ವಿಜಯವಾಣಿ ಸುದ್ದಿ ಜಾಲ
ದಕ್ಷಿಣ ಭಾರತದ ಗ್ಲಾಮರಸ್ ನಟಿ ಡಿಂಪಲ್ ಹಯಾತಿ ( Dimple Hayathi ) ತಮ್ಮ ಸೌಂದರ್ಯ ಮತ್ತು ಫ್ಯಾಷನ್ ಸೆನ್ಸ್ ಮೂಲಕವೇ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ನಡೆದ 'ಭೋಗಿ' ಸಿನಿಮಾದ ಮ್ಯೂಸಿಕಲ್ ಈವೆಂಟ್‌ನಲ್ಲಿ ಶಾರ್ಟ್ ಗೌನ್ ಧರಿಸಿ ಮಿಂಚಿದ್ದಾರೆ.
'ಭೋಗಿ' ಸಿನಿಮಾದ ಮ್ಯೂಸಿಕಲ್ ಈವೆಂಟ್‌ಗೆ ಡಿಂಪಲ್ ಹಯಾತಿ ಅತ್ಯಂತ ಆಕರ್ಷಕವಾದ ಶಾರ್ಟ್ ಗೌನ್ ಧರಿಸಿ ಆಗಮಿಸಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಡಿಂಪಲ್ ಹಯಾತಿ ಅವರ ಮಾಡರ್ನ್ ಮತ್ತು ಬೋಲ್ಡ್ ಲುಕ್ ಕಂಡು ಫಿದಾ ಆಗಿರುವ ಅಭಿಮಾನಿಗಳು ಕಾಮೆಂಟ್ಗಳ ಮೂಲಕ ನೆಚ್ಚಿನ ನಟಿಯ ಮೈಮಾಟವನ್ನು ಕೊಂಡಾಡುತ್ತಿದ್ದಾರೆ.
ಸಂಪತ್ ನಂದಿ ನಿರ್ದೇಶನದ, ಶರ್ವಾನಂದ್ ನಾಯಕನಾಗಿ ನಟಿಸಿರುವ ಪ್ಯಾನ್-ಇಂಡಿಯಾ ಸಿನಿಮಾ 'ಭೋಗಿ'ಯಲ್ಲಿ ಡಿಂಪಲ್ ಹಯಾತಿ ಅವರು 'ಮಂದಾರಂ' ಎಂಬ ಬೋಲ್ಡ್ ಮತ್ತು ಪವರ್‌ಫುಲ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಇದುವರೆಗೆ ಕೇವಲ ಗ್ಲಾಮರಸ್ ಪಾತ್ರಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದ ಡಿಂಪಲ್ ಅವರಿಗೆ 'ಭೋಗಿ' ಸಿನಿಮಾ ದೊಡ್ಡ ಬ್ರೇಕ್ ನೀಡುವ ನಿರೀಕ್ಷೆಯಿದೆ.
ನವೆಂಬರ್ 27ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರವು ತಮ್ಮ ಮೇಲಿರುವ ಇಮೇಜ್ ಅನ್ನು ಬದಲಾಯಿಸಿ, ನಟನೆಗೆ ಹೆಚ್ಚಿನ ಪ್ರಾಮುಖ್ಯತೆ ಇರುವ ಪಾತ್ರವಾಗಿ ವೃತ್ತಿಜೀವನಕ್ಕೆ ಹೊಸ ತಿರುವು ನೀಡಲಿದೆ ಎಂದು ಹಯಾತಿ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಸಿನಿಮಾದ ಪ್ರಚಾರದ ಕಾರ್ಯಕ್ರಮಗಳಲ್ಲಿ ನಾಯಕ ಶರ್ವಾನಂದ್ ಮತ್ತು ಡಿಂಪಲ್ ಹಯಾತಿ ನಡುವಿನ ಆತ್ಮೀಯ ಬಾಂಧವ್ಯ ಗಮನ ಸೆಳೆದಿದೆ. ವೇದಿಕೆಯ ಮೇಲೆ ಇಬ್ಬರೂ ನಗುನಗುತ್ತಾ ಮಾತನಾಡುತ್ತಿರುವ ವಿಡಿಯೋಗಳು ವೈರಲ್ ಆಗಿವೆ.
ಪ್ರಚಾರದ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ, ಡಿಂಪಲ್ ಹಯಾತಿ ಅವರಿಗೆ ಈಗಾಗಲೇ ಮದುವೆಯಾಗಿದೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದ್ದವು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ನಟಿ, "ನನಗೆ ಇನ್ನೂ ಮದುವೆಯಾಗಿಲ್ಲ" ಎಂದು ನಗುತ್ತಲೇ ಸ್ಪಷ್ಟನೆ ನೀಡಿದ್ದಾರೆ.
ವಿಜಯವಾಡ ಮೂಲದವರಾದ ಡಿಂಪಲ್ ಹಯಾತಿ, 'ಗದ್ದಲಕೊಂಡ ಗಣೇಶ್' ಚಿತ್ರದ ಸೂಪರ್ ಹಿಟ್ ಹಾಡಿನ ಮೂಲಕ ಮನೆಮಾತಾದರು. ರವಿತೇಜ ಅವರ 'ಖಿಲಾಡಿ', ಗೋಪಿಚಂದ್ ಅವರ 'ರಾಮಬಾಣಂ', ವಿಶಾಲ್ ಅವರ 'ವೀರಮೇ ವಾಗೈ ಸೂಡುಂ' ಹಾಗೂ 'ಭರ್ತ ಮಹಾಶಯುಲಕು ವಿಜ್ಞಪ್ತಿ' ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
'ಭೋಗಿ' ಚಿತ್ರದ ಜತೆಗೆ ಡಿಂಪಲ್ ಹಯಾತಿ ತಮಿಳಿನ ಖ್ಯಾತ ನಿರ್ದೇಶಕ ಮಿಸ್ಕಿನ್ (Mysskin) ನಿರ್ದೇಶನದ 'ಟ್ರೈನ್' (Train) ಸಿನಿಮಾದಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಡಿಸೆಂಬರ್‌ನಲ್ಲಿ ಈ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.