ನಡು ರಸ್ತೆಯಲ್ಲೇ ಮಾರಕಾಸ್ತ್ರ ಹಿಡಿದು ಯುವತಿಗೆ ಕಿರುಕುಳ; ನೆರವಿಗೆ ಧಾವಿಸಿದ ಮಹಿಳೆ

ಬೆಂಗಳೂರು: ಹಾಡುಹಗಲೇ ಯುವಕನೊಬ್ಬ ಮಾರಕಾಸ್ತ್ರ ಹಿಡಿದು ಯುವತಿಯೊಬ್ಬಳಿಗೆ ಕಿರುಕುಳ ನೀಡಿರುವ ಪ್ರಕರಣ ಪುಲಕೇಶಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೇ 15ರಂದು ಘಟನೆ ನಡೆದಿದ್ದು, ಘಟನೆ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು ವಿವೇಕಾನಂದ ರೆಸಿಡೆನ್ಸಿ ಬಳಿ ಕೃತ್ಯ ಎಸಗಲಾಗಿದೆ. ಪುಲಕೇಶಿನಗರದ ವಿವೇಕಾನಂದ ರೆಸಿಡೆನ್ಸಿ ಬಳಿ ಯುವಕನೊಬ್ಬ ನಡೆದು ಹೋಗುತ್ತಿದ್ದ ಯುವತಿಯ ಬೆನ್ನಟ್ಟುತ್ತಾ ಬಂದಿದ್ದಾನೆ. ಬಳಿಕ ಆತ ಏಕಾಏಕಿ ಮಾರಕಾಸ್ತ್ರ ತೋರಿಸಿ ಯುವತಿಗೆ ಕಿರುಕುಳ ನೀಡಿದ್ದಾನೆ. ಅಲ್ಲದೆ, ಆಕೆಯ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಆದರೆ, ಅದು ಸಾಧ್ಯವಾಗಿಲ್ಲ … Continue reading ನಡು ರಸ್ತೆಯಲ್ಲೇ ಮಾರಕಾಸ್ತ್ರ ಹಿಡಿದು ಯುವತಿಗೆ ಕಿರುಕುಳ; ನೆರವಿಗೆ ಧಾವಿಸಿದ ಮಹಿಳೆ