VIDEO| ಅಪ್ಪನ ಆಟಕ್ಕೆ ಮನಸೋತು ಎದ್ದು ನಿಂತು ಚಿಯರ್​ ಅಪ್​ ಮಾಡಿದ ಮಗಳು!

ನವದೆಹಲಿ: ಕೂಲ್​ ಕ್ಯಾಪ್ಟನ್​ ಖ್ಯಾತಿಯ ಎಂ.ಎಸ್​.ಧೋನಿ ಅವರ ಆಟಕ್ಕೆ ಮನಸೋಲದವರಿಲ್ಲ. ಇದೀಗ ಅವರ ಪುತ್ರಿ ಜೀವಾ ಕೂಡ ಅಪ್ಪನ ಆಟಕ್ಕೆ ಮನಸೋತು ಪ್ರೇಕ್ಷಕರ ಗ್ಯಾಲರಿಯಲ್ಲಿ ಎದ್ದು ನಿಂತು ಚಿಯರ್​ ಅಪ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮಂಗಳವಾರ ಫಿರೋಜ್​ ಷಾ ಕೋಟ್ಲಾ ಮೈದಾನದಲ್ಲಿ ಚೆನ್ನೈ ಸೂಪರ್​ ಕಿಂಗ್​​ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಡುವೆ ನಡೆದ ಐಪಿಎಲ್​ ಪಂದ್ಯಾವಳಿ ವೇಳೆ ಈ ಘಟನೆ ನೆಡೆದಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಡೆಲ್ಲಿ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 147 ರನ್​ ಗುರಿ ನೀಡಿತ್ತು. ಇದರ ಬೆನ್ನತ್ತಿ ಹೊರಟ ಚೆನ್ನೈ ತಂಡ 19.4 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 150 ಗಳಿಸಿ ಗುರಿ ಮುಟ್ಟಿತು. ಆಟದ ನಡುವೆ ಅಪ್ಪನ ಆಟಕ್ಕೆ ಮನಸೋತು ಜೀವಾ ‘ಗೋ ಪಪ್ಪಾ’ ಎಂದು ಚಿಯರ್​ ಅಪ್​ ಮಾಡಿದ್ದು ವಿಶೇಷವಾಗಿತ್ತು. ಮಗಳ ಜತೆಗೆ ಪತ್ನಿ ಸಾಕ್ಷಿ ಕೂಡ ಧೋನಿಗೆ ಸಾಥ್​ ನೀಡಿದರು.

ಇದಕ್ಕೆ ಸಂಬಂಧಿಸಿ ವಿಡಿಯೋವನ್ನು ಚೆನ್ನೈ ಸೂಪರ್​ ಕಿಂಗ್ಸ್ ತಂಡದ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚಗೆ ಸುರಿಮಳೆ ಹರಿದುಬರುತ್ತಿದೆ. (ಏಜೆನ್ಸೀಸ್​)