ವಿಶ್ವ ಸುಂದರಿ ಜೆನ್ನಿಫರ್ ಬ್ಯಾರೆಟೊ ಮಾದಕ ಫೋಟೋಗಳು! Jennifer Barreto

ವಿಜಯವಾಣಿ ಸುದ್ದಿ ಜಾಲ

ಹಳೇ ಕಲ್ಪನೆ ಸುಳ್ಳಾಗಿಸಿದ ಜೆನ್ನಿಫರ್

ಮದುವೆ ಮತ್ತು ತಾಯ್ತನದ ನಂತರ ಮಹಿಳೆಯರ ಕನಸುಗಳಿಗೆ ತೆರೆ ಬೀಳುತ್ತದೆ ಎಂಬ ಹಳೆಯ ಕಲ್ಪನೆಗಳನ್ನು ಸುಳ್ಳಾಗಿಸಿ, 7 ವರ್ಷದ ಮಗುವಿನ ತಾಯಿ 2026ರ 'ಮಿಸ್ ಯೂನಿವರ್ಸ್' ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಇತಿಹಾಸ ಬರೆದಿದ್ದಾರೆ.

ಸೌಂದರ್ಯ ಸ್ಪರ್ಧೆಯಲ್ಲಿ ಹೊಸ ದಾಖಲೆ

ದಶಕಗಳಿಂದ ಕೇವಲ ಅವಿವಾಹಿತ ಯುವತಿಯರಿಗೆ ಮಾತ್ರ ಸೀಮಿತವಾಗಿದ್ದ ವಿಶ್ವಮಟ್ಟದ ಸೌಂದರ್ಯ ಸ್ಪರ್ಧೆಗಳ ನಿಯಮಗಳು ಬದಲಾಗಿದ್ದು, 2026ರ ಮಿಸ್ ಯೂನಿವರ್ಸ್ ಸ್ಪರ್ಧೆಯು ಐತಿಹಾಸಿಕ ಕ್ಷಣವೊಂದಕ್ಕೆ ಸಾಕ್ಷಿಯಾಗಿದೆ.

7 ವರ್ಷದ ಮಗುವಿನ ತಾಯಿಗೆ ಕಿರೀಟ

100ಕ್ಕೂ ಹೆಚ್ಚು ದೇಶಗಳ ಸ್ಪರ್ಧಿಗಳನ್ನು ಹಿಂದಿಕ್ಕಿ ಪೋರ್ಟೊ ರಿಕೊ ದೇಶದ ಜೆನ್ನಿಫರ್ ಬ್ಯಾರೆಟೊ 'ಮಿಸ್ ಯೂನಿವರ್ಸ್ 2026' ಕಿರೀಟವನ್ನು ಗೆದ್ದಿದ್ದಾರೆ; ವಿಶೇಷವೆಂದರೆ ಇವರು ವಿವಾಹಿತರಾಗಿದ್ದು, 7 ವರ್ಷದ ಮಗಳ ತಾಯಿಯಾಗಿದ್ದಾರೆ.

ಇದೇ ವರ್ಷ ಮಾಡೆಲಿಂಗ್ ಲೋಕಕ್ಕೆ ಎಂಟ್ರಿ

ಇದೇ ವರ್ಷ ಮಾಡೆಲಿಂಗ್ ಲೋಕಕ್ಕೆ ಎಂಟ್ರಿ

ಅಚ್ಚರಿಯ ಸಂಗತಿಯೆಂದರೆ, ಜೆನ್ನಿಫರ್ ಬ್ಯಾರೆಟೊ ಅವರು ಸೌಂದರ್ಯ ಸ್ಪರ್ಧೆಗಳ ಜಗತ್ತಿಗೆ ಕಾಲಿಟ್ಟಿದ್ದೇ ಇದೇ ವರ್ಷ. ಮೊದಲ ಪ್ರಯತ್ನದಲ್ಲೇ ವಿಶ್ವ ಸುಂದರಿ ಪಟ್ಟಕ್ಕೇರಿ ಎಲ್ಲರ ಹುಬ್ಬೇರಿಸಿದ್ದಾರೆ.

ಸೌಂದರ್ಯದ ಜತೆಗೆ ಉನ್ನತ ಶಿಕ್ಷಣ

ಜೆನ್ನಿಫರ್ ಕೇವಲ ಸೌಂದರ್ಯಕ್ಕೆ ಮಾತ್ರ ಸೀಮಿತವಾಗಿಲ್ಲ, ಅವರು ಮನೋವಿಜ್ಞಾನ (Psychology) ಮತ್ತು ಕ್ಲಿನಿಕಲ್ ಸೋಶಿಯಲ್ ವರ್ಕ್ ವಿಷಯಗಳಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು (Master's Degrees) ಪಡೆದಿದ್ದಾರೆ.

ಭಾರತದ ಸ್ಪರ್ಧಿ ಟಾಪ್ 30ಕ್ಕೆ ಲಗ್ಗೆ

ಈ ಬಾರಿಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕೇರಳದ 19 ವರ್ಷದ ಕಝಿಯಾ ಲಿಜ್ ಮೆಜೊ ಅತ್ಯುತ್ತಮ ಪ್ರದರ್ಶನ ನೀಡಿ ಟಾಪ್ 30ರ ಹಂತಕ್ಕೆ ತಲುಪಿದರೂ, ಮುಂದಿನ ಸುತ್ತಿಗೆ ಆಯ್ಕೆಯಾಗಲು ಸಾಧ್ಯವಾಗಲಿಲ್ಲ.

ಭಾರತದ ಕಾಯುವಿಕೆ ಮುಂದುವರಿಕೆ

2021ರಲ್ಲಿ ಹರ್ನಾಜ್ ಸಂಧು ಭುವನ ಸುಂದರಿ ಕಿರೀಟ ಗೆದ್ದ ನಂತರ, ಭಾರತಕ್ಕೆ ಮತ್ತೊಂದು ಮಿಸ್ ಯೂನಿವರ್ಸ್ ಪ್ರಶಸ್ತಿ ಒಲಿಯುವ ನಿರೀಕ್ಷೆ ಈ ಬಾರಿಯೂ ಕೈಗೂಡದೆ ಕಾಯುವಿಕೆ ಮುಂದುವರಿದಿದೆ.

ಮಹಿಳೆಯರಿಗೆ ಸ್ಫೂರ್ತಿಯ ಚಿಲುಮೆ

ಮದುವೆ ಮತ್ತು ಮಕ್ಕಳಾದ ನಂತರ ಸಾಧನೆಯ ಹಾದಿ ಮುಗಿಯಿತು ಎನ್ನುವವರಿಗೆ ಜೆನ್ನಿಫರ್ ಅವರ ಈ ಗೆಲುವು ತಕ್ಕ ಉತ್ತರವಾಗಿದ್ದು, ಜಗತ್ತಿನಾದ್ಯಂತ ಲಕ್ಷಾಂತರ ಮಹಿಳೆಯರು ತಮ್ಮ ಕನಸುಗಳನ್ನು ಬೆನ್ನಟ್ಟಲು ಹೊಸ ಸ್ಫೂರ್ತಿ ನೀಡಿದೆ.

ಗ್ಲಾಮರಸ್​ ಬ್ಯೂಟಿ ಡಿಂಪಲ್ ಹಯಾತಿ ಹಾಟ್​ ಲುಕ್​! Dimple Hayathi