ನೋಡ ನೋಡುತ್ತಿದ್ದಂತೆ ಕಾದಾಟ್ಟಕ್ಕಿಳಿದ ಆನೆಗಳು; ವಿಡಿಯೋ ವೈರಲ್

ತಿರುವನಂತಪ್ಪುರಂ: ದೇವರ ಉತ್ಸವದಲ್ಲಿ ಪಾಲ್ಗೊಂಡಿದ್ದ ಎರಡು ಆನೆಗಳು ಮೆರವಣಿಗೆಯ ಮಧ್ಯದಲ್ಲೇ ಕಾದಾಡಿರುವ ಘಟನೆ ಕೇರಳದ ಆರಟ್ಟುಪುಳ ದೇವಸ್ಥಾನದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಆರಟ್ಟುಪುಳ ದೇವಸ್ಥಾನದಲ್ಲಿ ಆರಾಟ್ ಆಚರಣೆಗಾಗಿ ಎರಡು ಆನೆಗಳನ್ನು ಅಲಂಕರಿಸಲಾಗಿದೆ. ಈ ವೇಳೆ ಆನೆಯೊಂದು ಇದ್ದಕ್ಕಿದ್ದಂತೆ ಗೀಳಿಡಲು ಶುರು ಮಾಡಿದ್ದು, ಏಕಾಏಕಿ ಮತ್ತೊಂದು ಆನೆಯ ಮೇಲೆ ದಾಳಿ ಮಾಡಿದೆ. ನೋಡ ನೋಡುತ್ತಿದ್ದಂತೆ ಎರಡು ಆನೆಗಳು ಕಾದಾಡಲು ಶುರು ಮಾಡುತ್ತವೆ. … Continue reading ನೋಡ ನೋಡುತ್ತಿದ್ದಂತೆ ಕಾದಾಟ್ಟಕ್ಕಿಳಿದ ಆನೆಗಳು; ವಿಡಿಯೋ ವೈರಲ್