ವಿಜಯವಾಣಿ ಸುದ್ದಿ ಜಾಲ
'ಕೆಜಿಎಫ್' (KGF) ಸಿನಿಮಾದ ಮೂಲಕ ದೇಶಾದ್ಯಂತ ಅಪಾರ ಪ್ರಸಿದ್ಧಿ ಗಳಿಸಿದ ನಟಿ ಶ್ರೀನಿಧಿ ಶೆಟ್ಟಿ ( Srinidhi Shetty ), ತಮ್ಮ ಹೊಸ ಗ್ಲಾಮರಸ್ ಫೋಟೋಶೂಟ್ ಮೂಲಕ ಮತ್ತೊಮ್ಮೆ ನೆಟ್ಟಿಗರ ಗಮನ ಸೆಳೆದಿದ್ದಾರೆ.
ದೀಪಾವಳಿ ಹಬ್ಬದ ಸಂಭ್ರಮಕ್ಕಾಗಿ ಶ್ರೀನಿಧಿ ಅವರು ಧರಿಸಿದ್ದ ತಿಳಿ ಗುಲಾಬಿ ಬಣ್ಣದ ಸೀರೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಮೆಚ್ಚುಗೆಯನ್ನು ಗಳಿಸಿದೆ.
ಚಿನ್ನದ ಎಲೆಯ ಮಾದರಿಯ (Gold leaf motifs) ವಿನ್ಯಾಸ ಹಾಗೂ ಜರಿ ಗಡಿಯಿರುವ (Sequin border) ಕಣ್ಣುಕೋರೈಸುವ ಹಾಟ್ ಪಿಂಕ್ ಸಾಟಿನ್ ಸೀರೆಯಲ್ಲಿ ಅತ್ಯಂತ ಗ್ಲಾಮರಸ್ ಆಗಿ ಶ್ರೀನಿಧಿ ಕಾಣಿಸಿಕೊಂಡಿದ್ದಾರೆ.
ಸೀರೆಗೆ ತಕ್ಕಂತೆ ಮುಂಭಾಗದಲ್ಲಿ ಸೂಕ್ಷ್ಮವಾದ ಚಿನ್ನದ ಕಸೂತಿ ಕೆಲಸ (Gold embroidery) ಹೊಂದಿರುವ 'ವಿ-ನೆಕ್' (V-neck) ಶೈಲಿಯ ಬ್ಲೌಸ್ ಧರಿಸಿ ತಮ್ಮ ಲುಕ್ ಹೆಚ್ಚಿಸಿಕೊಂಡಿದ್ದಾರೆ.
ಕೂದಲಿಗೆ ಜಡೆ ಹೆಣೆದು, ಲಘುವಾದ ಮೇಕಪ್ ಹಾಗೂ ಹಣೆಯ ಮೇಲಿನ ಸಣ್ಣ ಬಿಂದಿಯೊಂದಿಗೆ, ಸಾಂಪ್ರದಾಯಿಕ ಜುಮ್ಕಿ, ಉಂಗುರ ಮತ್ತು ಬಳೆಗಳನ್ನು ಧರಿಸಿ ಕಂಪ್ಲೀಟ್ ಫೆಸ್ಟಿವ್ ಲುಕ್ ನೀಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ನಿರ್ದೇಶಕ ಅನೂಪ್ ಭಂಡಾರಿ ಅವರ ಮುಂಬರುವ ಹೊಸ ಚಲನಚಿತ್ರದಲ್ಲಿ ಶ್ರೀನಿಧಿ ನಟಿಸುತ್ತಿದ್ದು, ಸ್ಯಾಂಡಲ್‌ವುಡ್‌ಗೆ ಮರಳಲು ಸಜ್ಜಾಗಿದ್ದಾರೆ.
ಇತ್ತೀಚೆಗೆ 'ಆದರ್ಶ ಕುಟುಂಬಂ ಹೌಸ್ ನಂ: 47' ಚಿತ್ರದಲ್ಲಿ 'ಸ್ವರ್ಣ' ಎಂಬ ಪಾತ್ರದಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.
ಶ್ರೀನಿಧಿ ಅಭಿನಯಿಸಿದ್ದ 'ಎಕೆ47' ಹಾಗೂ 'ತೆಲುಸು ಕದಾ' ಎಂಬ ಎರಡೂ ತೆಲುಗು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಕಾರಣ, ಟಾಲಿವುಡ್‌ನಲ್ಲಿ ಅವರಿಗೆ ಮುಂದಿನ ಅವಕಾಶಗಳು ಹೇಗೆ ದೊರೆಯಲಿವೆ ಎಂಬುದನ್ನು ಕಾದುನೋಡಬೇಕಿದೆ.