ವಿಜಯವಾಣಿ ಸುದ್ದಿ ಜಾಲ
ತಮ್ಮ ನೈಸರ್ಗಿಕ ಅಭಿನಯ ಮತ್ತು ಸೌಂದರ್ಯದಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿರುವ ಬಾಲಿವುಡ್ ಬ್ಯೂಟಿ ಮೃಣಾಲ್ ಠಾಕೂರ್, ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹೊಸ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
ದೀಪಾವಳಿ ಸಂಭ್ರಮದ ನಡುವೆ ಮೃಣಾಲ್ ಠಾಕೂರ್ ಅವರು ಒಂದಾದ ಮೇಲೊಂದರಂತೆ ನೀಡುತ್ತಿರುವ ಅತ್ಯಾಕರ್ಷಕ ಲುಕ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ನೆಟ್ಟಿಗರ ಗಮನ ಸೆಳೆಯುತ್ತಿವೆ.
ಮೃಣಾಲ್ ಸಂಪೂರ್ಣವಾಗಿ ಕನ್ನಡಿ ಕೆಲಸ (ಮಿರರ್ ವರ್ಕ್) ಹಾಗೂ ಸೂಕ್ಷ್ಮವಾದ ಕಸೂತಿಯಿಂದ ಕೂಡಿದ ಐವರಿ ಬಣ್ಣದ ಸೀರೆಯನ್ನು ಉಟ್ಟು ಹಬ್ಬದ ವಾತಾವರಣಕ್ಕೆ ತಕ್ಕಂತೆ ಕಂಗೊಳಿಸಿದ್ದಾರೆ.
ಈ ಸೀರೆಗೆ ಹೊಂದುವಂತೆ ಅವರು ಶಾರ್ಟ್ ಕ್ಯಾಪ್ ಸ್ಲೀವ್ಸ್ ಮತ್ತು ಸ್ಕ್ಯಾಲಪ್ಡ್ ನೆಕ್‌ಲೈನ್ ಹೊಂದಿರುವ ಮ್ಯಾಚಿಂಗ್ ಬ್ಲೌಸ್ ಧರಿಸಿ ತಮ್ಮ ಲುಕ್ ಹೆಚ್ಚಿಸಿಕೊಂಡಿದ್ದಾರೆ.
ಬಟ್ಟೆಗೆ ತಕ್ಕಂತೆ ದೊಡ್ಡ ಕಲ್ಲುಗಳನ್ನು ಹೊಂದಿರುವ ಪೋಲ್ಕಿ ಚೋಕರ್ ಹಾರ ಹಾಗೂ ಮ್ಯಾಚಿಂಗ್ ಓಲೆಗಳನ್ನು ಧರಿಸುವ ಮೂಲಕ ದೀಪಾವಳಿಯ ಹಬ್ಬದ ಕಳೆಯನ್ನು ಪೂರ್ಣಗೊಳಿಸಿದ್ದಾರೆ.
ತಮ್ಮ ಕೇಶರಾಶಿಯನ್ನು ಮೆದುವಾದ ಅಲೆಗಳಂತೆ (ಸಾಫ್ಟ್ ವೇವ್ಸ್) ಪಕ್ಕಕ್ಕೆ ಬಿಟ್ಟು, ಕಣ್ಣುಗಳಿಗೆ ತೀಕ್ಷ್ಣವಾದ ಸ್ಪರ್ಶ ಹಾಗೂ ರೇಷ್ಮೆಯಂತಹ ರೋಸಿ ನ್ಯೂಡ್ ಲಿಪ್‌ಸ್ಟಿಕ್‌ನೊಂದಿಗೆ ಸರಳ ಹಾಗೂ ಸುಂದರ ಮೇಕಪ್ ಆಯ್ದುಕೊಂಡಿದ್ದಾರೆ.
ಪೀಚ್ ಬಣ್ಣದ ಹಿನ್ನೆಲೆಯಲ್ಲಿ ಕ್ಯಾಮೆರಾ ಕ್ಯಾಪ್ಚರ್ ಪ್ರತಿ ಫ್ರೇಮ್‌ನಲ್ಲೂ ಅವರ ಉಡುಪಿನಲ್ಲಿದ್ದ ಮಿರರ್ ವರ್ಕ್ ಬೆಳಕನ್ನು ಹಿಡಿದಿಟ್ಟು ಅತ್ಯಂತ ನಯನಮನೋಹರವಾಗಿ ಕಾಣುತ್ತಿದೆ.
ಸೀರೆಯಲ್ಲೂ ತಮ್ಮ ಮಾದಕತೆ ತೋರಿರುವ ಮೃಣಾಲ್ ಅವರ ಹೊಸ ಫೋಟೋಶೂಟ್ಗೆ ಫಿದಾ ಆಗಿರುವ ಅಭಿಮಾನಿಗಳು ಕಾಮೆಂಟ್ಗಳ ಮೂಲಕ ನೆಚ್ಚಿನ ನಟಿಯ ಮೈಮಾಟವನ್ನು ಕೊಂಡಾಡುತ್ತಿದ್ದಾರೆ.
ಕಳೆದ ಕೆಲ ಸಿನಿಮಾಗಳು ನಿರೀಕ್ಷಿತ ಯಶಸ್ಸು ಕಾಣದಿದ್ದರೂ, ಮೃಣಾಲ್ ಅವರ ನಟನಾ ಕೌಶಲಕ್ಕೆ ಉತ್ತಮ ಬೇಡಿಕೆಯಿದ್ದು, ಮುಂಬರುವ ವರ್ಷದಲ್ಲಿ ಅವರು ದೊಡ್ಡ ಹಾಗೂ ಯಶಸ್ವಿ ಪ್ರಾಜೆಕ್ಟ್‌ಗಳ ಮೂಲಕ ಮತ್ತೆ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.