ನವದೆಹಲಿ: ಆರ್ಡರ್ ತೆಗೆದುಕೊಳ್ಳಲು ಬಂದ ಜೊಮ್ಯಾಟೋ ಡೆಲಿವರಿ ಏಜೆಂಟ್ ಕುರಿತು ಸ್ಟಾರ್‌ಬಕ್ಸ್ ಉದ್ಯೋಗಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ನವದೆಹಲಿಯ ಖಾನ್ ಮಾರ್ಕೆಟ್‌ನಲ್ಲಿರುವ ಸ್ಟಾರ್‌ಬಕ್ಸ್ ಸ್ಟೋರ್ ಮ್ಯಾನೇಜರ್ ದೇವೇಂದ್ರ ಮೆಹ್ರಾ ಅವರು ಈ ಪೋಸ್ಟ್ ಹಂಚಿಕೊಂಡು, ಡೆಲಿವರಿ ಏಜೆಂಟ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಜೊಮ್ಯಾಟೋ ಡೆಲಿವರಿ ಏಜೆಂಟ್ ಸೋನು ತನ್ನ ಎರಡು ವರ್ಷದ ಮಗಳೊಂದಿಗೆ ಆರ್ಡರ್ ತೆಗೆದುಕೊಳ್ಳಲು ನಮ್ಮ ಅಂಗಡಿಗೆ ಬಂದರು. ಸೋನು ನಿಯಮಿತವಾಗಿ ತನ್ನ ಮಗಳೊಂದಿಗೆ ಕೆಲಸಕ್ಕೆ ಹಾಜರಾಗುತ್ತಾರೆ. ಸಿಂಗಲ್ ಪೇರೆಂಟ್ ಆಗಿರುವ ಸೋನು, ಮನೆಯ ಕಷ್ಟಗಳನ್ನು ಲೆಕ್ಕಿಸದೇ ಹಗಲಿರುಳು ಕಷ್ಟಪಟ್ಟು ದುಡಿಯುತ್ತಾರೆ. ಸೋನು ಅವರಿಗೆ ತಮ್ಮ ಮಗಳ ಮೇಲಿರುವ ಬದ್ಧತೆ ಮತ್ತು ಕಾಳಜಿ ಇತರರಿಗೆ ಸ್ಫೂರ್ತಿಯಾಗಿದೆ ಎಂದು ದೇವೇಂದ್ರ ಅವರು ಹೇಳಿದ್ದಾರೆ.
ಕಷ್ಟಗಳ ನಡುವೆಯೂ ಹುರುಪಿನಿಂದ ಮುನ್ನಡೆಯುವ ವ್ಯಕ್ತಿಯಾಗಿ ಸೋನು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು ಬರೆದು ಮಗಳ ಜೊತೆ ಸೋನು ಇರುವ ಫೋಟೋವನ್ನು ದೇವೇಂದ್ರ ಅವರು ತಮ್ಮ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜೊಮ್ಯಾಟೋ ಕೂಡ ದೇವೇಂದ್ರ ಅವರ ಪೋಸ್ಟ್ ಕೆಳಗೆ ಕಾಮೆಂಟ್ ಮಾಡಿದ್ದು, ಸೋನು ಅವರಿಗೆ ನಾವು ನಿಮ್ಮ ಅಭಿನಂದನೆಗಳನ್ನು ತಿಳಿಸುತ್ತೇವೆ ಮತ್ತು ಅವರಂತಹ ಕೆಲಸಗಾರರು ಕೆಲಸದಲ್ಲಿ ತೋರಿದ ಪ್ರಾಮಾಣಿಕತೆಗೆ ನಿಜಕ್ಕೂ ಶ್ಲಾಘನೀಯ ಎಂದು ಕಾಮೆಂಟ್ ಮಾಡಿದ್ದಾರೆ.
ಕೇವಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರೆ ಸಾಲದು, ಕಾರ್ಮಿಕರ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಜೊಮ್ಯಾಟೋ ಸಹಾಯ ಮಾಡಬೇಕು ಎಂದು ಕೆಲ ನೆಟ್ಟಿಗರು ಆಗ್ರಹಿಸಿದ್ದಾರೆ. (ಏಜೆನ್ಸೀಸ್)
ಮತ್ತೆ ಮುಖ್ಯ ಕೋಚ್ ಆಗಿ ಈ IPL ಟೀಮ್ ಸೇರಿಕೊಳ್ಳಲಿದ್ದಾರೆ ರಾಹುಲ್ ದ್ರಾವಿಡ್!
ನಮ್ಮತ್ರ ಇದೆಲ್ಲ ನಡೆಯಲ್ಲ… ಟ್ರೋಫಿ ಜತೆ ಮಲಗಿ ಭಾರತಕ್ಕೆ ವಾರ್ನಿಂಗ್ ಕೊಟ್ರಾ ಬಾಂಗ್ಲಾ ಕ್ಯಾಪ್ಟನ್?