ಮತ್ತೆ ಬೋಲ್ಡ್​ ಅವತಾರದಲ್ಲಿ ದಿವ್ಯಾ ಸುರೇಶ್​..! Divya Suresh

ವಿಜಯವಾಣಿ ಸುದ್ದಿ ಜಾಲ

ದಿವ್ಯ ದರ್ಶನ

ಚಂದನವನದ ಬ್ಯೂಟಿ ದಿವ್ಯಾ ಸುರೇಶ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಹೊಸ ಬೋಲ್ಡ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿವೆ.

ಟ್ರೆಂಡಿ ಲುಕ್‌

ನಟಿ ದಿವ್ಯಾ ಸುರೇಶ್ ಅವರು ನೀಲಿ ಬಣ್ಣದ ಸ್ಲೀವ್‌ಲೆಸ್ ಟಾಪ್ ಮತ್ತು ಡೆನಿಮ್ ಜೀನ್ಸ್ ಧರಿಸಿ, ತಲೆಯಲ್ಲಿ ಹೂವು ಹಾಗೂ ಕಪ್ಪು ಗ್ಲಾಸ್ ಧರಿಸಿ ಅತ್ಯಂತ ಗ್ಲಾಮರಸ್ ಮತ್ತು ಟ್ರೆಂಡಿ ಲುಕ್‌ನಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ

ಬಿಗ್ ಬಾಸ್' ತಂದುಕೊಟ್ಟ ಜನಪ್ರಿಯತೆ

ದಿವ್ಯಾ ಸುರೇಶ್ ಅವರು ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 8' ರಲ್ಲಿ ಸ್ಪರ್ಧಿಯಾಗಿ ಭಾಗವಹಿಸುವ ಮೂಲಕ ಕರ್ನಾಟಕದ ಮನೆಮಾತಾದರು. ಈ ಶೋ ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿತು.

ಮಾಡೆಲಿಂಗ್ ಕ್ಷೇತ್ರದಿಂದ ಎಂಟ್ರಿ

ಮೂಲತಃ ಉಡುಪಿಯವರಾದ ದಿವ್ಯಾ, ಬೆಂಗಳೂರಿನಲ್ಲಿ ನೆಲೆಸಿದ್ದು ತಮ್ಮ ವೃತ್ತಿಜೀವನವನ್ನು ಮಾಡೆಲಿಂಗ್ ಮೂಲಕ ಆರಂಭಿಸಿದರು. ಪ್ರಮುಖ ಫ್ಯಾಷನ್ ಶೋಗಳು ಹಾಗೂ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದರು.

ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟಿ

ಮಾಡೆಲಿಂಗ್ ಮತ್ತು ಬಿಗ್ ಬಾಸ್ ನಂತರ ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಗುರುತಿಸಿಕೊಂಡರು. ಹಿರಣ್ಯ, ಕೆಂಪು ಹಳದಿ ಹಸಿರು, ರೌಡಿ ಬೇಬಿ ಸೇರಿದಂತೆ ಕೆಲ ಚಿತ್ರಗಳಲ್ಲಿ, ಸೀರಿಯಲ್​ಗಳಲ್ಲಿ ಹಾಗೂ ವೆಬ್ ಸೀರೀಸ್‌ಗಳಲ್ಲಿ ನಟಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯ

ಇನ್‌ಸ್ಟಾಗ್ರಾಮ್ ಸೇರಿದಂತೆ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ದಿವ್ಯಾ, ತಮ್ಮ ಹೊಸ ಫೋಟೋಶೂಟ್‌ಗಳು, ಪ್ರವಾಸದ ಕ್ಷಣಗಳು ಮತ್ತು ವರ್ಕೌಟ್ ವಿಡಿಯೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.

ಶ್ವೇತ ಸುಂದರಿ ದಿವ್ಯಾ

ಇದೀಗ ದಿವ್ಯಾ ಹಂಚಿಕೊಂಡಿರುವ ಫೋಟೋಗಳಲ್ಲಿ ಚಿಕ್ಕಮಗಳೂರಿನ ಹಸಿರಾದ ಪ್ರಕೃತಿಯ ನಡುವೆ, ಬಿಳಿ ಬಣ್ಣದ ನೆಟ್ ಡಿಸೈನ್ ಉಡುಪನ್ನು ಧರಿಸಿ, ಕಿವಿಯ ಹಿಂದೆ ಹಳದಿ ಹೂವನ್ನಿಟ್ಟುಕೊಂಡು ಅತ್ಯಂತ ಸುಂದರವಾಗಿ ಕಂಗೊಳಿಸುತ್ತಿದ್ದಾರೆ.

ಫ್ಯಾನ್ಸ್​ ಫಿದಾ

ಸದ್ಯ ದಿವ್ಯಾ ಸುರೇಶ್​ ಅವರ ಫೋಟೋಗಳು ಜಾಲತಾಣದಲ್ಲಿ ವೈರಲ್​ ಆಗಿದ್ದು, ಅವರ ಮೈಮಾಟವನ್ನು ನೋಡಿ ಫ್ಯಾನ್ಸ್​ ಫಿದಾ ಆಗಿ, ಕಾಮೆಂಟ್​ಗಳ ಮೂಲಕ ಸೌಂದರ್ಯವನ್ನು ವರ್ಣಿಸುತ್ತಿದ್ದಾರೆ.

ಪಡ್ಡೆ ಹುಡುಗರ ಬೋಲ್ಡ್​ ಬ್ಯೂಟಿ ದಿವಿ! Actress Divi