ವಿಜಯವಾಣಿ ಸುದ್ದಿ ಜಾಲ
ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಬ್ಲಾಕ್‌ಬಸ್ಟರ್ 'ಜೈಲರ್' ಸಿನಿಮಾದಲ್ಲಿ ಸೊಸೆಯಾಗಿ ನಟಿಸಿ ಎಲ್ಲರ ಗಮನ ಸೆಳೆದಿರುವ ನಟಿ ಮಿರ್ನಾ ಮೆನನ್, ಇದೀಗ 'ಜೈಲರ್ 2' ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇದರ ನಡುವೆ ಅವರು ಹಂಚಿಕೊಂಡಿರುವ ಹೊಸ ಫೋಟೋಶೂಟ್ ಸಖತ್ ವೈರಲ್ ಆಗಿದೆ.
ರಜನಿಕಾಂತ್ ಅಭಿನಯದ ಬ್ಲಾಕ್‌ಬಸ್ಟರ್ ಸಿನಿಮಾ 'ಜೈಲರ್'ನಲ್ಲಿ ರಜನಿ ಅವರ ಸೊಸೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮಿರ್ನಾ ಮೆನನ್, ತಮ್ಮ ಸಹಜ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು.
ಮೊದಲ ಭಾಗದಂತೆಯೇ 'ಜೈಲರ್ 2' ಚಿತ್ರದಲ್ಲೂ ಮಿರ್ನಾ ಮೆನನ್ ಅವರ ಪಾತ್ರಕ್ಕೆ ಉತ್ತಮ ಪ್ರಶಂಸೆ ವ್ಯಕ್ತವಾಗಿದ್ದು, ಸಿನಿಮಾದ ಭರ್ಜರಿ ಯಶಸ್ಸಿನ ಖುಷಿಯಲ್ಲಿದ್ದಾರೆ.
ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಮಿರ್ನಾ, ಇದೀಗ 'ಡಾನ್ ಬಾಸ್ಕೋ' ಎಂಬ ತೆಲುಗು ಸಿನಿಮಾದ ಮೂಲಕ ಟಾಲಿವುಡ್ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿದ್ದಾರೆ.
ಇತ್ತೀಚೆಗೆ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನಡೆದ 'ಡಾನ್ ಬಾಸ್ಕೋ' ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಿರ್ನಾ ಮೆನನ್ ವಿಶೇಷ ಆಕರ್ಷಣೆಯಾಗಿ ಭಾಗವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ತಿಳಿ ಗುಲಾಬಿ ಬಣ್ಣದ (Pink Dress) ಆಕರ್ಷಕ ಉಡುಪು ಧರಿಸಿ ಆಗಮಿಸಿದ್ದ ಮಿರ್ನಾ, ತಮ್ಮ ಮುದ್ದಾದ ನಗು ಮತ್ತು ಸ್ಟೈಲಿಶ್ ಲುಕ್‌ನಿಂದ ಎಲ್ಲರ ಗಮನ ಸೆಳೆದರು.
ಡಾನ್ ಬಾಸ್ಕೋ ಇವೆಂಟ್‌ನಲ್ಲಿ ಮಿರ್ನಾ ಮೆನನ್ ಅವರು ತೆಗೆಸಿಕೊಂಡಿರುವ ಸುಂದರ ಫೋಟೋಗಳು ಇದೀಗ ಇನ್‌ಸ್ಟಾಗ್ರಾಮ್ ಹಾಗೂ ಎಕ್ಸ್ (X) ಖಾತೆಗಳಲ್ಲಿ ಸಖತ್ ವೈರಲ್ ಆಗುತ್ತಿವೆ.
ಮಿರ್ನಾ ಅವರ ಈ ಹೊಸ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ದು, ತೆಲುಗು ಚಿತ್ರರಂಗದಲ್ಲೂ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿ ಎಂದು ಶುಭ ಹಾರೈಸುತ್ತಿದ್ದಾರೆ.