ಕುಡಿಯುವ ನೀರಿಗೆ ಅನುದಾನದ ಕೊರತೆಯಿಲ್ಲ, ಸಮಸ್ಯೆ ಇದ್ದ ಕಡೆ ತಕ್ಷಣ ಸ್ಪಂದಿಸಿ

ಚಿಕ್ಕಮಗಳೂರು: ಮುಂಗಾರು, ಹಿಂಗಾರು ಅವಧಿಗೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸರ್ಕಾರ 6 ಕೋಟಿ ರೂ. ಬಿಡುಗಡೆ ಮಾಡಿದ್ದು, ಈಗಾಗಲೇ 5 ಕೋಟಿ ರೂ. ವಿನಿಯೋಗಿಸಲಾಗಿದೆ

ಕುಡಿಯುವ ನೀರಿಗೆ ಅನುದಾನದ ಕೊರತೆಯಿಲ್ಲ. ಸಮಸ್ಯೆ ಇದ್ದ ಕಡೆ ತಕ್ಷಣ ಸ್ಪಂದಿಸಲಾಗುತ್ತಿದೆ ಎಂದು ಸೋಮವಾರ ‘ವಿಜಯವಾಣಿ’ಗೆ ಮಾಹಿತಿ ನೀಡಿದರು.

ಬೇಸಿಗೆ ಬಿಸಿಲು ಹೆಚ್ಚಾಗುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಈ ತಿಂಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಅಗತ್ಯವಿದ್ದಲ್ಲಿ ನೀರಿನ ವ್ಯವಸ್ಥೆ ಮಾಡಲು ಜಿಪಂ ಇಂಜಿನಿಯರ್ ವಿಭಾಗ ಹಾಗೂ ಗ್ರಾಪಂ ಸಿಬ್ಬಂದಿ ಸನ್ನದ್ಧರಾಗಿದ್ದಾರೆ. ಈಗಾಗಲೆ ಜಿಲ್ಲೆಯಲ್ಲಿ ಒಟ್ಟು 66 ಹಳ್ಳಿಗಳಿಗೆ ಟ್ಯಾಂಕರ್ ನೀರು ಒದಗಿಸಲಾಗುತ್ತಿದೆ. ಹಳ್ಳಿಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಕಡೂರು ತಾಲೂಕಿನಲ್ಲಿ 37, ಚಿಕ್ಕಮಗಳೂರು ತಾಲೂಕಿನ 29 ಹಳ್ಳಿಗಳಿಗೆ ಸದ್ಯ ಟ್ಯಾಂಕರ್​ನಲ್ಲಿ ನೀರು ಕೊಡಲಾಗುತ್ತಿದೆ ಎಂದರು.

ಬರಪೀಡಿತ ಕಡೂರಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಈ ತಾಲೂಕಿಗೆ ಮುಂಗಾರಿನಲ್ಲಿ ಒಂದು ಕೋಟಿ, ಈಗ ಮತ್ತೆ 50 ಲಕ್ಷ ರೂ. ಬಿಡುಗಡೆಯಾಗಿದೆ. ಉಳಿದ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೂ ತಲಾ 50 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ನರೇಗಾ ಯೋಜನೆಯಡಿ ರಾಜ್ಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂರನೇ ಸ್ಥಾನದಲ್ಲಿದೆ. ಈ ವರ್ಷ 95 ಸಾವಿರ ಮಾನವ ದಿನ ಸೃಜನೆ ಮಾಡಿ ಕೂಲಿ ಕಾರ್ವಿುಕರಿಗೆ ಕೆಲಸ ನೀಡಲಾಗಿದೆ. ಕೂಲಿ ಕಾರ್ವಿುಕರಿಗೆ 3 ಕೊಟಿ ಮತ್ತು ಸಾಮಗ್ರಿ ಸರಬರಾಜು ಮಾಡಿದ 25 ಕೋಟಿ ರೂ. ಬಾಕಿ ಹಣ ಸರ್ಕಾರದಿಂದ ಬರಬೇಕಿದೆ. ಚುನಾವಣೆ ಸಮಯವಾಗಿದ್ದರಿಂದ ವಿಳಂಬವಾಗಿದೆ. ಮುಂದಿನ ವಾರದಲ್ಲಿ ಬಾಕಿ ಹಣ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದರು.

ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ: ಸ್ವಚ್ಛ ಭಾರತ್ ಯೋಜನೆಯಡಿ ಈ ವರ್ಷ ಶೌಚಗೃಹ ನಿರ್ವಣಕ್ಕಾಗಿ 2 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಈಗಾಗಲೆ 1.75 ಕೋಟಿ ರೂ. ಫಲಾನುಭವಿಗಳ ಖಾತೆಗೆ ನೇರ ಪಾವತಿಯಾಗಿದೆ. ಹೆಚ್ಚುವರಿ ಅನುದಾನ ಕೋರಲಾಗಿದೆ ಎಂದು ಸಿಇಒ ಎಸ್.ಅಶ್ವಥಿ ತಿಳಿಸಿದರು. ಈ ವರ್ಷ ಆರು ಸಾವಿರ ಹೆಚ್ಚುವರಿ ಶೌಚಗೃಹ ನಿರ್ವಿುಸಲು ಗುರಿ ಹೊಂದಲಾಗಿತ್ತು. ಈಗಾಗಲೆ 1 ಸಾವಿರ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ 5 ಸಾವಿರ ಶೌಚಗೃಹ ನಿರ್ವಿುಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಬೇಕಾದ ಅನುದಾನ ಬರಲಿದೆ. ಪರಿಶಿಷ್ಟ ಸಮುದಾಯದವರಿಗೆ 15 ಸಾವಿರ ಹಾಗೂ ಇತರೆ ಸಾಮಾನ್ಯ ವರ್ಗದವರಿಗೆ 12 ಸಾವಿರ ರೂ. ಸಹಾಯಧನ ನೀಡಲಾಗುತ್ತಿದೆ. ಶೌಚಗೃಹ ಇಲ್ಲದ ಕುಟುಂಬಗಳಿದ್ದರೆ, ಅಂಥವರು ಗ್ರಾಪಂನಲ್ಲಿ ಅರ್ಜಿ ಸಲ್ಲಿಸಿದರೆ ನೆರವು ನೀಡಲಾಗುವುದು ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *