ವಿಜಯವಾಣಿ ಸುದ್ದಿ ಜಾಲ
ಮಲಯಾಳಂನ ಪ್ಯಾರಡೈಸ್ ಸಿನಿಮಾ ಥ್ರಿಲ್ಲಿಂಗ್ ಎಕ್ಸಪೀರಿಯನ್ಸ್ ನೀಡೋದಂತು ಗ್ಯಾರಂಟಿ. ಆನಿವರ್ಸರಿ ಪಾರ್ಟಿ ಎಂದು ಶ್ರೀ ಲಂಕಾ ತೆರಳು ಜೋಡಿ, ರಾಮಾಯಣ ಕತೆ ಹಾಗೂ ತಮಿಳರ ಮೇಲಿನ ದೌರ್ಜನ್ಯ, ಪರಿಸರದ ಸುತ್ತ ಕತೆ ಕಟ್ಟಲಾಗಿದೆ. ಸಿನಿಮಾವನ್ನು ಪ್ರೈಮ್ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದಾಗಿದೆ.
ಪಾರ್ವತಿ ಮೆನನ್ ನಟನೆಯ ಪ್ರಧಮ ದೃಷ್ಟಿಯ ಕುಟ್ಟಕ್ಕರ್ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ಪೊಲೀಸ್ ಕಸ್ಟಡಿಯಲ್ಲಿದ್ದ ಲೂಟಿಕೋರ ಅಚಾನಕ್ಕಾಗಿ ಗನ್ ಶೂಟ್ನಿಂದ ಸಾಯುತ್ತಾನೆ. ಆತನ ಸಾವು, ತನಿಖೆಯಿಂದ ಕಥಾ ನಾಯಕಿ ಪಾರು ಮಾಡುವ ರೀತಿಯ ಸುತ್ತ ಕತೆ ಹೆಣೆಯಲಾಗಿದೆ. ಥ್ರಿಲ್ಲಿಂಗ್ ಅನುಭವ ಸಿಗುವುದು ನೂರಕ್ಕೆ ನೂರು
ವಿಜಯರಾಘವೇಂದ್ರ ನಟನೆಯ ರಿಪ್ಪನ್ ಸ್ವಾಮಿ ಪ್ರೈಮ್ ಹಾಗೂ ಜೀ5ನಲ್ಲಿ ನೋಡಬಹುದಾಗಿದೆ. ಮಲೆನಾಡಿನ ವೈಭವ ಹಾಗೂ ಪತ್ನಿಯಿಂದಲೇ ಕೊಲೆಯಾಗುವ ರಿಪ್ಪನ್ ಸ್ವಾಮಿ (ವಿಜಯರಾಘವೇಂದ್ರ) ಸಾವಿನ ಸುತ್ತ ಕಟ್ಟಿರುವ ಕತೆಯಾಗಿದೆ.
ಸನ್ನಿ ಡಿಯೋಲ್, ಅಕ್ಷಯ್ ಖನ್ನಾ ನಟನೆಯ ರಇಕ್ಕಾ ಸಿನಿಮಾವು ನೆಟ್ಫ್ಲಿಕ್ಸ್ನಲ್ಲಿದೆ. ಮಗಳ ಕ್ಯಾನ್ಸರ್ ಚಿಕಿತ್ಸೆಗಾಗಿ, ಖಳ ನಾಯಕನಿಂದಾದ ಮರ್ಡರ್ ಕೇಸ್ ಒಪ್ಪಿಕೊಳ್ಳುವ ನಿಷ್ಠಾವಂತ ಲಾಯರ್, ಕೊನೆಗೆ ಸಂತ್ರಸ್ತ ಮೃತ ಯುವತಿಗೆ ಹೇಗೆ ನ್ಯಾಯ ದೊರಕಿಸಿಕೊಡುತ್ತಾರೆ ಎನ್ನುವ ಸುತ್ತ ಕತೆಯನ್ನು ಕಟ್ಟಲಾಗಿದೆ.
ಪೃಥ್ವಿ ರಾಜ್ ಸುಕುಮಾರನ್ ನಟನೆಯ ಐ ನೋಬಡಿ ಸಿನಿಮಾ ಜಿಯೋ ಹಾಟ್ಸ್ಟಾರ್ನಲ್ಲಿದೆ. ಅಚಾನಕ್ಕಾಗಿ ಲೂಟಿಕೋರರ ಬಳಿ ಸಿಕ್ಕಿಹಾಕಿಕೊಳ್ಳುವ ಕಥಾ ನಾಯಕ ತನ್ನ ಮೇಲೆ ಬರುವ ಆರೋಪ ಹಾಗೂ ನಾಪತ್ತೆಯಾದ ತನ್ನ ಮಗಳನ್ನು ಕಾಪಾಡಿಕೊಳ್ಳುವ ಸುತ್ತ ಕತೆಯನ್ನು ನಿರೂಪಿಸಲಾಗಿದೆ.
ಊರ್ವಶಿ ನಟನೆಯ ಆಶಾ ಸಿನಿಮಾವು ಈಗಾಗಲೇ ಜೀ 5ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಹಠಮಾರಿ ಹೆಂಗಸಿಗೆಎದುರಾಗುವ ಸಂಕಷ್ಟ. ತನ್ನ ಮಗಳನ್ನು ಕಾಪಾಡಿಕೊಳ್ಳುವ ಸುತ್ತ ಕತೆಯನ್ನು ಥ್ರಿಲ್ಲಿಂಗ್ ಆಗಿ ಕಟ್ಟಲಾಗಿದೆ.
ಆಸಿಫ್ ಅಲಿ, ಅಮಲಾ ಪೌಲ್ ನಟನೆಯ ಬಹುನಿರೀಕ್ಷಿತ ‘ಲೆವೆಲ್ ಕ್ರಾಸ್’ ಸಿನಿಮಾ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಇದು ಮನೋವೈಜ್ಞಾನಿಕ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ರೈಲ್ವೆ ಟ್ರ್ಯಾಕ್ ಬಳಿ ಸಿಗುವ ನಾಯಕಿ ಮತ್ತು ನಾಯಕನ ನಡುವಿನ ಒಡನಾಟ, ಬಳಿಕ ಮೂರನೇ ವ್ಯಕ್ತಿಯ ಎಂಟ್ರಿಯಿಂದ ಬಯಲಾಗುವ ರೋಚಕ ಸತ್ಯಗಳ ಸುತ್ತ ಈ ಚಿತ್ರ ಸಾಗುತ್ತದೆ.