ತಮ್ಮ ದೇಹಾಕೃತಿ ಬಗ್ಗೆ ಮೃಣಾಲ್​ ಬೋಲ್ಡ್​ ಮಾತು..! Mrunal Thakur

ವಿಜಯವಾಣಿ ಸುದ್ದಿ ಜಾಲ

ಕಪ್ಪು ಉಡುಗೆಯಲ್ಲಿ ಮಿಂಚಿದ ‘ಸೀತಾ ರಾಮಂ’ ಚೆಲುವೆ!

ನಟನೆ ಹಾಗೂ ಸೌಂದರ್ಯದ ಮೂಲಕವೇ ಭಾರತದಾದ್ಯಂತ ಅಭಿಮಾನಿ ಬಳಗ ಹೊಂದಿರುವ ನಟಿ ಮೃಣಾಲ್ ಠಾಕೂರ್, ಇದೀಗ ಹೊಸ ಫೋಟೋಶೂಟ್ ಮತ್ತು ಬಾಡಿ ಪಾಸಿಟಿವಿಟಿ ಕುರಿತಾದ ಮಾತುಗಳಿಂದ ಸುದ್ದಿಯಲ್ಲಿದ್ದಾರೆ.

ಬಾಡಿ ಪಾಸಿಟಿವಿಟಿ ಸಂದೇಶ

ಇತ್ತೀಚಿನ ಸಂದರ್ಶನವೊಂದರಲ್ಲಿ ಮೃಣಾಲ್ ಠಾಕೂರ್ ತಮ್ಮ ದೇಹಾಕೃತಿ ಮತ್ತು ಸ್ವ-ಸ್ವೀಕಾರದ ಬಗ್ಗೆ ಅತ್ಯಂತ ಮುಕ್ತವಾಗಿ ಮಾತನಾಡಿದ್ದಾರೆ.

ಕೀಳರಿಮೆ ಬಿಡಿ

ತನಗೆ ತನ್ನ ದೇಹಾಕೃತಿಯ ಬಗ್ಗೆ ಅಪಾರ ಪ್ರೀತಿ ಇದೆ ಎಂದಿರುವ ಮೃಣಾಲ್​, ಪ್ರತಿಯೊಬ್ಬರೂ ತಮ್ಮ ದೇಹ ಮತ್ತು ಚರ್ಮದ ಬಣ್ಣದ ಬಗ್ಗೆ ಕೀಳರಿಮೆ ಬಿಟ್ಟು ಆರಾಮವಾಗಿ ಹಾಗೂ ಆತ್ಮವಿಶ್ವಾಸದಿಂದ ಇರಬೇಕು ಎಂಬ ಸಂದೇಶ ನೀಡಿದ್ದಾರೆ.

ಕಪ್ಪು ಉಡುಗೆಯಲ್ಲಿ ಆಕರ್ಷಕ ಪೋಸ್

ಹೊಸ ಫೋಟೋಶೂಟ್‌ನಲ್ಲಿ ಮೃಣಾಲ್ ಅವರು ಕಪ್ಪು ಬಣ್ಣದ ಸ್ಲೀವ್‌ಲೆಸ್ ಟಾಪ್ ಹಾಗೂ ಪ್ರತಿಯೊಂದು ಪೋಸ್‌ಗೂ ನೃತ್ಯ ಮಾಡುವಂತೆ ಚಲಿಸುವ ಉದ್ದನೆಯ ಟೈರ್ಡ್ ಫ್ರಿಂಜ್ ಸ್ಕರ್ಟ್ ಧರಿಸಿ ಮಿಂಚಿದ್ದಾರೆ.

ಬೆಳ್ಳಿ ಆಭರಣಗಳ ಮೆರುಗು

ಕಪ್ಪು ಉಡುಗೆಗೆ ಒಪ್ಪುವಂತೆ ಕಾಯಿನ್ ಪೆಂಡೆಂಟ್ ಹೊಂದಿರುವ ಲೇಯರ್ಡ್ ಸಿಲ್ವರ್ ನೆಕ್ಲೇಸ್‌ಗಳು, ದಪ್ಪನೆಯ ಉಂಗುರಗಳು, ಕೈತುಂಬಾ ಬ್ರೇಸ್‌ಲೆಟ್‌ಗಳು ಹಾಗೂ ದೊಡ್ಡ ಹೂಪ್ ಕಿವಿಯೋಲೆಗಳನ್ನು ಧರಿಸಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

ಮೊನೊಕ್ರೋಮ್ ಫೋಟೋಗಳ ಮೋಡಿ

ಕಪ್ಪು-ಬಿಳುಪು ಫ್ರೇಮ್‌ಗಳಲ್ಲಿ ಸೆರೆಯಾದ ಈ ಫೋಟೋಗಳು ಮೃಣಾಲ್ ಧರಿಸಿದ್ದ ಬೆಳ್ಳಿಯ ಆಭರಣಗಳಿಗೆ ಮತ್ತಷ್ಟು ಹೊಳಪು ಮತ್ತು ರಾಯಲ್ ಲುಕ್ ನೀಡಿವೆ.

ಮೇಕಪ್ ಮತ್ತು ಹೇರ್‌ಸ್ಟೈಲ್

ಪಾಯಿಂಟೆಡ್ ಬ್ಲ್ಯಾಕ್ ಹೀಲ್ಸ್, ಕಪ್ಪು ಬಣ್ಣದ ನೇಲ್ ಪಾಲಿಶ್ ಹಾಗೂ ಸ್ಮೋಕಿ ಐ ಮೇಕಪ್ ಅವರ ಲುಕ್ ಅನ್ನು ಇನ್ನಷ್ಟು ಶಾರ್ಪ್ ಆಗಿಸಿದ್ದು, ನೇರವಾದ ಕೂದಲನ್ನು ಹಾಗೆಯೇ ಇಳಿಬಿಟ್ಟಿರುವುದು ಅವರ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ.

ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ

ಮೃಣಾಲ್ ಅವರ ಈ ಬೋಲ್ಡ್ ಲುಕ್ ಹಾಗೂ ಆತ್ಮವಿಶ್ವಾಸದ ಮಾತುಗಳಿಗೆ ನೆಟ್ಟಿಗರು ಫಿದಾ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳಿಗೆ ಲೈಕ್ಸ್ ಹಾಗೂ ಕಾಮೆಂಟ್‌ಗಳ ಸುರಿಮಳೆಗೈಯುತ್ತಿದ್ದಾರೆ.

ಮುಂದಿನ ಸಿನಿಮಾ ಅಪ್‌ಡೇಟ್

ಸಿನಿಮಾ ವಿಚಾರಕ್ಕೆ ಬರುವುದಾದರೆ, ಮೃಣಾಲ್ ಠಾಕೂರ್ ಅವರು 'ರಾಕಾ' (Raka) ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಗುಸುಗುಸು ಸಿನಿವಲಯದಲ್ಲಿ ಕೇಳಿಬರುತ್ತಿದೆ. ಆದರೆ ಚಿತ್ರತಂಡದಿಂದ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ಹಳದಿ ಉಡುಗೆಯಲ್ಲಿ ಹಾಟ್​ ಪ್ರಿಯಾ..! Priya Prakash Varrier