ವಿಜಯವಾಣಿ ಸುದ್ದಿ ಜಾಲ
ತಮ್ಮ ಆಕರ್ಷಕ ಮೈಮಾಟ ಮತ್ತು ಗ್ಲಾಮರಸ್ ಫೋಟೋಶೂಟ್‌ಗಳ ಮೂಲಕ ಸದಾ ಜಾಲತಾನದಲ್ಲಿ ಸದ್ದು ಮಾಡುವ ನಟಿ ಮಾಳವಿಕಾ ಮೋಹನನ್ ( Malavika Mohanan ), ಇದೀಗ ಕಂಚಿನ ಬಣ್ಣದ ಸೀಕ್ವಿನ್ ಲೆಹೆಂಗಾದಲ್ಲಿ ಮಿಂಚುವ ಮೂಲಕ ಫ್ಯಾನ್ಸ್ ಹೃದಯಕ್ಕೆ ಲಗ್ಗೆ ಇಟ್ಟಿದ್ದಾರೆ.
ಪ್ರತಿ ಮಡಿಕೆಯಲ್ಲೂ ಹೊಳೆಯುವ ಕಂಚಿನ ಬಣ್ಣದ ಸೀಕ್ವಿನ್ ಲೆಹೆಂಗಾ ಧರಿಸಿರುವ ಮಾಳವಿಕಾ ಮೋಹನನ್, ಅತ್ಯಂತ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ದಪ್ಪನೆಯ ಸ್ಟ್ರಾಪ್‌ಗಳು ಮತ್ತು ಸ್ವೀಟ್‌ಹಾರ್ಟ್ ನೆಕ್‌ಲೈನ್ ಹೊಂದಿರುವ ಮಣಿಗಳ ಕಸೂತಿಯ ಬ್ರಾಲೆಟ್ ಮಾಳವಿಕಾ ಅವರ ಸಪೂರ ನಡುವಿನ ಸೌಂದರ್ಯವನ್ನು ಮತ್ತಷ್ಟು ಎತ್ತಿ ತೋರಿಸಿದೆ.
ಉದ್ದನೆಯ ಹೊಳೆಯುವ ಗೆರೆಗಳಂತೆ ವಿನ್ಯಾಸಗೊಳಿಸಲಾದ ನೆರಿಗೆಗಳ ಸ್ಕರ್ಟ್ ಹಾಗೂ ತೋಳುಗಳ ಮೇಲೆ ಹರಡಿರುವ ಮ್ಯಾಚಿಂಗ್ ನೆಟ್ ದುಪಟ್ಟಾ ಅವರ ಉಡುಗೆಗೆ ರಾಜಗಾಂಭೀರ್ಯದ ಮೆರುಗು ನೀಡಿದೆ.
ಈ ಭಾರೀ ವಿನ್ಯಾಸದ ಉಡುಗೆಗೆ ಪೂರಕವಾಗಿ ಅವರು ಬೆರಳಿಗೆ ಹಸಿರು ಹರಳಿನ ಉಂಗುರ ಮತ್ತು ಕಿವಿಗೆ ಸಣ್ಣ ಡ್ರಾಪ್ ಇಯರಿಂಗ್ಸ್ ಮಾತ್ರ ಧರಿಸಿ ಸರಳತೆಯನ್ನು ಕಾಯ್ದುಕೊಂಡಿದ್ದಾರೆ.
ಮೃದುವಾದ ಅಲೆಗಳಂತೆ ಇಳಿಬಿಟ್ಟಿರುವ ಉದ್ದನೆಯ ಕೂದಲು ಮತ್ತು ಚಿನ್ನದ ಬಣ್ಣದ ಹಿನ್ನೆಲೆಯಲ್ಲಿ ಅವರ ಆಕರ್ಷಕ ನಗು ಈ ಇಡೀ ಫೋಟೋಶೂಟ್‌ಗೆ ವಿಶೇಷ ಕಳೆ ತಂದಿದೆ.
ದೇಸಿ ಲುಕ್ನಲ್ಲೂ ಮಾಳವಿಕಾ ಅವರ ಮಾದಕತೆಯನ್ನು ನೋಡಿ ಫಿದಾ ಆಗಿರುವ ಅಭಿಮಾನಿಗಳು ಕಾಮೆಂಟ್ಗಳ ಸುರಿಮಳೆಯೊಂದಿಗೆ ನಟಿಯ ಮೈಮಾಟವನ್ನು ಕೊಂಡಾಡುತ್ತಿದ್ದಾರೆ.
ಮಾಳವಿಕಾ ಮೋಹನನ್ ಅವರು ಮಲಯಾಳಂ ಚಿತ್ರರಂಗಕ್ಕೆ ಸೀಮಿತವಾಗದೇ ತಮಿಳು, ಹಿಂದಿ ಹಾಗೂ ತೆಲುಗು ಹೀಗೆ ನಾಲ್ಕೂ ಪ್ರಮುಖ ಚಿತ್ರರಂಗಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಪ್ರತಿಯೊಂದು ಚಿತ್ರರಂಗದಲ್ಲೂ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದರೂ, ಅವರನ್ನು ಚಿತ್ರರಂಗದ ಅತ್ಯುನ್ನತ ಸ್ಥಾನಕ್ಕೇರಿಸುವ ಒಂದು ಬೃಹತ್ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.
ಮಾಳವಿಕಾ ಅವರ ಅಭಿನಯದಲ್ಲಿ ಇತ್ತೀಚೆಗಷ್ಟೇ ತೆರೆಕಂಡ 'ಸರ್ದಾರ್ 2' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದ ಯಶಸ್ಸು ಕಾಣದೆ ಹಿನ್ನಡೆ ಅನುಭವಿಸಿದೆ.
ಸದ್ಯ ಮಾಳವಿಕಾ ಮೋಹನನ್ ಅವರು 'ಪಾಕೆಟ್ ನಾವೆಲ್' ಎಂಬ ಸಿನಿಮಾದಲ್ಲಿ ಬಿಜಿಯಾಗಿದ್ದು, ಗೆಲುವಿಗಾಗಿ ಎದುರು ನೋಡುತ್ತಿದ್ದಾರೆ.