ಭಾರತದಲ್ಲಿ ಕರೊನಾ 3ನೇ ಅಲೆ ಕಾಡಿದರೆ ದಕ್ಷಿಣ ಆಫ್ರಿಕಾಕ್ಕೆ ಐಪಿಎಲ್ ಸ್ಥಳಾಂತರ?

ನವದೆಹಲಿ: ಭಾರತದಲ್ಲಿ ದಿನದಿಂದ ದಿನಕ್ಕೆ ಕರೊನಾ ಪ್ರಕರಣಗಳು ಏರಿಕೆಯಾಗುತ್ತಿರುವುದು 3ನೇ ಅಲೆಯಾಗಿ ಪರಿವರ್ತನೆಗೊಂಡರೆ ಐಪಿಎಲ್ 15ನೇ ಆವೃತ್ತಿಯನ್ನು ದೇಶದಲ್ಲಿ ಸಂಘಟಿಸುವುದು ಕಷ್ಟವಾಗಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ‘ಪ್ಲ್ಯಾನ್ ಬಿ’ ಸಿದ್ಧಪಡಿಸಿಕೊಂಡಿದೆ. ಇದರನ್ವಯ ಈ ಬಾರಿ ಐಪಿಎಲ್ ಟೂರ್ನಿಯನ್ನು ಸಂಪೂರ್ಣವಾಗಿ ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸುವ ಸಾಧ್ಯತೆಗಳಿವೆ. ಆದರೆ ಭಾರತದಲ್ಲೇ ಟೂರ್ನಿ ನಡೆಸುವುದು ಬಿಸಿಸಿಐನ ಮೊದಲ ಆದ್ಯತೆಯಾಗಿರಲಿದೆ. ಕರೊನಾ ಹಾವಳಿಯಿಂದಾಗಿ 2020ರ ಐಪಿಎಲ್ ಸಂಪೂರ್ಣವಾಗಿ ಯುಎಇಯಲ್ಲಿ ನಡೆದಿದ್ದರೆ, 2021ರಲ್ಲೂ 2ನೇ ಭಾಗದ ಟೂರ್ನಿಗೆ ಅರಬ್ ರಾಷ್ಟ್ರವೇ ವೇದಿಕೆಯಾಗಿತ್ತು. ಆದರೆ ಈ … Continue reading ಭಾರತದಲ್ಲಿ ಕರೊನಾ 3ನೇ ಅಲೆ ಕಾಡಿದರೆ ದಕ್ಷಿಣ ಆಫ್ರಿಕಾಕ್ಕೆ ಐಪಿಎಲ್ ಸ್ಥಳಾಂತರ?