ಹಳದಿ ಉಡುಗೆಯಲ್ಲಿ ಹಾಟ್​ ಪ್ರಿಯಾ..! Priya Prakash Varrier

ವಿಜಯವಾಣಿ ಸುದ್ದಿ ಜಾಲ

ಕಣ್ಸನ್ನೆ ಬೆಡಗಿಯ ಹೊಸ ಫೋಟೋಶೂಟ್​

ಒಂದೇ ಒಂದು ಕಣ್ಸನ್ನೆ ಮೂಲಕ ಯುವಕರ ನಿದ್ದೆಗೆಡಿಸಿ ರಾತ್ರೋರಾತ್ರಿ 'ನ್ಯಾಷನಲ್ ಕ್ರಶ್' ಆಗಿ ಹೊರಹೊಮ್ಮಿದ್ದ ಮಲಯಾಳಿ ಸುಂದರಿ ಪ್ರಿಯಾ ಪ್ರಕಾಶ್ ವಾರಿಯರ್ ( Priya Prakash Varrier ), ಇದೀಗ ತಮ್ಮ ಹೊಸ ಗ್ಲಾಮರಸ್ ಲುಕ್‌ನಿಂದ ಸುದ್ದಿಯಾಗಿದ್ದಾರೆ.

ಹೊಸ ಫೋಟೋ ವೈರಲ್​

ತಮ್ಮ ಹೊಸ ಫೋಟೋಶೂಟ್​ನಲ್ಲಿ ಪ್ರಿಯಾ ವಾರಿಯರ್​ ಸಾಂಪ್ರದಾಯಿಕ ವಿನ್ಯಾಸದ ಸುಂದರವಾದ ಹಳದಿ ಬಣ್ಣದ ಉಡುಗೆಯನ್ನು ಧರಿಸಿದ್ದು, ಅದಕ್ಕೆ ತಕ್ಕಂತೆ ಆಕರ್ಷಕ ಚಿನ್ನದ ಆಭರಣಗಳು ಮತ್ತು ಬಳೆಗಳಿಂದ ತಮ್ಮ ರೂಪವನ್ನು ಅಲಂಕರಿಸಿಕೊಂಡಿದ್ದಾರೆ.

ಮಾದಕ ನೋಟ

ಎದೆ ಸೀಳು ಕಾಣುವಂತಹ ಹೊಸ ಫೋಟೋಶೂಟ್​ನಲ್ಲಿ ಪ್ರಿಯಾ ಅವರು ಮಾದಕ ನೋಟ ಬೀರಿದ್ದಾರೆ. ಅಲ್ಲದೆ, ಫೋಟೋದಲ್ಲಿ ಕಣ್ಸನ್ನೆ ಬೆಡಗಿ ನೀಡಿರುವ ವಿವಿಧ ಭಂಗಿಗಳನ್ನು ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

ಕಾಮೆಂಟ್​ಗಳ ಸುರಿಮಳೆ

ಹಾಟ್​ ಫೋಟೋಶೂಟ್​ನಲ್ಲಿ ಪ್ರಿಯಾ ಅವರ ಮೈಮಾಟವನ್ನು ಕಂಡು ಫಿದಾ ಆಗಿರುವ ಅಭಿಮಾನಿಗಳು ಕಾಮೆಂಟ್​ಗಳ ಮಹಾಪೂರವನ್ನೇ ಹರಿಸಿದ್ದು, ನೆಚ್ಚಿನ ನಟಿಯ ಸೌಂದರ್ಯವನ್ನು ಕೊಂಡಾಡುತ್ತಿದ್ದಾರೆ.

ರಾತ್ರೋರಾತ್ರಿ ಒಲಿದ ಜನಪ್ರಿಯತೆ

'ಒರು ಅಡಾರ್ ಲವ್' ಚಿತ್ರದ ಒಂದೇ ಒಂದು ಕಣ್ಸನ್ನೆ ದೃಶ್ಯದ ಮೂಲಕ ಪ್ರಿಯಾ ವಾರಿಯರ್ ಇಡೀ ಭಾರತದ ನೆಚ್ಚಿನ 'ನ್ಯಾಷನಲ್ ಕ್ರಶ್' ಆಗಿ ಬದಲಾದರು.

ಚಿತ್ರರಂಗದಲ್ಲಿ ಸಕ್ರಿಯ

ಅಂದಿನಿಂದ ಇಂದಿನವರೆಗೂ ಸದಾ ಸುದ್ದಿಯಲ್ಲಿರುವ ಇವರು, ವಿವಿಧ ಭಾಷೆಗಳ ಚಿತ್ರರಂಗಗಳಲ್ಲಿ ನಟಿಸುತ್ತಾ, ಗಾಯಕಿಯಾಗಿಯೂ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.

ಹಿಟ್ ಸಿನಿಮಾದಲ್ಲಿ ಮಿಂಚು

ಇತ್ತೀಚೆಗೆ ತೆರೆಕಂಡು ಸೂಪರ್ ಹಿಟ್ ಎನಿಸಿಕೊಂಡ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾದಲ್ಲಿ ಪ್ರಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಮುಂದಿನ ಚಿತ್ರದ ನಿರೀಕ್ಷೆ

ಪ್ರಿಯಾ ವಾರಿಯರ್ ಮುಂದಿನ ಬಾರಿಗೆ '3 ಮಂಕೀಸ್' ಎಂಬ ಹೈಸ್ಟ್ ಥ್ರಿಲ್ಲರ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.