ವಿಜಯವಾಣಿ ಸುದ್ದಿ ಜಾಲ
ಯೂಟ್ಯೂಬ್ ಶಾರ್ಟ್ ಫಿಲ್ಮ್‌ಗಳ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು, 'ಬೇಬಿ' ಸಿನಿಮಾದ ಅಭೂತಪೂರ್ವ ಯಶಸ್ಸಿನ ನಂತರ ಸ್ಟಾರ್ ನಟಿಯಾಗಿ ಮಿಂಚುತ್ತಿರುವ ವೈಷ್ಣವಿ ಚೈತನ್ಯ ( Actress Vaishnavi Chaitanya ) ಇದೀಗ ತಮ್ಮ ಹೊಸ ಫೋಟೋಶೂಟ್ ಮೂಲಕ ಸಖತ್ ಸುದ್ದಿಯಲ್ಲಿದ್ದಾರೆ.
ಹೆಚ್ಚಾಗಿ ಹೋಮ್ಲಿ ಮತ್ತು ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ವೈಷ್ಣವಿ ಚೈತನ್ಯ, ಈ ಬಾರಿ ಸ್ಟೈಲಿಶ್ ಮಾಡರ್ನ್ ಉಡುಗೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ತಮ್ಮ ಮುಂಬರುವ ಸಿನಿಮಾದ ಚಿತ್ರೀಕರಣದ ಬಿಡುವಿನ ವೇಳೆಯಲ್ಲಿ (Shoot gap) ಈ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದು, ಸೆಟ್‌ನಲ್ಲಿ ಸಖತ್ ಎಂಜಾಯ್ ಮಾಡುತ್ತಿರುವುದು ಫೋಟೋಗಳಲ್ಲಿ ಎದ್ದು ಕಾಣುತ್ತಿದೆ.
ವೈಷ್ಣವಿ ಅವರು ಈ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್‌ಗಳು ಹರಿದುಬಂದಿದ್ದು, ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿವೆ.
ಮಾಡರ್ನ್ ಡ್ರೆಸ್‌ಗೆ ತಕ್ಕಂತೆ ಸಿಂಪಲ್ ಮೇಕಪ್ ಮತ್ತು ಆಕರ್ಷಕ ಹೇರ್‌ಸ್ಟೈಲ್ ಮಾಡಿಕೊಂಡಿರುವ ವೈಷ್ಣವಿ ಅವರ ಮುಗ್ಧ ನಗು ಮತ್ತು ಕ್ಯೂಟ್ ಪೋಸ್‌ಗಳಿಗೆ ಯುವಕರು ಫಿದಾ ಆಗಿದ್ದಾರೆ.
ಶಾರ್ಟ್ ಫಿಲ್ಮ್‌ಗಳು ಮತ್ತು ಕವರ್ ಸಾಂಗ್‌ಗಳ ಮೂಲಕ ವೃತ್ತಿಜೀವನ ಆರಂಭಿಸಿದ ವೈಷ್ಣವಿ, 'ಅಲಾ ವೈಕುಂಠಪುರಮುಲೋ' ಚಿತ್ರದಲ್ಲಿ ಅಲ್ಲು ಅರ್ಜುನ್ ಸಹೋದರಿಯಾಗಿ ನಟಿಸಿ ಗಮನ ಸೆಳೆದಿದ್ದರು.
ಆನಂದ್ ದೇವರಕೊಂಡ ಜತೆ ನಟಿಸಿದ 'ಬೇಬಿ' ಚಿತ್ರದ ಬ್ಲಾಕ್‌ಬಸ್ಟರ್ ಯಶಸ್ಸು ವೈಷ್ಣವಿ ಚೈತನ್ಯ ಅವರಿಗೆ ರಾತ್ರೋರಾತ್ರಿ ಸ್ಟಾರ್ ಪಟ್ಟ ತಂದುಕೊಟ್ಟಿತು.
ಸದ್ಯ ತೆಲುಗು ಚಿತ್ರರಂಗದ ಬೇಡಿಕೆಯ ನಟಿಯಾಗಿರುವ ಇವರು, ಹಲವು ದೊಡ್ಡ ಬ್ಯಾನರ್‌ಗಳ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಾ ಸಖತ್ ಬ್ಯುಸಿಯಾಗಿದ್ದಾರೆ.