ವಿಜಯವಾಣಿ ಸುದ್ದಿ ಜಾಲ
ಸೂಪರ್ ಹಿಟ್ ಅನಿಮಲ್ ಚಿತ್ರದಿಂದ ರಾತ್ರೋರಾತ್ರಿ ಜನಪ್ರಿಯತೆ ಗಳಿಸಿರುವ ನಟಿ ತೃಪ್ತಿ ದಿಮ್ರಿ, ತಮ್ಮ ಬೋಲ್ಡ್ ನಟನೆ ಮೂಲಕ 'ನ್ಯಾಷನಲ್ ಕ್ರಶ್' ಎನಿಸಿಕೊಂಡಿದ್ದಾರೆ. ಸದ್ಯ ಅವರ ಹೊಸ ಫೋಟೋಶೂಟ್ ಸದ್ದು ಮಾಡುತ್ತಿದೆ.
ಇತ್ತೀಚೆಗೆ ನಡೆದ 'VS ಫ್ಯಾಷನ್ ಶೋ 2026' ಪ್ರಚಾರ ಕಾರ್ಯಕ್ರಮದಲ್ಲಿ ಕಪ್ಪು ಬಣ್ಣದ ಲೇಸ್ ಬಾಡಿಸೂಟ್ ಧರಿಸಿ ಭಾಗವಹಿಸುವ ಮೂಲಕ ತೃಪ್ತಿ ದಿಮ್ರಿ ಎಲ್ಲರ ಹುಬ್ಬೇರಿಸುವಂತೆ ಮಾಡಿದರು.
ಅವರು ಧರಿಸಿದ್ದ ಉಡುಗೆಯಲ್ಲಿ ಶೀರ್ ಟ್ಯೂಲ್ ಸ್ಕರ್ಟ್, ರಫಲ್ಡ್ ಹೆಮ್ ಹಾಗೂ ಸೊಂಟದ ಭಾಗದಲ್ಲಿ ಮಾಡಲಾಗಿದ್ದ ಸೂಕ್ಷ್ಮವಾದ ಬೀಡೆಡ್ ಎಂಬ್ರಾಯ್ಡರಿ ಅವರ ಸೌಂದರ್ಯವನ್ನು ಇಮ್ಮಡಿಗೊಳಿಸಿತು.
ಕಪ್ಪು ಬಣ್ಣದ ಲೇಸ್ ಡ್ರೆಸ್‌ಗೆ ಮ್ಯಾಚಿಂಗ್ ಆಗಿ ಸಿಕ್ವಿನ್ಡ್ ಮೆಟಾಲಿಕ್ ಕ್ರಾಪ್ಡ್ ಜಾಕೆಟ್ ಅನ್ನು ಭುಜದ ಮೇಲೆ ಧರಿಸಿದ್ದು ಆಕರ್ಷಕವಾಗಿತ್ತು. ಜತೆಗೆ ಲಾಂಗ್ ಡ್ರಾಪ್ ಇಯರಿಂಗ್ಸ್, ಸಾಫ್ಟ್ ವೇವ್ಸ್ ಹೇರ್‌ಸ್ಟೈಲ್ ಲುಕನ್ನು ಪೂರ್ಣಗೊಳಿಸಿತು.
ಕಪ್ಪು ಬಣ್ಣದ ಹಾಟ್ ಉಡುಗೆಯಲ್ಲಿ ತೃಪ್ತಿ ದಿಮ್ರಿ ಅವರ ಬೋಲ್ಡ್ಸೆನ್ ನೋಡಿ ಫಿದಾ ಆಗಿರುವ ಅಭಿಮಾನಿಗಳು ಭರಪೂರ ಕಾಮೆಂಟ್ಗಳ ಮೂಲಕ ನಟಿಯ ಮೈಮಾಟವನ್ನು ಕೊಂಡಾಡಿದ್ದಾರೆ.
ಪ್ರಭಾಸ್ ನಾಯಕನಾಗಿ ನಟಿಸುತ್ತಿರುವ, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಕಾಪ್ ಡ್ರಾಮಾ ಸಿನಿಮಾ 'ಸ್ಪಿರಿಟ್'ನಲ್ಲಿ ತೃಪ್ತಿ ದಿಮ್ರಿ ನಾಯಕಿಯಾಗಿ ನಟಿಸುತ್ತಿದ್ದಾರೆ.
2027ರ ದೀಪಾವಳಿಗೆ ಬಿಡುಗಡೆ ನಿರೀಕ್ಷೆ
ಪ್ರಭಾಸ್ ಮತ್ತು ತೃಪ್ತಿ ದಿಮ್ರಿ ಜೋಡಿಯ ಈ ಚಿತ್ರವು 2027ರ ದೀಪಾವಳಿಗೆ ತೆರೆಗೆ ಬರಲಿದೆ ಎಂದು ವರದಿಯಾಗಿದ್ದು, ಈ ಜೋಡಿಯ ಅನೌನ್ಸ್‌ಮೆಂಟ್ ಈಗಾಗಲೇ ಸಿನಿಪ್ರಿಯರಲ್ಲಿ ಭಾರಿ ಹೈಪ್ ಸೃಷ್ಟಿಸಿದೆ.
ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರೇ ನಿರ್ದೇಶಿಸಿದ್ದ ಬ್ಲಾಕ್‌ಬಸ್ಟರ್ ಚಿತ್ರ 'ಅನಿಮಲ್' ತೃಪ್ತಿ ದಿಮ್ರಿ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿತು. ಆ ಸಿನಿಮಾದ ಪಾತ್ರವೇ ಆಕೆಗೆ ರಾತ್ರೋರಾತ್ರಿ ದೇಶಾದ್ಯಂತ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು.
ತೃಪ್ತಿ ದಿಮ್ರಿ ನಟಿಸಿದ ಇತ್ತೀಚಿನ ಕೆಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದ ಕಾರಣ, ಪ್ರಸ್ತುತ ಅವರ ಮುಂದಿನ ಸಿನಿಮಾಗಳ ಮೇಲಿನ ನಿರೀಕ್ಷೆಗಳು ಗರಿಗೆದರಿವೆ.
ತಮ್ಮ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಿದ್ದ ಸಂದೀಪ್ ರೆಡ್ಡಿ ವಂಗಾ ಜತೆಗಿನ 'ಸ್ಪಿರಿಟ್' ಸಿನಿಮಾವು, ತೃಪ್ತಿಗೆ ಬಾಕ್ಸಾಫೀಸ್‌ನಲ್ಲಿ ಅಗತ್ಯವಿರುವ ಬೃಹತ್ ಯಶಸ್ಸು ಮತ್ತು ಮರುಜೀವ ನೀಡಲಿದೆಯೇ ಎಂಬ ಚರ್ಚೆಗಳು ಇಂಡಸ್ಟ್ರಿ ವಲಯದಲ್ಲಿ ಜೋರಾಗಿವೆ.
ತೆಲುಗು ಚಿತ್ರರಂಗದಲ್ಲಿ ನೇರವಾಗಿ ದೊಡ್ಡ ಸ್ಟಾರ್ ಜತೆ ನಟಿಸುತ್ತಿರುವ ತೃಪ್ತಿ ದಿಮ್ರಿ, ಈ ಚಿತ್ರದ ಮೂಲಕ ಟಾಲಿವುಡ್ ಬಾಕ್ಸಾಫೀಸ್‌ನಲ್ಲಿ ಯಾವ ರೀತಿಯ ಮ್ಯಾಜಿಕ್ ಮಾಡಲಿದ್ದಾರೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.