ವಿಜಯವಾಣಿ ಸುದ್ದಿ ಜಾಲ
ಚಿತ್ರರಂಗದ ಏಳು-ಬೀಳುಗಳ ನಡುವೆಯೂ ನಟಿ ರಿಧಿ ಕುಮಾರ್ ತಮ್ಮ ಲೇಟೆಸ್ಟ್ ಫೋಟೋಶೂಟ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.
ಪಾರ್ಕ್ ಒಂದರಲ್ಲಿ ಪುಸ್ತಕ ಮತ್ತು ಫೋನ್ ಜತೆ ರಿಲ್ಯಾಕ್ಸ್ ಮೂಡ್‌ನಲ್ಲಿರುವ ಅವರ ಈ ಹೊಸ ಲುಕ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಕ್ರೀಮ್ ಬಣ್ಣದ ಟ್ಯಾಂಕ್ ಟಾಪ್ ಜತೆಗೆ ರಫಲ್ಡ್ ರೆಡ್ ಮಿನಿ ಸ್ಕರ್ಟ್ ಹಾಗೂ ಸ್ಟೇಟ್‌ಮೆಂಟ್ ಬೆಲ್ಟ್ ಧರಿಸಿ ರಿಧಿ ಕುಮಾರ್ ಅತ್ಯಂತ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಯಾವುದೇ ಕೃತಕ ಅಡಂಬರವಿಲ್ಲದೆ ಅತ್ಯಂತ ಸಹಜವಾದ ಸೌಂದರ್ಯವನ್ನು ರಿಧಿ ಕುಮಾರ್ ಅವರ ಹೊಸ ಫೋಟೋಗಳು ಬಿಂಬಿಸುತ್ತಿವೆ.
ಮುಕ್ತವಾಗಿ ಬಿಟ್ಟ ಚೆಲ್ಲಾಪಿಲ್ಲಿಯಾದ ಕೂದಲಿನೊಂದಿಗೆ ಕಣ್ಣು ಮುಚ್ಚಿ ಕುಳಿತಿರುವ ಭಂಗಿ, ಅವರ ಆರಾಮದಾಯಕ ಮತ್ತು ಪ್ರಶಾಂತ ಮನಸ್ಥಿತಿಯನ್ನು ಅತ್ಯಂತ ಸುಂದರವಾಗಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
ಮಿನಿ ಸ್ಕರ್ಟ್ ಲುಕ್ನಲ್ಲಿ ರಿಧಿ ಕುಮಾರ್ ಅವರನ್ನು ನೋಡಿ ಫಿದಾ ಆಗಿರುವ ಅಭಿಮಾನಿಗಳು ಕಾಮೆಂಟ್ಗಳ ಸುರಿಮಳೆ ಮೂಲಕ ಟಾಲಿವುಡ್ ಸುಂದರಿಯ ಮೈಮಾಟವನ್ನು ಬಣ್ಣಿಸುತ್ತಿದ್ದಾರೆ.
ಸಣ್ಣ ಬಜೆಟ್‌ನ 'ಲವರ್' ಚಿತ್ರದಿಂದ ಹಿಡಿದು ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ 'ರಾಧೆ ಶ್ಯಾಮ್' ಹಾಗೂ 'ದಿ ರಾಜಾ ಸಾಬ್' ವರೆಗೆ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ನಟಿಸಿದರೂ ಬಾಕ್ಸ್‌ಆಫೀಸ್ ಯಶಸ್ಸು ಮಾತ್ರ ರಿಧಿಗೆ ಇನ್ನೂ ಒಲಿದುಬಂದಿಲ್ಲ.
ಸಿನಿಮಾಗಳ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್ ಆಗಿರುವ ರಿಧಿ ಕುಮಾರ್, ತಮ್ಮ ಹೊಸ ಹೊಸ ಗ್ಲಾಮರಸ್ ಹಾಗೂ ವಿಭಿನ್ನ ಶೈಲಿಯ ಫೋಟೋಗಳ ಮೂಲಕ ಆಗಾಗ ಚರ್ಚೆ ಹುಟ್ಟುಹಾಕುತ್ತಿರುತ್ತಾರೆ.