ಮೈಸೂರು ದಸರಾದಲ್ಲಿ ಅಪ್ಪು ಚಿತ್ರೋತ್ಸವ: ಅಭಿಮಾನಿಗಳ ಜತೆ ‘ರಾಜಕುಮಾರ’ ಸಿನಿಮಾ ವೀಕ್ಷಿಸಿದ ಅಶ್ವಿನಿ

ಮೈಸೂರು: ನಾಡಹಬ್ಬ ಮೈಸೂರು ದಸರಾದಲ್ಲಿ ಕರ್ನಾಟಕರತ್ನ ಡಾ.ಪುನೀತ್​ ರಾಜ್​ಕುಮಾರ್​ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ಮೈಸೂರು ದಸರಾ-2022 ಹಾಗೂ ಚಲನಚಿತ್ರೋತ್ಸವ ಉಪಸಮಿತಿ ವತಿಯಿಂದ ದಸರಾ ಚಲನಚಿತ್ರೋತ್ಸವಲ್ಲಿ ‘ಅಪ್ಪು ದಿನ’ ಆಚರಿಸಲಾಗುತ್ತಿದೆ. ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಅಶ್ವಿನಿ ಪುನೀತ್​ರಾಜ್​ಕುಮಾರ್​ ಅವರು ಅಪ್ಪು ಚಲನಚಿತ್ರೋತ್ಸವಕ್ಕೆ ಬುಧವಾರ ಚಾಲನೆ ನೀಡಿದರು. ಅಪ್ಪುಗೆ ದಸರೆಯಲ್ಲಿ ವಿಶೇಷ ನಮನ ಸಲ್ಲಿಸಲಾಗುತ್ತಿದೆ. ದಸರಾ ಚಲನಚಿತ್ರೋತ್ಸವದಲ್ಲಿ ಅವರ ಆರು ಸಿನಿಮಾಗಳ ಪ್ರದರ್ಶನ ನಡೆಯುತ್ತಿದೆ. ಬೆಟ್ಟದ ಹೂ, ರಾಜಕುಮಾರ, ರಣವಿಕ್ರಮ, ಯುವರತ್ನ ಸೇರಿದಂತೆ 6 ಸಿನಿಮಾಗಳು … Continue reading ಮೈಸೂರು ದಸರಾದಲ್ಲಿ ಅಪ್ಪು ಚಿತ್ರೋತ್ಸವ: ಅಭಿಮಾನಿಗಳ ಜತೆ ‘ರಾಜಕುಮಾರ’ ಸಿನಿಮಾ ವೀಕ್ಷಿಸಿದ ಅಶ್ವಿನಿ