ವಿಜಯವಾಣಿ ಸುದ್ದಿ ಜಾಲ
ತಿರುಮಲ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ಭಕ್ತರೊಬ್ಬರು ಬರೋಬ್ಬರಿ 206 ಕೋಟಿ ರೂಪಾಯಿ ಮೌಲ್ಯದ 121 ಕೆಜಿ ಚಿನ್ನಾಭರಣಗಳನ್ನು ( Gold Donation ) ಸಮರ್ಪಿಸಿದ್ದು, ಆ ದಿವ್ಯ ಆಭರಣಗಳ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಕಲಿಯುಗದ ದೈವ ತಿರುಮಲ ವೆಂಕಟೇಶ್ವರ ಸ್ವಾಮಿಗೆ ವರ್ಧಮಾನ್ ಜೈನ್ ದಂಪತಿ ಐತಿಹಾಸಿಕ ಹಾಗೂ ಅತ್ಯಂತ ದುಬಾರಿ ಚಿನ್ನದ ಕಾಣಿಕೆಯನ್ನು ಸಮರ್ಪಿಸಿದ್ದಾರೆ.
ಈ ಭಕ್ತ ದಂಪತಿ ತಿಮ್ಮಪ್ಪನಿಗೆ ಅರ್ಪಿಸಿರುವ ಒಟ್ಟು ಚಿನ್ನಾಭರಣಗಳ ಮೌಲ್ಯ ಬರೋಬ್ಬರಿ 206 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಶ್ರೀವಾರಿಯ ಅಲಂಕಾರಕ್ಕಾಗಿ ಬರೋಬ್ಬರಿ 121 ಕಿಲೋಗ್ರಾಂ ತೂಕದ ಅಪರಂಜಿ ಚಿನ್ನವನ್ನು ಈ ದಂಪತಿಗಳು ದೇಣಿಗೆಯಾಗಿ ನೀಡಿದ್ದಾರೆ.
ಈ 121 ಕೆಜಿ ಚಿನ್ನದಿಂದ ತಿಮ್ಮಪ್ಪನಿಗಾಗಿ ವಿಶೇಷವಾಗಿ 46 ವಿವಿಧ ಬಗೆಯ ಅತ್ಯಾಕರ್ಷಕ ಆಭರಣಗಳನ್ನು ತಯಾರಿಸಿ ಸಮರ್ಪಿಸಲಾಗಿದೆ.
ಅತ್ಯಂತ ಸೂಕ್ಷ್ಮ ಕೆತ್ತನೆ ಹಾಗೂ ಕುಶಲಕರ್ಮಿಗಳ ಕೈಚಳಕದಿಂದ ಸಿದ್ಧಗೊಂಡಿರುವ ಈ ಆಭರಣಗಳನ್ನು ಶ್ರೀವಾರಿಯ ನಿತ್ಯ ಸೇವೆಗೆ ಅರ್ಪಿಸಲಾಗಿದೆ.
ಚಿನ್ನದ ಕಾಂತಿಯಿಂದ ಕಂಗೊಳಿಸುತ್ತಿರುವ ಈ 46 ಆಭರಣಗಳ ಸೊಬಗು ಭಕ್ತರ ಕಣ್ಮನ ಸೆಳೆಯುತ್ತಿದ್ದು, ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದೆ.
ತಿಮ್ಮಪ್ಪನಿಗೆ ಸಮರ್ಪಿಸಲಾಗಿರುವ ಈ ಝಗಮಗಿಸುವ ಚಿನ್ನಾಭರಣಗಳ ಫೋಟೋಗಳು ಇದೀಗ ಅಂತರ್ಜಾಲದಲ್ಲಿ ಭಾರಿ ವೈರಲ್ ಆಗುತ್ತಿವೆ.
ತಿರುಪತಿ ತಿಮ್ಮಪ್ಪನಿಗೆ ಭಕ್ತರೊಬ್ಬರು ನೀಡಿರುವ ಆಭರಣಗಳ ಫೋಟೋ ವೈರಲ್ ಆಗಿದ್ದು, ಅದನ್ನು ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಕಾಮೆಂಟ್ಗಳ ಸುರಿಮಳೆಯೊಂದಿಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ.