ತಪ್ಪಿತಸ್ಥರ ರಕ್ಷಣೆಗೆ ನಿಂತ ಸಿಇಒ?

Latest News

ಲೋಹದ ಹಕ್ಕಿಗಳ ಹಾರಾಟಕ್ಕೆ ಕ್ಷಣಗಣನೆ

ವಾದಿರಾಜ ವ್ಯಾಸಮುದ್ರ ಕಲಬುರಗಿಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎನಿಸಿರುವ ಕಲಬುರಗಿಯಿಂದ ಲೋಹದ ಹಕ್ಕಿಗಳ ಹಾರಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ವಿಮಾನ ನಿಲ್ದಾಣ ಶುರುವಾಗಬೇಕೆಂಬ ದಶಕದ ಕನಸು...

ವಿಮಾನ ನಿಲ್ದಾಣ ಉದ್ಘಾಟನೆಗೆ ಸಜ್ಜು

ಕಲಬುರಗಿ: ಬಹನಿರೀಕ್ಷಿತ ಕಲಬುರಗಿ ವಿಮಾನ ನಿಲ್ದಾಣ ಲೋಕಾರ್ಪಣೆ ಶುಕ್ರವಾರ ನಡೆಯಲಿದ್ದು, ಐತಿಹಾಸಿಕ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಅಗತ್ಯ ಸಿದ್ಧತೆ ಬಹುತೇಕ ಪೂರ್ಣಗೊಂಡಿದ್ದು, ಸಣ್ಣ...

ಏ.10 ರವರೆಗೆ ಎಡದಂಡೆ ನಾಲೆಗೆ ನೀರು

ರೈತರಿಗೆ ಶಾಸಕ ವೆಂಕಟರಾವ್ ನಾಡಗೌಡ ಭರವಸೆ | ಗೊಂದಲ ಮಾಡಿಕೊಳ್ಳಲಿರಲು ಸಲಹೆಸಿಂಧನೂರು: ಮುಂಗಾರು ಮತ್ತು ಬೇಸಿಗೆ ಬೆಳೆಗೆ ನೀರು ಒದಗಿಸಲು ತುಂಗಭದ್ರಾ ಎಡದಂಡೆ...

ಉಪ ಚುನಾವಣೆ ಫಲಿತಾಂಶದ ನಂತರ ನನ್ನ ಲೋಕಸಭಾ ಕ್ಷೇತ್ರದಲ್ಲಿ 3 ಸಚಿವರು ಇರುತ್ತಾರೆ; ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ

ಯಶವಂತಪುರ: ನನ್ನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಏಕೈಕ ಶಾಸಕರಿದ್ದಾರೆ ಎಂಬ ಕೊರಗು ಇತ್ತು. ಉಪ ಚುನಾವಣೆ ನಂತರ ಶಾಸಕರ ಸಂಖ್ಯೆ ಹೆಚ್ಚಿ ಕೊರಗು...

ಗಲಗ ಶ್ರೀಚನ್ನಬಸವೇಶ್ವರ ಜಾತ್ರೆಗೆ ಚಾಲನೆ, ಉಸುಕಿನ ಚೀಲ, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಇಂದು

ಗಲಗ ಶ್ರೀಚನ್ನಬಸವೇಶ್ವರ ಜಾತ್ರೆಗೆ ಚಾಲನೆ, ಉಸುಕಿನ ಚೀಲ, ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆ ಇಂದುದೇವದುರ್ಗ ಗ್ರಾಮೀಣ: ತಾಲೂಕಿನ ಆರಾಧ್ಯ ದೈವ ಗಲಗ ಆರೂಢ...

ಹಾವೇರಿ: ಜಿಪಂ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಅಧೀನದಲ್ಲಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಪೈಪ್​ಗಳ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದ್ದು, ಪೈಪ್​ಗಳು ಕಳ್ಳತನವಾಗಿಲ್ಲ, ಅನಧಿಕೃತ ಎತ್ತುವಳಿಯಾಗಿವೆಯಂತೆ…!

ಈ ಕುರಿತು ಜಿಪಂ ಸಿಇಒ ಕೆ. ಲೀಲಾವತಿ ಆರ್​ಡಿಡಬ್ಲ್ಯುಎಸ್ ಆಯುಕ್ತರಿಗೆ ಸಲ್ಲಿಸಿರುವ ಪರಿಶೀಲನಾ ವರದಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ಪ್ರಕರಣದಲ್ಲಿ ಪ್ರಮುಖವಾಗಿ ತಪ್ಪು ಮಾಡಿದ ಅಧಿಕಾರಿಯೊಬ್ಬರನ್ನು ರಕ್ಷಿಸಿ ಪೂರ್ಣ ಪ್ರಮಾಣದಲ್ಲಿ ಭಾಗಿಯಾಗದೇ ಇದ್ದ ಅಧಿಕಾರಿಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ವರದಿಯಲ್ಲೇನಿದೆ: ಆರ್​ಡಿಡಬ್ಲ್ಯುಎಸ್ ಆಯುಕ್ತರ ಆಯುಕ್ತರ ಸೂಚನೆಯಂತೆ ಸಿಇಒ ಒಂದು ತಂಡ ರಚಿಸಿ ಜೂ. 18ರಂದು ವರದಿ ಸಲ್ಲಿಸಿದ್ದಾರೆ. ಪೈಪ್​ಗಳು ಆರ್​ಡಿಡಬ್ಲ್ಯುಎಸ್ ಕಚೇರಿಯ ಆವರಣದಿಂದ ಅನಧಿಕೃತವಾಗಿ ಎತ್ತುವಳಿಯಾಗಲು ಮುಖ್ಯ ಕಾರಣ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಟಾಸ್ಕ್​ಪೋರ್ಸ್ ಸಮಿತಿ ಸಭೆಯಲ್ಲಿನ ತೀರ್ವನ. ಸಭೆಯಲ್ಲಿ ಸೋಮನಕಟ್ಟಿ ಶಿಬಾರದ ಕೆನಾಲ್​ನಿಂದ ಕನವಳ್ಳಿ ಗ್ರಾಮದ ಕರೆಗೆ ಕುಡಿಯುವ ನೀರಿನ ಪೈಪ್​ಲೈನ್ ಮಾಡಲು ಆರ್​ಡಿಡಬ್ಲ್ಯುಎಸ್ ಕಚೇರಿ ಆವರಣದಲ್ಲಿ ಸ್ಟಾಕ್​ಯಿುರುವ ಪೈಪ್​ಗಳನ್ನು ಉಪಯೋಗಿಸಿಕೊಳ್ಳಲು ಹಾಗೂ ಈ ಕಾಮಗಾರಿಗೆ ಪ್ರಕೃತಿ ವಿಕೋಪ ಅನುದಾನದಲ್ಲಿ ಅನುಮೋದನೆಗೂ ತೀರ್ವನಿಸಲಾಗಿತ್ತು. ಅಲ್ಲದೆ, ಗ್ರಾಪಂ ಪಿಡಿಒ, ಆರ್​ಡಿಡಬ್ಲ್ಯುಎಸ್ ಹಾವೇರಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್​ಗೆ ತುರ್ತು ಕ್ರಮ ವಹಿಸುವಂತೆ ಸೂಚಿಸಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಅಂದಿನ ಸಭೆಯಲ್ಲಿದ್ದ ಯಾವೊಬ್ಬ ಅಧಿಕಾರಿಗಳೂ ಕೆನಾಲ್​ನಿಂದ ನೀರು ತರಲು ಅನುಮತಿ ಸಿಗುವುದಿಲ್ಲ. ಸ್ಟಾಕ್ ಇರುವ ಪೈಪ್​ಗಳನ್ನು ಬಳಕೆ ಮಾಡಲು ಬರುವುದಿಲ್ಲ ಎಂಬ ವಿಷಯವನ್ನು ಸಭೆಯ ಗಮನಕ್ಕೆ ತಂದಿಲ್ಲ ಎನ್ನಲಾಗಿದೆ.

ತಪ್ಪು ಮಾಡಿದ ಹುಲ್ಲೂರ ರಕ್ಷಣೆ…?:ಟಾಸ್ಕ್​ಪೋರ್ಸ್ ಸಮಿತಿಯಲ್ಲಿ ನಿರ್ಣಯವಾದರೂ ಪೈಪ್​ಗಳನ್ನು ಕೊಡಲು ಬರುವುದಿಲ್ಲ ಎಂಬ ಸತ್ಯ ಸಭೆಯಲ್ಲಿದ್ದ ಆರ್​ಡಿಡಬ್ಲ್ಯುಎಸ್ ಹಾವೇರಿ ಉಪವಿಭಾಗದ ಇಂಜಿನಿಯರ್​ಗೆ ಗೊತ್ತಿತ್ತು. ಹೀಗಾಗಿ ಇದರಲ್ಲಿ ಅಧಿಕಾರಿಗಳು ಹಾಗೂ ಕಾಣದ ಕೈಗಳು ಸೇರಿ ನೀರಿನ ಸಮಸ್ಯೆಯಿಂದ ಪರಿತಪಿಸುತ್ತಿದ್ದ ಗ್ರಾಮಸ್ಥರಿಂದ ಪೈಪ್​ಗಳನ್ನು ಜೂ. 6ರಂದು ರಾತ್ರಿ ಎತ್ತುವಳಿ ಮಾಡಿಸಿದ್ದಾರೆ. ಅಲ್ಲದೆ, ಅದೇ ದಿನ ಇಂಜಿನಿಯರ್ ವಿನಾಯಕ ಹುಲ್ಲೂರ ರಜೆ ಮೇಲೆ ತೆರಳಿದ್ದಾರೆ. ಅವರ ಸೂಚನೆಯಂತೆ ಪೈಪ್​ಗಳನ್ನು ಒಯ್ದಿದ್ದೇವೆ ಎಂದು ಗ್ರಾಮಸ್ಥರು ಹೇಳಿರುವುದರಿಂದ ವಿನಾಯಕ ಹುಲ್ಲೂರ ಅವರ ಅಣತಿಯಿಲ್ಲದೇ ಪೈಪ್​ಗಳು ಹೋಗಲು ಸಾಧ್ಯವೇ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೆ ಸಿಇಒ, ತಮ್ಮ ವರದಿಯಲ್ಲಿ ಅವರ ಹೆಸರನ್ನು ಎಲ್ಲಿಯೂ ನಮೂದಿಸಿಲ್ಲ. ಅಲ್ಲದೆ, ಇದೇ ಸಮಯದಲ್ಲಿ ಹುಲ್ಲೂರ ಅವರನ್ನು ಸಹಾಯಕ ಅಭಿಯಂತರ ಹುದ್ದೆಯಿಂದ ಕಾರ್ಯನಿರ್ವಾಹಕ ಹುದ್ದೆಗೆ ಪ್ರಭಾರಿಯಾಗಿ ನಿಯೋಜಿಸಲಾಗಿದೆ. ಇದು ಸಿಇಒ ಅವರ ಕಾರ್ಯವೈಖರಿ ಬಗೆಗೆ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಸಿಇಒ ಅವರು ವಾಸ್ತವತೆಯನ್ನು ಮರೆಮಾಚಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ವರದಿಯಲ್ಲಿ ಮಾಡಿದ್ದಾರೆ. ಮುಖ್ಯ ತಪ್ಪಿತಸ್ಥರನ್ನು ರಕ್ಷಿಸಲಾಗಿದೆ. ತಪ್ಪು ಮಾಡಿದವರು ಯಾರು ಎಂಬುದನ್ನು ಸ್ಪಷ್ಟವಾಗಿ ನಮೂದಿಸಿಲ್ಲ. ಪ್ರಮುಖ ತಪ್ಪಿತಸ್ಥ ವಿನಾಯಕ ಹುಲ್ಲೂರ ಅವರೇ ಇದಕ್ಕೆ ಪೂರ್ಣ ಹೊಣೆಗಾರರು. ಅವರ ಹೆಸರು ಕೈಬಿಡಲಾಗಿದೆ. ಇವರೇ ಪೈಪ್​ಗಳನ್ನು ಕೊಟ್ಟಿದ್ದಾರೆ. ಇದರಲ್ಲಿ ಗ್ರಾಮಸ್ಥರದೂ ತಪ್ಪಿಲ್ಲ. ಪೈಪ್​ಗಳನ್ನು ಮರಳಿ ತರಲು ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಯವರಿಗೆ ಅಗತ್ಯ ನಿರ್ದೇಶನ ನೀಡುವ ಕುರಿತು ಕೋರಿದ್ದಾರೆ. ತಪ್ಪಿಸ್ಥರ ವಿರುದ್ಧ ಕ್ರಮ ಆಗುವವರೆಗೂ ನಾವು ಬಿಡುವುದಿಲ್ಲ.
| ಕೊಟ್ರೇಶಪ್ಪ ಬಸೇಗಣ್ಣಿ, ಜಿಪಂ ಮಾಜಿ ಅಧ್ಯಕ್ಷ

- Advertisement -

Stay connected

278,670FansLike
576FollowersFollow
612,000SubscribersSubscribe

ವಿಡಿಯೋ ನ್ಯೂಸ್

ಪಿಂಕ್​ ಬಾಲ್​ ಟೆಸ್ಟ್​: ಐತಿಹಾಸಿಕ ಪಂದ್ಯದಲ್ಲಿ ಟಾಸ್​ ಗೆದ್ದು ಸಂಭ್ರಮಿಸಿದ...

ಕೋಲ್ಕತ: ಐತಿಹಾಸಿಕ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದ್ದು, ಟಾಸ್​ ಗೆದ್ದ ಬಾಂಗ್ಲಾದೇಶ ಭಾರತದ ವಿರುದ್ಧ ಬ್ಯಾಟಿಂಗ್​ ಆಯ್ದುಕೊಳ್ಳುವ ಮೂಲಕ ಚೊಚ್ಚಲ ಹಗಲು-ಇರುಳು ಪಂದ್ಯದಲ್ಲೇ ಟಾಸ್​ ಗೆದ್ದು...

VIDEO| ಡಿಆರ್​ಐ ಅಧಿಕಾರಿಗಳ ದಾಳಿ ವೇಳೆ 6ನೇ ಮಹಡಿಯಿಂದ ಕೆಳಗೆ...

ಕೋಲ್ಕತ: ಪಶ್ಚಿಮ ಬಂಗಾಳದ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್​ಐ) ಅಧಿಕಾರಿಗಳು ಬುಧವಾರ ಮಧ್ಯಾಹ್ನ ಕೇಂದ್ರ ಕೋಲ್ಕತದ ಬೆಂಟಿಂಕ್ ಸ್ಟ್ರೀಟ್​ನಲ್ಲಿನ ಖಾಸಗಿ ಕಚೇರಿಯೊಂದಕ್ಕೆ ದಾಳಿ ನಡೆಸಿದ್ದ ವೇಳೆ ಕಟ್ಟಡದ ಆರನೇ ಮಹಡಿಯಿಂದ ನೋಟಿನ...

VIDEO| ಹಾಡುಗಳ ಮೂಲಕವೇ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರದ...

ಬೆಂಗಳೂರು: ಪೋಸ್ಟರ್ ಮತ್ತು ಹಾಡುಗಳ ಮೂಲಕ ನಿರೀಕ್ಷೆ ಮೂಡಿಸಿದ್ದ ‘ಮುಂದಿನ ನಿಲ್ದಾಣ’ ಚಿತ್ರತಂಡ ಇತ್ತೀಚೆಗಷ್ಟೇ ಟ್ರೇಲರ್ ಬಿಡುಗಡೆ ಮಾಡಿಕೊಂಡಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ದತ್ತಣ್ಣ, ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯಾ...

VIDEO: ಶವಪೆಟ್ಟಿಗೆಯಿಂದ ಎದ್ದುಕುಳಿತ ಮದುಮಗಳು; ಇದು ಮದುವೆನಾ, ಅಂತಿಮ ಸಂಸ್ಕಾರನಾ...

ಈ ಜಗತ್ತಿನಲ್ಲಿ ಎಂತೆಂತಾ ವಿಚಿತ್ರ ವ್ಯಕ್ತಿಗಳು ಇರುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಇಲ್ಲೊಬ್ಬಳು ಮದುಮಗಳು ತನ್ನ ವಿಶಿಷ್ಟ ನಡೆಯಿಂದ ಸುದ್ದಿಯಾಗಿದ್ದಾಳೆ. ಮದುವೆ ಪ್ರತಿ ವ್ಯಕ್ತಿಯ ಜೀವನದಲ್ಲಿ ವಿಶೇಷ ಸಂದರ್ಭ. ನಾವು ಹೀಗೇ ವಿವಾಹವಾಗಬೇಕು ಎಂದು...

VIDEO: ಮೃತ ವ್ಯಕ್ತಿಯ ಶ್ವಾಸಕೋಶವನ್ನು ಬೇರೊಬ್ಬರಿಗೆ ಕಸಿ ಮಾಡಲು ಹೊರತೆಗೆದ...

ಬೀಜಿಂಗ್​: ಧೂಮಪಾನ ಆರೋಗ್ಯಕ್ಕೆ ಹಾನಿಕರ ಎಂದು ಅದರ ಪ್ಯಾಕೆಟ್​ ಮೇಲೆಯೇ ಬರೆದಿರುತ್ತದೆ. ಧೂಮಪಾನದಿಂದ ಶ್ವಾಸಕೋಶಗಳು ಕಪ್ಪಾಗುತ್ತವೆ ಎಂಬುದನ್ನೂ ವೈದ್ಯ ಲೋಕ ಸಾಬೀತು ಪಡಿಸಿದೆ. ಅದನ್ನು ನೋಡಿ ಕೂಡ ಅನೇಕರು ಸ್ಮೋಕ್​ ಮಾಡುವುದನ್ನು ಮುಂದುವರಿಸುತ್ತಾರೆ....

VIDEO: ಹೆಬ್ಬಾವು-ಚಿರತೆ ನಡುವಿನ ಈ ಭಯಾನಕ ಕಾಳಗ ನೋಡಿದರೆ ಮೈನವಿರೇಳದೆ...

ಕೀನ್ಯಾ: ಹಾವು-ಮುಂಗುಸಿ, ಬೆಕ್ಕು-ಹಾವು, ಎರಡು ಹುಲಿಗಳ ನಡುವಿನ ಕಾದಾಟದ ವಿಡಿಯೋಗಳನ್ನು ನೋಡಿದ್ದೇವೆ. ಇಂತಹ ವಿಡಿಯೋಗಳು ನೋಡೋದಕ್ಕೆ ಸಿಕ್ಕಾಪಟೆ ರೋಚಕವಾಗಿರುತ್ತವೆ ಕೂಡ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದ್ದು ಅದನ್ನು ನೋಡಿದರೆ ಮೈನವಿರೇಳದೆ...