಕ್ರಾಂತಿಗೆ ವಸ್ತುನಂ ಹಿಟ್​

ಕಳೆದ ವರ್ಷ ತೆರೆಕಂಡ ಬ್ಲಾಕ್‌ಬಸ್ಟರ್ ತೆಲುಗು ಚಿತ್ರ 'ಸಂಕ್ರಾಂತಿಗೆ ವಸ್ತುನಂ' ಮೂಲಕ ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದ ಐಶ್ವರ್ಯಾ ಅವರು, ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ.

ಮುಂಬರುವ ಪ್ರಾಜೆಕ್ಟ್‌ಗಳು

ತೆಲುಗಿನ 'ಮಹೇಂದ್ರಗಿರಿ ವರಾಹಿ' ಚಿತ್ರದ ಜೊತೆಗೆ ಕೆಲವು ತಮಿಳು ಮತ್ತು ಕನ್ನಡ ಪ್ರಾಜೆಕ್ಟ್‌ಗಳಲ್ಲಿ ನಟಿಸುತ್ತಿದ್ದು, ಬಹುಭಾಷ ನಟಿ ಎಂಬ ಹೆಗ್ಗಳಿಕೆ ಗಳಿಸುವತ್ತ ಹೆಜ್ಜೆ ಹಾಕಿದ್ದಾರೆ.

ಮಿನಿ ಸ್ಕರ್ಟ್​ನಲ್ಲಿ ಮಿಂಚಿದ ರಾಜಾ ಸಾಬ್​ ಬ್ಯೂಟಿ