More

  ಹಾಸ್ಯ ದಿಗ್ಗಜರಿಗೆ ಜೀ ಸನ್ಮಾನ

  ಬೆಂಗಳೂರು: ವೀಕ್ಷಕರಿಗೆ ಸದಭಿರುಚಿಯ ಕಾರ್ಯಕ್ರಮ ನೀಡುತ್ತ ಬಂದಿರುವ ಜೀ ಕನ್ನಡ ವಾಹಿನಿ ಈ ಬಾರಿ ಮತ್ತೊಂದು ವಿನೂತನ ಪ್ರಯತ್ನ ಮಾಡಿದೆ. ಆ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕಿರುತೆರೆ-ಹಿರಿತೆರೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳು, ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆಯುತ್ತವೆ.

  ಅದಾಗ್ಯೂ ಹಾಸ್ಯ ಕಲಾವಿದರಿಗಾಗಿ ಪ್ರತ್ಯೇಕ ಅಭಿನಂದನಾ ವೇದಿಕೆ ನಿರ್ವಣವಾಗಿರಲಿಲ್ಲ. ಆದರೆ ಜೀ ಕನ್ನಡ ವಾಹಿನಿ ಈ ಕಾರ್ಯ ಮಾಡಿತೋರಿಸಿದೆ. 2019ರಲ್ಲಿ ಬಿಡುಗಡೆ ಆಗಿ ಪ್ರೇಕ್ಷಕರನ್ನು ರಂಜಿಸಿದ ಹಾಸ್ಯಚಿತ್ರಗಳಿಗೆ ಹಾಗೂ ಅವುಗಳಲ್ಲಿ ಅಭಿನಯಿಸಿದ ಹಾಸ್ಯ ಕಲಾವಿದರಿಗೆ ಅಭಿನಂದನೆ ಸಲ್ಲಿಸಲು ಜೀ ಕನ್ನಡ ವಾಹಿನಿಯು ‘ಜೀ ಕನ್ನಡ ಕಾಮಿಡಿ ಅವಾರ್ಡ್ಸ್ 2020’ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಹಾಸ್ಯ ದಿಗ್ಗಜರನ್ನು ಸನ್ಮಾನಿಸಿ ಗೌರವಿಸಿತು. ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತುಂಬಿದ್ದು ‘ಕಾಮಿಡಿ ಕಿಲಾಡಿಗಳು ಸೀಸನ್ 1’, ‘ಸೀಸನ್ 2’, ‘ಸೀಸನ್ 3’ ಹಾಗೂ ‘ಡ್ರಾಮಾ ಜೂನಿಯರ್ಸ್’, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಫ್ಯಾಮಿಲಿ ವಾರ್’ ಸ್ಪರ್ಧಿಗಳು. ಡಾನ್ಸ್ ಮತ್ತು ಮನರಂಜನೆ ಮೂಲಕ ನೆರೆದಿದ್ದ ವರನ್ನು ರಂಜಿಸಿದರು.

  ಜೀ ಕನ್ನಡ ವಾಹಿನಿಯ ಈ ಪ್ರಯತ್ನಕ್ಕೆ ನಿರೀಕ್ಷೆಗೂ ಮೀರಿದ ಬೆಂಬಲ ದೊರೆಯಿತು. ಕನ್ನಡ ಚಿತ್ರರಂಗದ, ಕಿರುತೆರೆಯ ಕಲಾವಿದರೆಲ್ಲ ಒಂದೇ ಸೂರಿನಡಿ ಸೇರಿ ಹಬ್ಬದ ವಾತಾವರಣ ಸೃಷ್ಟಿಸಿ ಕಾರ್ಯಕ್ರಮದ ಘನತೆ ಹೆಚ್ಚಿಸಿದರು. ನಟ, ನಿರೂಪಕ ಮಾಸ್ಟರ್ ಆನಂದ್ ಕಾರ್ಯಕ್ರಮ ನಡೆಸಿಕೊಟ್ಟರು. ಹಾಸ್ಯ ದಿಗ್ಗಜರನ್ನು ಗೌರವಿಸಿದ ‘ಜೀ ಕನ್ನಡ ಕಾಮಿಡಿ ಅವಾರ್ಡ್ಸ್ 2020’ ಕಾರ್ಯಕ್ರಮ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts