ಜೀ ಕನ್ನಡ ವಾಹಿನಿಗೆ ಹೊಸ ಸ್ಪರ್ಶ

ಬೆಂಗಳೂರು: ಕರ್ನಾಟಕದಲ್ಲಿ ಮುಂಚೂಣಿಯಲ್ಲಿರುವ ಮನರಂಜನಾ ವಾಹಿನಿಗಳಲ್ಲೊಂದಾದ ಜೀ ಕನ್ನಡ ವಾಹಿನಿಯ ಹೊಸ ಬ್ರಾ್ಯಂಡ್ ಗುರುತು ಹಾಗೂ ಎಚ್​ಡಿ ವಾಹಿನಿಗೆ ಇತ್ತೀಚೆಗೆ ನಡೆದ ‘ಜೀ ಕುಟುಂಬ ಅವಾರ್ಡ್ಸ್ 2018’ ಕಾರ್ಯಕ್ರಮದಲ್ಲಿ ನಟ ಯಶ್ ಚಾಲನೆ ನೀಡಿದ್ದಾರೆ.

ಗ್ರಾಹಕರ ಭಾವನೆ ಮೇಲೆ, ವೀಕ್ಷಕರಿಗೆ ಅವರ ಮನಸ್ಸಿನ ಮಿತಿ ಮೀರಿ, ಆಂತರಿಕ ಕಿಡಿ ಹೊತ್ತಿಸಲು, ಹೊಸ ಸಾಧ್ಯತೆಗಳ ಬಾಗಿಲು ತೆರೆಯುವ ಉದ್ದೇಶ ವಾಹಿನಿಯದ್ದಾಗಿದೆ. ‘ಬಯಸಿದ ಬಾಗಿಲು ತೆಗೆಯೋಣ’ ಎಂಬ ಧ್ಯೇಯವಾಕ್ಯದೊಂದಿಗೆ ಹೊಸತನದಲ್ಲಿ ವಾಹಿನಿ ಇನ್ನುಮುಂದೆ ಮೂಡಿಬರಲಿದೆ. ಜೀ ಕನ್ನಡ ವಾಹಿನಿ ಹೊಚ್ಚಹೊಸ ಲಾಂಛನದೊಂದಿಗೆ ಪ್ರಸಾರವಾಗಲಿದೆ. ‘ದಿಟ್ಟ ಹಾಗೂ ದೃಢ ವಿಶ್ವಾಸದ ಪಾತ್ರಗಳು ವಾಹಿನಿಯ ಹೊಸ  ಬ್ರ್ಯಾಂಡ್​ ಗುರುತನ್ನು ಪ್ರತಿಧ್ವನಿಸುತ್ತವೆ. ಹೊಸ ಶೋಗಳನ್ನು, ವಾರಾಂತ್ಯದ ಪ್ರೈಮ್ ಟೈಮ್ ಕಾರ್ಯಕ್ರಮಗಳನ್ನು ವೀಕ್ಷಣೆಯ ಅನುಭವವನ್ನು ಎತ್ತರಕ್ಕೇರಿಸುವ ಉದ್ದೇಶ ನಮ್ಮದು. ‘ಪಾರು’ ಧಾರಾವಾಹಿ ಈ ವರ್ಷ ವಾಹಿನಿಗೆ ಸೇರ್ಪಡೆಯಾಗಲಿದೆ. ಈ ಮುಂದಿನ ಪ್ರಯಾಣ ಅತ್ಯಂತ ಉತ್ಸಾಹ ಹಾಗೂ ಸ್ಪೂರ್ತಿದಾಯಕವಾಗಿರುತ್ತದೆ’ ಎಂದು ಜೀ ವಾಹಿನಿ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು ತಿಳಿಸಿದ್ದಾರೆ.